ಮಲಯಾಳ ಸಾಹಿತ್ಯ
ಕೆಲವು ಶಾಸನಗಳ ಹಾಗೂ ಜನಪದ ಕೃತಿಗಳ ಆಧಾರಗಳಿಂದ ಸುಮಾರು 10 ಅಥವಾ 11ನೆಯ ಶತಮಾನದಿಂದ ಈ ಸಾಹಿತ್ಯ ಪ್ರಾರಂಭವಾಗಿದೆ ಎಂದು ಊಹಿಸಬಹುದು. ಈ ಸಾಹಿತ್ಯ ರಚನೆಯ ಕಾಲವನ್ನು ಸ್ಥೂಲವಾಗಿ ಹೀಗೆ ವರ್ಗಿಕರಿಸಬಹುದು.

ಪ್ರಾಚೀನಕಾಲ	: ಆರಂಭದಿಂದ 15ನೆಯ ಶತಮಾನದ ತನಕ

ನವೋದಯಕಾಲ	: 15ನೆಯ ಶತಮಾನದಿಂದ 19ನೆಯ ಶತಮಾನದ ತನಕ

ಆಧುನಿಕಕಾಲ	: 19ನೆಯ ಶತಮಾನದಿಂದೀಚೆಗೆ

ಪ್ರಾಚೀನಕಾಲದ ಸಾಹಿತ್ಯದಲ್ಲಿ ಮೂರು ಅವಸ್ಥೆಗಳನ್ನು ಕಾಣುತ್ತೇವೆ : 1. ಜನಪದ ಸಾಹಿತ್ಯ ಅಥವಾ ಪಚ್ಚ ಮಲಯಾಳಂ 2. ತಮಿಳು ಪ್ರಭಾವದ ಪಾಟ್ಟು ಸಾಹಿತ್ಯ : 3. ಸಂಸ್ಕøತ ಪ್ರಭಾವದ ಮಣಿಪ್ರವಾಳ ಸಾಹಿತ್ಯ.

1 ಜನಪದ ಸಾಹಿತ್ಯ : ಇದನ್ನು ಪಚ್ಚ ಮಲಯಾಳ ಸಾಹಿತ್ಯಯುಗವೆಂದು ಕರೆಯಲಾಗಿದೆ. ಪಚ್ಚ ಎಂದರೆ ಹಸುರು, ಹಸಿ, ಬೆರಕೆಯಿಲ್ಲದ್ದು ಎಂದರ್ಥ. ಎಲ್ಲ ಭಾಷೆಗಳಲ್ಲಿರುವಂತೆ ಮಲಯಾಳದಲ್ಲಿಯೂ ಜನಪದ ಸಾಹಿತ್ಯ ವೈವಿಧ್ಯಪೂರ್ಣವಾಗಿದೆ. ಜನಸಾಮಾನ್ಯರು ತಮ್ಮ ಆಶಯಗಳನ್ನು ವ್ಯಕ್ತಪಡಿಸಲು ರಚಿಸಿದ ಹಾಡುಗಳಿಂದ ಅಂದಿನ ಆಚಾರ ವಿಚಾರ, ಮೂಢನಂಬಿಕೆ, ಹಬ್ಬ ಇತ್ಯಾದಿಗಳ ಪರಿಚಯವಾಗುತ್ತದೆ. ಇಂಥ ಹಾಡುಗಳಲ್ಲಿ ಮುಖ್ಯವಾದವು ಜೋಗುಳದ ಹಾಡು. ಶೋಕಗೀತೆ, ಲಾವಣಿ, ಗಾದೆ ಮತ್ತು ಒಗಟು. ಜೋಗುಳದ ಹಾಡುಗಳಿಗೆ ತಾರಾಟ್ಟು ಪಾಟ್ಟುಗಳ್ ಎಂದು ಹೆಸರು. ಮದುವೆಯ ಹಾಡುಗಳಲ್ಲಿ ತಾಲಿಕೆಟ್ಟು ಪಾಟ್ಟುಗಳ್ ಧಾರ್ಮಿಕ ಹಾಡುಗಳಲ್ಲಿ ಸರ್ಪಪಾಟ್ಟು ಮುಖ್ಯವಾದವು. ಧಾರ್ಮಿಕ ಹಾಡುಗಳಲ್ಲಿ ಕಳಂಪಾಟ್ಟು, ಭದ್ರಕಾಳಿಪಾಟ್ಟು, ಶಾಸ್ತಾಂಪಾಟ್ಟು (ಅಯ್ಯಪ್ಪನಹಾಡು), ಪೂರಕ್ಕಳಿಪಾಟ್ಟು (ಪೂರ- ಪುಬ್ಬ ನಕ್ಷತ್ರ), ಮಣ್ಣಾರ್ ಪಾಟ್ಟು, ವೇಲನ್ ಪಾಟ್ಟು, ಪಾಣರ್ ಪಾಟ್ಟು, ಕು¾ವರ್ ಪಾಟ್ಟು  ಮುಂತಾದವು ಇವೆ. ಪುಳ್ಳುವರ್ ಪಾಟ್ಟು ನಾಗಾರಾಧನೆಗೆ ಸಂಬಂಧಿಸಿದ್ದು. ವೇಲನ್ ಪಾಟ್ಟು ಭೂತಪ್ರೇತಗಳಿಂದ ಪೀಡಿತರಾದ ಸ್ತ್ರೀಯರನ್ನು ಗುಣಪಡಿಸುವ ಹಾಡು. ಪಾಣರ್‍ಪಾಟ್ಟನ್ನು ತುಯಿಲ್‍ಉಣುತ್ರ್ತುವ ಎಂದು ಕರೆಯುತ್ತಾರೆ. ತುಯಿಲ್ ಎಂದರೆ ನಿದ್ದೆ. ಉಣತ್ರ್ತು ಎಂದರೆ ಎಬ್ಬಿಸು ಎಂದರ್ಥ. ಕುಟುಂಬದ ಶ್ರೇಯಸ್ಸು ಕೋರುವ ಈ ಹಾಡುಗಳನ್ನು ಕರ್ಕಾಟಕ ಮಾಸದಲ್ಲಿ ಮಧ್ಯರಾತ್ರಿಯ ಅನಂತರ ಒಂದೊಂದು ಮನೆಯ ಮುಂದೆಯೂ ಹಾಡುತ್ತಾರೆ.

ಪೌರಾಣಿಕ ಗೀತೆಗಳಲ್ಲಿ ಕು¾ವರ್‍ಪಾಟ್ಟು ಮುಖ್ಯವಾದದ್ದು. ಕು¾ವರಹಾಡುಗಳಲ್ಲಿ ನಿ¿ಲ್‍ಕುತ್ತುಪಾಟ್ಟು  ಪ್ರಸಿದ್ಧವಾದುದು. ನಿ¿ಲ್ ಎಂದರೆ ನೆರಳು. ಕುತ್ತು ಎಂದರೆ ಹೊಡೆತ. ಮಹಾಭಾರತದ ಕಥೆಯನ್ನು ಇಲ್ಲಿ ಗ್ರಾಮೀಣ ಶೈಲಿಯಲ್ಲಿ ಹೇಳಲಾಗಿದೆ. ದುರ್ಯೋಧನನ ಹೇಳಿಕೆಯ ಮೇರೆಗೆ ಒಬ್ಬ ಕು¾ವ ನಿ¿ಲ್‍ಕುತ್ತು ಎಂಬ ಮಾಟದಿಂದ ಪಾಂಡವರ ಆತ್ಮಗಳನ್ನು ಬಂಧಿಸುವುದು. ಕು¾ವನ ಹೆಂಡತಿ ಕುಅತ್ತಿ ನಿ¿ಲ್‍ಕುತ್ತಿನ ಮರುಮಂತ್ರ ಹೇಳಿ ಪಾಂಡವರನ್ನು ಬದುಕಿಸುವುದು ಇತ್ಯಾದಿ ವಿಷಯಗಳು ಈ ಹಾಡಿನಲ್ಲಿವೆ. ಕುಂಜುತೇವಿ (ಕುಂತಿ) ಕಾಂದಕಾರಿ (ಗಾಂಧಾರಿ) ಕುರುನಾಟ್ಟಿನರಾಣಿ, ಪಾಂಡವರಲ್ಲಿ ಕೊನೆಯವನು ಕುಂಜುಭೀಮ. ಕೌರವರು 99 ಜನ. ಹೀಗೆ ಮೂಲ ಮಹಾಭಾರತದಿಂದ ವ್ಯತ್ಯಾಸಗಳನ್ನು ಇಲ್ಲಿ ಕಾಣಬಹುದು. 

ಸಂಘಕ್ಕಳಿ ಹಾಡುಗಳು ನಂಬೂದಿರಿ ಬ್ರಾಹ್ಮಣರವು. ಸಂಘ ಎಂದರೆ ಗುಂಪು ಎಂದರ್ಥ. ನಂಬೂದಿರಿ ಬ್ರಾಹ್ಮಣರು ರಾಜ್ಯವಾಳಿ  ಯುದ್ಧಗಳಲ್ಲಿ ಭಾಗವಹಿಸಿದ್ದರು ಎಂಬ ಸ್ಮರಣೆಗಾಗಿ ಹೇಳುವಂಥ ಹಾಡುಗಳಿವು.

ಬೇರೆಬೇರೆ ಕಸುಬಿನ ಹಾಡುಗಳಲ್ಲಿ ಕೃಷಿಪಾಟ್ಟು ಮತ್ತು ವಂಚಿಪಾಟ್ಟು (ದೋಣಿಹಾಡು) ಮುಖ್ಯವಾದವು. ಇವಲ್ಲದೆ ಕೋಲಡಿಪಾಟ್ಟು (ಕೋಲಾಟದ ಹಾಡು), ವಡಕ್ಕನ್ ಪಾಟ್ಟು (ಉತ್ತರ ಮಲಬಾರಿನ, ವೀರರ ಚರಿತೆ ಹೇಳುವ ಲಾವಣಿ),  (ಇದರಲ್ಲಿ ತಚ್ಚೋಳಿ ಒತೇನನ್, ತಚ್ಚೋಳಿಚ್ಚಂದು, ಪಾಲಾಟ್ಟು ಕೋಮಪ್ಪನ್, ಆರೋಮಲ್ ಚೇಕವನ್ ಮತ್ತು ವೀರವನಿತೆ ಉಣ್ಣಿಯಾರ್ಬೆ ಮೊದಲಾದ ವೀರರ  ವೀರಕೃತ್ಯಗಳ ವರ್ಣನೆ ಇವೆ). ತೆಕ್ಕನ್‍ಪಾಟ್ಟು ತೆಂಕಣ ಪ್ರದೇಶದಲ್ಲಿ ಇರುವ ವಿಪುಲವಾದ ಹಾಡುಹಬ್ಬಗಳು. ಅವುಗಳಲ್ಲಿ `ವಿಲ್ಲಡಿಚ್ಚಾನ್ ಪಾಟ್ಟು, `ಕನ್ನಡಿಯನ್‍ಪೋರ್, `ಅಂಜುತ್ತಂಬುರಾನ್‍ಪಾಟ್ಟು, `ಇರವಿಕುಟ್ಟಿಪಿಳ್ಳಿಪೋರ್ -ಮುಂತಾದ ಪಾಟ್ಟುಗಳು ತುಂಬ ಪ್ರಖ್ಯಾತವಾಗಿವೆ.  ಕ್ರಿಶ್ಚಿಯನ್ನರ ಪಳ್ಳಿಪಾಟು ಎಂಬ ಮದುವೆ ಹಾಡು ಮತ್ತು ಮುಸ್ಲಿಮರ ಮಾಪ್ಪಿಳ್ಳಪಾಟ್ಟುಗಳೂ ಇವೆ.

	ಚೆಂದಮಿಳ್ ಮತ್ತು ಸಂಸ್ಕøತದ ಪ್ರಭಾವ ಈ ಸಾಹಿತ್ಯದ ಮೇಲೆ ಆಗುವುದಕ್ಕಿಂತ ಮುಂಚಿನ ಮಲಯಾಳ ಭಾಷೆಯ ಸ್ವರೂಪ ಈ ಜನಪದಗೀತೆಗಳಿಂದ ತಿಳಿಯುತ್ತದೆ. ಜನಪದ ವೃತ್ತಗಳು ಆಧುನಿಕ ಕಾಲದ ಹಲವಾರು ಹೊಸಬಗೆಯ ಹಾಡುಗಳಿಗೆ ಮಾದರಿಗಳಾಗಿವೆ.

2 ಪಾಟ್ಟು ಸಾಹಿತ್ಯ : ತಮಿಳಿನ ಪ್ರಭಾವದಿಂದ ಬಂದಂಥದು. ಹನ್ನೆರಡನೆಯ ಶತಮಾನದಿಂದೀಚೆಗೆ ಬಂದ ಸಾಹಿತ್ಯವನ್ನು ಪಾಟ್ಟು ಸಾಹಿತ್ಯವೆನ್ನುತ್ತಾರೆ. ಪಾಟ್ಟು ಎಂದರೆ ಹಾಡು ಎಂದರ್ಥ. ಲೀಲಾತಿಲಕದಲ್ಲಿ ಪಾಟ್ಟುಸಾಹಿತ್ಯದ ಲಕ್ಷಣವನ್ನು ಈ ರೀತಿ ಹೇಳಲಾಗಿದೆ: ದ್ರಾವಿಡ ಸಂಘಾತಾಕ್ಷರ ನಿಬದ್ಧಂ ಎತುಕಾ, ಮೋನಾವೃತ್ತಿ ವಿಶೇಷಯುಕ್ತಂಪಾಟ್ಟು, ತಮಿಳು ವರ್ಣಮಾಲೆಯಿಂದ ರಚಿತವಾದ ಎತುಕ (ದ್ವಿತೀಯಾಕ್ಷರಪ್ರಾಸ), ಮೋನಗಳಿಂದ (ಆದಿಪ್ರಾಸ) ಕೂಡಿದ ವೃತ್ತವಿಶೇಷವೇ ಪಾಟ್ಟು, ಪಾಟ್ಟುಸಾಹಿತ್ಯದಲ್ಲಿ ದೊರಕಿರುವ ಏಕೈಕ ಕೃತಿ ರಾಮಚರಿತಮ್. ಕರ್ತೃ: ಚೀರಾಮನ್. ಕಾಲ 12ನೆಯ ಶತಮಾನದ ಅಂತ್ಯ ಮತ್ತು ಹದಿಮೂರನೆಯ ಶತಮಾನದ ಆದಿ. ಇದು ಪಾಟ್ಟು ಸಾಹಿತ್ಯದ ಲಕ್ಷಣಗಳನ್ನೆಲ್ಲ ಒಳಗೊಂಡ ಕೃತಿ. ಮಲಯಾಳ ಸಾಹಿತ್ಯಚರಿತ್ರೆ ಪ್ರಾರಂಭವಾಗುವುದು ಈ ಕೃತಿಯಿಂದಲೇ.
ಈ ಕೃತಿ ತಮಿಳಿನ ಕಂಬರಾಮಾಯಣದ ಕಾಲದಲ್ಲೇ ರಚಿತವಾದರೂ ಕಂಬ ರಾಮಾಯಣದ ಯಾವ ಲಕ್ಷಣಗಳೂ ಇದರಲ್ಲಿ ಇಲ್ಲ. ಆದರೆ ಎರಡು ಕೃತಿಗಳಲ್ಲೂ ಕೆಲವು ಹೋಲಿಕೆಗಳಿವೆ. ಇದು ವಾಲ್ಮೀಕಿ ರಾಮಾಯಣದ ಅನುವಾದವಾದರೂ ಅಲ್ಲಲ್ಲಿ ಕವಿಯ ಸ್ವಂತಿಕೆ ಮಿಂಚುತ್ತದೆ.

`ಪಾಟ್ಟುಛಂದಸ್ಸಿನಲ್ಲೇ ರಚಿತವಾದ ಕೃತಿಗಳು ಕಣ್ಣಶನ್ ಪಾಟ್ಟುಗಳ್. ತಮಿಳು ಮಲಯಾಳ ಮಿಶ್ರಿತ ಭಾಷೆ ಈ ಕೃತಿಗಳಲ್ಲಿ ಕಂಡುಬಂದರೂ ಪಾಟ್ಟು ಲಕ್ಷಣಗಳನ್ನು ಯಥಾವತ್ತಾಗಿ ಅನುಸರಿಸಿಲ್ಲ. ಕಣ್ಣಶ ಕುಟುಂಬದವರಾದುದರಿಂದ ರಾಮಪಣಿಕ್ಕರ್, ಮಾಧವಪಣಿಕ್ಕರ್, ಶಂಕರಪಣಿಕ್ಕರ್ ಇವರಿಗೆ ಕಣ್ಣಶ ಕವಿಗಳು ಎಂದು ಹೆಸರು. ಇವರನ್ನು ನಿರಣಮ್ ಕವಿಗಳೆಂದು ಕರೆಯುವರು. ಇವರ ಶೈಲಿಗೆ ನಿರಣಮ್ ವೃತ್ತಮ್ ಎಂದು ಹೆಸರು. ಈ ಮೂವರು ಕವಿಗಳಲ್ಲಿ ರಾಮಪಣಿಕ್ಕರ್ ಬರೆದ ರಾಮಾಯಣ ಮಹತ್ವದ್ದು. ಈತನ ಇತರ ಕೃತಿಗಳು ಭಾರತಮ್, ಭಾಗವತಮ್ ಮತ್ತು ಶಿವರಾತ್ರಿ ಮಾಹಾತ್ಮ್ಯಮ್. ಮಾಧವಪಣಿಕ್ಕರ್ ಬರೆದ ಭಗವದ್ಗೀತೆ, ಶಂಕರಪಣಿಕ್ಕರ್ ಬರೆದ ಭಾರತಮಾಲ ಗ್ರಂಥಗಳು ಮಲಯಾಳ ಸಾಹಿತ್ಯದಲ್ಲಿ ಪ್ರಮುಖಸ್ಥಾನ ಪಡೆದಿವೆ. ಭಗವದ್ಗೀತೆಯನ್ನು ಮೊತ್ತಮೊದಲು ಭಾಷಾಂತರಿಸಿದ ಶ್ರೇಯಸ್ಸು ಮಾಧವಪಣಿಕ್ಕರ್‍ಗೆ ಸಲ್ಲುತ್ತದೆ. ಮೂಲದ 700 ಶ್ಲೋಕಗಳನ್ನು ಸಂಗ್ರಹಿಸಿದ್ದಾನೆ. 
ಮೇಲೆ ಹೇಳಿದ ಕೃತಿಗಳಲ್ಲದೆ ಗದ್ಯದಲ್ಲಿ ಬರೆದ ಭಾಷಾ ಕೌಟಿಲ್ಯಮ್, ದೂತವಾಕ್ಯಮ್ ಇತ್ಯಾದಿ ಕೃತಿಗಳೂ ಪದ್ಯದಲ್ಲಿ ಬರೆದ ಇರವಿಕ್ಕುಟ್ಟಿಪ್ಪಿಳ್ಳಪೋರು, ರಾಮಕಥಾಪಾಟ್ಟು ಮುಂತಾದ ಕೃತಿಗಳೂ ಆಟ್ಟಪ್ರಕಾರಗ (ಕಥಕ್ಕಳಿ ಪ್ರಸಂಗ)ಳೂ ಈ ಕಾಲದಲ್ಲಿ ರಚಿಸಲ್ಪಟ್ಟಿದೆ.

3 ಮಣಿಪ್ರವಾಳ ಸಾಹಿತ್ಯ: ಇದರ ಪ್ರವರ್ತಕರು ನಂಬೂದಿರಿಗಳು. ಆರ್ಯ-ದ್ರಾವಿಡರ ಸಮ್ಮಿಳನ ಇಲ್ಲಿಯ ಜನರ ಆಚಾರ, ವಿಚಾರ, ಭಾಷೆ ಇತ್ಯಾದಿಗಳ ಮೇಲೆ ಪ್ರಭಾವ ಬೀರಿತು. ಈ ಕಾಲದಲ್ಲಿ ಸಂಸ್ಕøತಪದಗಳ ಬಳಕೆ ಹೆಚ್ಚಾಗಿ ಮಲಯಾಳ ಸಾಹಿತ್ಯದಲ್ಲಿ ಒಂದು ಹೊಸ ಶೈಲಿ ಹುಟ್ಟಿತು. ಇದನ್ನೇ ಮಣಿಪ್ರವಾಳ ಎಂದರು. ಮಣಿ ಎಂದರೆ ಮಾಣಿಕ್ಯ, ಪ್ರವಾಳ ಎಂದರೆ ಹವಳ. ಇವೆರಡರ ಜೋಡಣೆಯಿಂದ ಸುಂದರ ಹಾರ ಆಗುವಂತೆ ಸಂಸ್ಕøತ ಮಲಯಾಳ ಸೇರಿ ಒಂದು ಹೊಸ ಕಾವ್ಯಧಾರೆ ಹುಟ್ಟಿತು ಎಂದು ಹೇಳಲಾಗಿದೆ. ಈ ಶೈಲಿಯಲ್ಲಿ ರಚಿತವಾದ ಕೃತಿಗಳಲ್ಲಿ ಶೃಂಗಾರಕ್ಕೆ ಹೆಚ್ಚು ಪ್ರಾಶಸ್ತ್ಯ. ಈ ಕಾವ್ಯಗಳ ವಸ್ತು ಸಾಮಾನ್ಯರ ಜನಜೀವನ. ಇವುಗಳಲ್ಲಿ ಕೇರಳದ ಸಾಮಾಜಿಕ ಸ್ಥಿತಿಗತಿಗಳನ್ನು ಕಾಣಬಹುದು. ಈ ಶೈಲಿಯ ಪ್ರಾಚೀನತಮಕೃತಿ ವೈಶಿಕತಂತ್ರ (ಸುಮಾರು 13 ನೆಯ ಶತಮಾನ), ಕರ್ತೃ ತಿಳಿಯದು. ಉಣ್ಣಿಯಚ್ಚಿಚರಿತಮ್, ಉಣ್ಣಿಚ್ಚಿರುತೇವಿಚರಿತಮ್, ಉಣ್ಣಿಯಾಡಿಚರಿತಮ್ ಈ ಕಾಲದಲ್ಲಿ (13 ನೆಯ ಶತಮಾನ) ಬಂದ ಮೂರು ಮುಖ್ಯ ಭಾಷಾಚಂಪುಗಳು. ಮೊದಲನೆಯ ಚಂಪು ನರ್ತಕಿಯೊಬ್ಬಳಲ್ಲಿ ಅನುರಕ್ತನಾದ ಗಂಧರ್ವ ಭೂಮಿಗೆ ಬರುವ ಕಥೆ. ಎರಡನೆಯದು ಉಣ್ಣಿಚಿರುತೇವಿಯ ಸೌಂದರ್ಯದ ಬಗ್ಗೆ ಕಥೆಗಳನ್ನು ಕೇಳಿದ ದೇವೇಂದ್ರ ಅವಳ ನಿವಾಸಕ್ಕೆ ಹೋಗಿ ಅವಳಿಗಾಗಿ ಕಾದು ಕುಳಿತು ಅಪಾರ ಜನರನ್ನು ನೋಡಿ ಹಿಂತಿರುಗುವ ಕಥೆ. ಮೂರನೆಯದು ಚಂದ್ರನ ಪ್ರೇಯಸಿ ಪಾರ್ವತಿ ಎಂಬ ಅಪ್ಸರೆ ರೋಹಿಣಿಯ ಶಾಪದಿಂದ ರಾಜ ಕೇರಳವರ್ಮನ ಮಗಳಾಗಿ ಹುಟ್ಟುವ ಕಥೆ.

14ನೆಯ ಶತಮಾನದಲ್ಲಿ ಸಂಸ್ಕøತ ಸಂದೇಶಕಾವ್ಯಗಳು ಬಂದವು: ಉಣ್ಣುನೀಲಿಸಂದೇಶದಂಥ ಖಂಡಕಾವ್ಯಗಳು ಮತ್ತು ಕೋಕಸಂದೇಶ, ಕಾಕಸಂದೇಶ ಮುಂತಾದ ವಿಡಂಬನ ಕಾವ್ಯಗಳು.

ಇದೇ ಕಾಲದಲ್ಲಿ ಪೂನಮ್ ನಂಬೂದಿರಿಯ ಭಾಷಾರಾಮಾಯಣ ಚಂಪು. ಮ¿ಮಂಗಳಮ್ ನಂಬೂದಿರಿಯ  ಭಾಷಾನೈಪಧಚಂಪು, ರಾಜರತ್ನಾವಲೀಯಮ್, ಕೊಟಿಯ ವಿರಹಮ್ ಮುಂತಾದ ಕೃತಿಗಳು ಬಂದವು. ಸಂಸ್ಕøತ ಚಂಪೂ ಗ್ರಂಥಗಳಲ್ಲಿ ಪೌರಾಣಿಕ ಮತ್ತು ಐತಿಹಾಸಿಕ ಘಟನೆಗಳ ವರ್ಣನೆಯಿದ್ದರೆ ಮಲಯಾಳದ ಚಂಪೂ ಗ್ರಂಥಗಳಲ್ಲಿ ಐತಿಹಾಸಿಕ ಘಟನೆಗಳ ಜೊತೆಗೆ ಜನಸಾಮಾನ್ಯರ ಜೀವನ, ಅವರ ಹಾಸ್ಯಪ್ರವೃತ್ತಿ ಮುಂತಾದವನ್ನು ಕಾಣಬಹುದು.

ಚಂದ್ರೋತ್ಸವ, ಮಣಿಪ್ರವಾಳ ಸಾಹಿತ್ಯದ ಕೊನೆಯ ಗ್ರಂಥ ಕರ್ತೃ ತಿಳಿಯದು. ಕಿನ್ನರಿಯೊಬ್ಬಳು ಮರಕತ ಪರ್ವತ ಶಿಖರದಲ್ಲಿ ಪ್ರಿಯನೊಡನೆ ವಿಹರಿಸುತ್ತಿದ್ದ ಸಂದರ್ಭದಲ್ಲಿ ಹೂವಿನ ಸುಗಂಧ ಬರುತ್ತದೆ. ಆ ಹೂವನ್ನು ತರಲು ಪ್ರಿಯನನ್ನು ಕಳುಹಿಸುತ್ತಾಳೆ. ಆತ ಅದನ್ನು ಹುಡುಕುತ್ತ ಕೇರಳಕ್ಕೆ ಬರುತ್ತಾನೆ. ಅಲ್ಲಿ ಮೇದಿನೀ ಚಂದ್ರಿಕ ಎಂಬ ವೇಶ್ಯೆ ಚಂದ್ರೋತ್ಸವ ಆಚರಿಸುತ್ತಿದ್ದಳು. ಅವಳು ಚಂದ್ರೋತ್ಸವಕ್ಕೆ ಸಂಗ್ರಹಿಸಿದ ಪುಷ್ಪದ ಸುಗಂಧ ಅದಾಗಿತ್ತು. ಇದನ್ನು ತನ್ನ ಪ್ರಿಯತಮೆಗೆ ಹೇಳುವುದೇ ಇಲ್ಲಿಯ ಕಥಾವಸ್ತು.
ನವೋದಯಕಾಲ (15ರ್-1ನೆಯ ಶತಮಾನ): ಪಚ್ಚಮಲಯಾಳ ಸಾಹಿತ್ಯ ಯಾವುದೇ ಭಾಷೆಯಿಂದ ಪ್ರಭಾವಿತವಾಗದೆ ಬಂದ ಸ್ವತಂತ್ರಸಾಹಿತ್ಯ. ತರುವಾಯದ ಸಾಹಿತ್ಯ ತಮಿಳು ಮತ್ತು ಸಂಸ್ಕøತ ಭಾಷೆಗಳ ಪ್ರಭಾವದಿಂದ ಬಂದಂಥದು. 15ನೆಯ ಶತಮಾನದಿಂದೀಚೆಗೆ ಸಂಸ್ಕøತ ಸಾಹಿತ್ಯದಿಂದ ತೆಗೆದುಕೊಂಡ ವಿಷಯಗಳನ್ನು ದೇಸೀ ಶೈಲಿಗೆ ಅಳವಡಿಸಿದ ಕೃತಿಗಳು ಬಂದವು. ಈ ಕಾಲದಲ್ಲಿ ಆಡುಮಾತಿನ ಒಂದು ಹೊಸ ಶೈಲಿ ಬಂತು. ತಮಿಳು ಮತ್ತು ಸಂಸ್ಕøತದ ಹಿಡಿತದಿಂದ ಮಲಯಾಳ ಭಾಷೆಯನ್ನು ಬಿಡಿಸಿ ಅದಕ್ಕೆ  ಸ್ವತಂತ್ರ ಅಸ್ತಿತ್ವ ತಂದುಕೊಟ್ಟ ಕಾಲವಿದು.

ಇಂಥ ಶೈಲಿಯಲ್ಲಿರುವ ಕೃತಿ ಕೃಷ್ಣಗಾಥ. ಕರ್ತೃ ಚೆರುಶ್ಶೇರಿ ನಂಬೂದಿರಿ (15 ನೆಯ ಶತಮಾನ). ಗಾಥ ಎಂದರೆ ಹಾಡು ಎಂದರ್ಥ. ಆದರೆ ಇಲ್ಲಿ ದೇಸೀ ವೃತ್ತವೊಂದಕ್ಕೆ ಈ ಹೆಸರನ್ನು ಕೊಡಲಾಗಿದೆ. ಇದಕ್ಕೆ ಮಂಜರಿವೃತ್ತ ಎಂದು ಹೆಸರು. ಕೃಷ್ಣನ ಜನ್ಮದಿಂದ ಸ್ವರ್ಗಾರೋಹಣದವರೆಗಿನ ಭಾಗವತದ ದಶಮ ಸ್ಕಂಧದ ಕಥೆ ಕೃಷ್ಣಗಾಥದ ವಸ್ತು. ಇದರಲ್ಲಿ 47 ಖಂಡಗಳಿವೆ. ವಾತ್ಸಲ್ಯ ಮತ್ತು ಭಕ್ತಿ ಇಲ್ಲಿಯ ಪ್ರಮುಖ ರಸಗಳು. ಶೃಂಗಾರರಸ ಇವೆರಡಕ್ಕೆ ಪೋಷಕವಾಗಿ ಬಂದಿದೆ. ಈ ಕೃತಿ ತಾರಾಟು (ಜೋಗುಳದ) ಧಾಟಿಯಲ್ಲಿ ರಚಿತವಾಗಿದೆ. ಮಣಿಪ್ರವಾಳ ಶೈಲಿಯಲ್ಲಿಯೇ ಈತ ಕಾವ್ಯ ರಚಿಸಿದ್ದರೂ ಯಾವುದೇ ಪ್ರಾಭಾವಕ್ಕೆ ಒಳಗಾಗದೆ ಆಡುಮಾತಿನಲ್ಲಿ ಕೃತಿ ರಚಿಸಿದ್ದಾನೆ. ಆದರೆ ಈ ಸಾಹಿತ್ಯಿಕ ಶೈಲಿ ಮುಂದುವರಿಯದೆ ಈತನ ಕಾಲಕ್ಕೇ ನಿಂತುಹೋಯಿತು. 20ನೆಯ ಶತಮಾನದಲ್ಲಿ ಮತ್ತೆ ಈ ಶೈಲಿ ಚಿಗುರೊಡೆಯಿತು.

ಹದಿನಾರನೆಯ ಶತಮಾನದ ಉತ್ತರಾರ್ಧದಲ್ಲಿ  ಪೋರ್ಚುಗೀಸರು ವ್ಯಾಪಾರಕ್ಕಾಗಿ ಕೇರಳಕ್ಕೆ ಬಂದರು. ಆ ಕಾಲಕ್ಕೆ ಕೇರಳ ಚಿಕ್ಕಪುಟ್ಟ ಸಂಸ್ಥಾನಗಳಾಗಿ ಒಡೆದು ಒಳಜಗಳಗಳು ತಲೆದೋರಿದ್ದವು. ಇಂಥ ಕಾಲದಲ್ಲಿ ಎಳುತ್ತಚ್ಚನ್ (16 ನೆಯ ಶತಮಾನ) ತನ್ನ ಕೃತಿಗಳಿಂದ ಜನರಿಗೆ ಮನಶ್ಯಾಂತಿ ಒದಗಿಸಿದ. ಈತನ ಪೂರ್ಣ ಹೆಸರು ತಾಂಜತ್ತು ರಾಮಾನುಜನ್ ಎಳತ್ತಚ್ಚನ್. ಈತ ಅಧ್ಯಾತ್ಮರಾಮಾಯಣ ಮತ್ತು ಭಾರತ ಎಂಬ ಕೃತಿಗಳ ಕರ್ತೃ. ಕಿಳಪಾಟ್ಟುವಿನಲ್ಲಿ ಇವನ್ನು ರಚಿಸಿದ್ದಾನೆ. ಈ ಕೃತಿಗಳು ಭಾರತೀಯ ಸಾಹಿತ್ಯದ ಜೊತೆ ಮಲಯಾಳ ಸಾಹಿತ್ಯ ತಲೆಯೆತ್ತಿ ನಿಲ್ಲುವಂತೆ ಮಾಡಿದವು. ಭಾಷಾಭಾಗವತ (ಮೊದಲಸ್ಕಂಧ), ಉತ್ತರರಾಮಾಯಣ, ಹರಿನಾಮ ಕೀರ್ತನಮ್ ಮತ್ತು ಚಿಂತಾರತ್ನಮ್ ಎಂಬ ಕೃತಿಗಳನ್ನೂ ಈತ ರಚಿಸಿದ್ದರೂ ಅವು ಅಷ್ಟೇನೂ ಮಹತ್ವದವಲ್ಲ. ಸಂಸ್ಕøತ ಬ್ರಹ್ಮಾಂಡಪುರಾಣದ ಒಂದು ಭಾಗವಾದ ಆಧ್ಯಾತ್ಮರಾಮಾಯಣವನ್ನು ಎಳುತ್ತಚ್ಚನ್ ಮೊತ್ತಮೊದಲ ಮಲಯಾಳಕ್ಕೆ ತಂದ. ತತ್ತ್ವೋಪದೇಶ ಮತ್ತು ಭಕ್ತಿಭಾವ ಈತನ ಪರಮಗುರಿ. ಈತ ತನ್ನ ಭಾರತದಲ್ಲಿ ಮೂಲಮಹಾಭಾರತದ ಸಾರವನ್ನು ಸಂಗ್ರಹಿಸಿದ್ದಾನೆ.
ಕಿಳಿಪ್ಪಾಟ್ಟು ಮಾದರಿಯಲ್ಲಿ ರಚಿತವಾದ ಇತರ ಪ್ರಮುಖ ಕೃತಿಗಳೆಂದರೆ ಬ್ರಹ್ಮಾಂಡಪುರಾಣ, ಶಿವರಾತ್ರಿಮಾಹಾತ್ಮ್ಯಮ್, ಕೇರಳವರ್ಮನ  ರಾಮಾಯಣಮ್, ಗಿರಿಜಾ ಕಲ್ಯಾಣಮ್.

ಇದೇ ಕಾಲದಲ್ಲಿ ಬಂದ ಇನ್ನೊಬ್ಬ ಅನುಭಾವಿ ಕವಿ ಪೊಂದಾನಮ್ ನಂಬೂದಿರಿ. ಈತನ ಸಂತಾನಗೋಪಾಲಮ್ ಎಂಬ ಕೃತಿ ಭಕ್ತಿಯನ್ನು ಸಾರುವಂಥದು. ಜ್ಞಾನಪ್ಪಾನ ಎಂಬುದು ವೇಂದಾಂತ ತತ್ತ್ವಗಳನ್ನು ಹೇಳುವಂಥ ಕೃತಿ. ಇದಾದ ಸ್ವಲ್ಪಕಾಲ ಮಲಯಾಳ ಸಾಹಿತ್ಯ ಸುಪ್ತಾವಸ್ಥೆಯಲ್ಲಿತ್ತು. ಅನಂತರ ಕಥಕ್ಕಳಿ ಅಥವಾ ಅಟ್ಟಕ್ಕಥಾ ಎಂಬ ಹೊಸ ಸಾಹಿತ್ಯ ಪ್ರಕಾರ ಆರಂಭವಾಯಿತು. ಕಳಿ ಎಂದರೆ ಆಟ. ಕಥೆಯನ್ನು ಆಡುವುದು ಕಥಕ್ಕಳಿ ಅಥವಾ ಆಟ್ಟಕಥ. ಎಂದರೆ ತಾಳ ಮೇಳಗಳ ಜೊತೆಗೆ ಅಭಿನಯಕ್ಕೋಸ್ಕರ ರಚಿತವಾದ ಪದ್ಯ. ಕೇರಳೀಯರಿಗೆ ಕಲಾಪ್ರಂಪಚದಲ್ಲಿ ಖ್ಯಾತಿ ತಂದ ಕಲಾಪದ್ಧತಿ ಇದು.

ಇದು 16ನೆಯ ಶತಮಾನದ ಉತ್ತರಾರ್ಧದಲ್ಲಿ ಕೊಟ್ಟಾರಕರ ತಂಬುರಾನನಿಂದ ಆರಂಭವಾಯಿತು. ಈತ ರಾಮನಾಟ್ಟಮ್ ಎಂಬ ಆಟ್ಟಕಥೆ ಬರೆದ. ಇದೇ ಕಥಕ್ಕಳಿಯ ಮೊದಲ ಸಾಹಿತ್ಯ ಕೃತಿ. ರಂಗಮಂಟಪದಲ್ಲಿ ಆಡಿ ತೋರಿಸಲು ಸಾಧ್ಯವಾದ ಕಥಾಸಂದರ್ಭಗಳನ್ನು ಮಾತ್ರ ಆಯ್ದು ಸಾಹಿತ್ಯ ರಚಿಸಲಾಗಿದೆ. ಸಂಸ್ಕøತ ಶ್ಲೋಕಗಳಿಂದ ಇದು ಪ್ರಾರಂಭವಾಗುತ್ತದೆ. ಕಥಕ್ಕಳಿಯಲ್ಲಿ ಮುದ್ರೆ ಮತ್ತು ಭಾವಾಭಿನಯದ ಮೂಲಕ ರಸಭಾವಗಳ ಪ್ರತಿಪಾದನೆಗಳಿಗೆ ಪ್ರಾಧಾನ್ಯ. ಗಾಯಕನ ಹಾಡುಗಾರಿಕೆಗೆ ಸರಿಯಾಗಿ ನಟ ಅಭಿನಯಿಸುತ್ತಾನೆ. ಪಾತ್ರಗಳ ವೇಷ ಭೂಷಣಗಳು ಯಕ್ಷಗಾನದಲ್ಲಿ ಬರುವಂತೆ ವಿಶಿಷ್ಟವಾಗಿರುತ್ತವೆ. ಸಂಗೀತ, ಸಾಹಿತ್ಯ ಮತ್ತು ನೃತ್ಯಗಳ ತ್ರಿವೇಣಿ ಸಂಗಮವಿದು. ಕಥಕ್ಕಳಿಯ ಇನ್ನೊಬ್ಬ ಕವಿ ಉಣ್ಣಾಯಿವಾರಿಯರ್; ನಳಚರಿತಮ್ ಈತನ ಪ್ರಸಿದ್ಧ ಆಟ್ಟಕಥೆ. ಸಂಸ್ಕøತ ನಾಟಕಗಳ ಮಾದರಿಯಲ್ಲಿ ಈತ ಇದನ್ನು ರಚಿಸಿದ್ದಾನೆ.

ತುಳ್ಳಲ್ : ಕಥಕ್ಕಳಿಯಲ್ಲಿ ಪಾತ್ರಗಳ ಭಾವಾಭಿನಯಕ್ಕೆ ಹೆಚ್ಚು ಪ್ರಾಮುಖ್ಯವಿದ್ದುದರಿಂದ ಅದು ಎಲ್ಲ ಜನರಿಗೂ ಅರ್ಥವಾಗುತ್ತಿರಲ್ಲಿಲ್ಲ. ಮಾಹಾಕಾವ್ಯ ಮತ್ತು ಪುರಾಣಗಳಿಂದ ವಸ್ತುಗಳನ್ನು ಆಯ್ದುಕೊಂಡು ಜನಪದಕಲೆಯನ್ನು ಅದರೊಡನೆ ಮೇಳೈಸಿ ರಚಿಸಿದ ಸಾಹಿತ್ಯವೇ ತುಳ್ಳಲ್. ತುಳ್ಳಲ್‍ನಲ್ಲಿ ಮೂರು  ಪ್ರಕಾರಗಳಿವೆ- ಓಟ್ಟನ್ ತುಳ್ಳಲ್, ಶೀತಂಗನ್ ತುಳ್ಳಲ್, ಪರಯನ್ ತುಳ್ಳಲ್. ಪರಯನ್ ತುಳ್ಳಲ್‍ಗೆ ಮೊದಲೆರಡಕ್ಕಿಂತ ಬೇರೆ ಬಗೆಯ ವೇಷಭೂಷಣಗಳಿರುತ್ತವೆ. ಈ ಪ್ರಾಕಾರವನ್ನು ಮೊತ್ತಮೊದಲು ಗುರುತಿಸಿದವ ಕುಂಜನ ನಂಬಿಯಾರ್ (18 ನೆಯ ಶತಮಾನದ ಆದಿಭಾಗ). ಈತ ಸಮರ್ಥ ಕವಿಯಾದರೂ ಎಳುತ್ತಚ್ಚನಷ್ಟು ಪ್ರತಿಭಾಶಾಲಿಯಲ್ಲ. ಜನಸಾಮಾನ್ಯರ ಮನರಂಜನೆಯೇ ಈತನ ಮುಖ್ಯ ಗುರಿ. ಆದ್ದರಿಂದ ಈತನ ಕೃತಿಗಳು ಬಲು ಜನಪ್ರಿಯವಾದವು. ಕಲ್ಯಾಣ ಸೌಗಂಧಿಕ, ಸ್ಯಮಂತಕಮ್, ಘೋಷಯಾತ್ರ, ನಳಚರಿತಮ್, ರುಕ್ಕಿಣೀಸ್ವಯಂವರಮ್ ಮತ್ತು ಪಂಚೇಂದ್ರೋಪಾಖ್ಯಾನಮ್ ಈತನ ಪ್ರಮುಖ ಕೃತಿಗಳು. ಇವನದು ತೀಕ್ಷ್ಣವಾದ ವಾಕ್‍ಪ್ರಹಾರ ಅರಸ-ಆಳು, ಪಂಡಿತ-ಪಾಮರ ಹೀಗೆ ಸಮಾಜದ ಎಲ್ಲ ವರ್ಗದ ಜನರೂ ಈತನ ಹಾಸ್ಯಕ್ಕೆ ಗುರಿಯಾಗಿದ್ದಾರೆ. ಪಾತ್ರಾನುಗುಣಭಾಷೆ, ವರ್ಣನೆಗಳು, ಗೇಯತೆ, ಹಾಸ್ಯಪ್ರವೃತ್ತಿ, ಸಮಾಜವಿಮರ್ಶೆ ಈತನ ವ್ಯೆಶಿಷ್ಟ್ಯ.

ಕೇರಳದಲ್ಲಿ ಉಂಟಾದ ರಾಜಕೀಯ ಅಸ್ತವ್ಯಸ್ತತೆಯಿಂದಲೋ ಕುಂಜನ್‍ನನ್ನು ಅನುಕರಿಸಲು ಹೊರಟವರೆಲ್ಲರೂ ಪರಾಜಯ ಹೊಂದಿದ್ದರಿಂದಲೋ ಸ್ವಲ್ಪಕಾಲ ಮಲಯಾಳ ಸಾಹಿತ್ಯಕ್ಕೆ ಮಂದಗತಿ ಒದಗಿತು. ಕ್ರಮೇಣ ಹೊಸ ವಾತಾವರಣ ಉಂಟಾಯಿತು. ನವೀನತೆಗಿಂತಲೂ ಹಿಂದಿನ ಪ್ರಾಕಾರಗಳಾದ ಕಿಳಿಪಾಟ್ಟು, ಗಾಥಾ, ಪುರಾಣಗಳ ಭಾಷಾಂತರ, ಅಟ್ಟಕಥೆಗಳು ಮುಂತಾದವು ರಚಿತವಾದವು. ಸ್ವಾತಿತಿರುನಾಳ್ ಮಹಾರಾಜರ ಆಸ್ಥಾನದಲ್ಲಿದ್ದ ವಿದ್ವಾನ್ ಕೋಯಿತಂಬುರಾನ್ ರಾವಣವಿಜಯಮ್ ಎಂಬ ಕಥಕ್ಕಳಿಯನ್ನೂ ಸಂತಾನಗೋಪಾಲಮ್ ಎಂಬ ತುಳ್ಳಲ್ ಕೃತಿಯನ್ನೂ ರಚಿಸಿದ.

ಆಧುನಿಕ ಕಾಲ: ್1ನೆಯ ಶತಮಾನದ ಪೂರ್ವಾರ್ಧದಲ್ಲಿ ಬ್ರಿಟೀಷರ ಪ್ರಾಬಲ್ಯದಿಂದಾಗಿ ಇಲ್ಲಿಯ ರಾಜರ ಪ್ರಭಾವ ಕಡಿಮೆಯಾಯಿತು. ಇಂಗ್ಲಿಷ್‍ಭಾಷೆ, ಸಾಹಿತ್ಯಗಳ  ಸಂಪರ್ಕದಿಂದಾಗಿ ಮಲಯಾಳ ಸಾಹಿತ್ಯ ಕಂಡುಕೊಂಡ ಬೆಳವಣಿಗೆಯನ್ನು ಇಲ್ಲಿ ಕೊಟ್ಟಿದೆ.
ಗದ್ಯ ಸಾಹಿತ್ಯ: ಈ ತನಕ ಪದ್ಯ ಅಥವಾ ಕಾವ್ಯದ ಬೆಳವಣಿಗೆಯೇ ಪ್ರಧಾನವಾಗಿತ್ತು. ಜನರ ಸಮಾಜಿಕ ಜೀವನ ರಾಜಕೀಯ ಶಕ್ತಿಗೆ ವಿಧೇಯವಾಗಿದ್ದುದರಿಂದ ಅವರ ಅಭಿವ್ಯಕ್ತಿಗೆ ಯಾವುದೇ ಅವಕಾಶವಿರಲಿಲ್ಲ. ಈ ಕಾರಣದಿಂದ ಗದ್ಯ ಆಂಗ್ಲರ ಆಗಮನದ ತನಕ ನಿಶ್ಚೇಷ್ಟಾವಸ್ಥೆಯಲ್ಲಿತ್ತು. ತರುವಾಯ 18ನೆಯ ಶತಮಾನದ ಕೊನೆ ಮತ್ತು ್1ನೆಯ ಶತಮಾನದ ಆದಿಭಾಗದಲ್ಲಿ ಗದ್ಯದ ಬೆಳವಣಿಗೆ ಆರಂಭವಾಯಿತು.

ಕೌಟಿಲ್ಯನ ಅರ್ಥಶಾಸ್ತ್ರದ ಭಾಷಾ ಕೌಟಲೀಯ ಎಂಬ ಅನುವಾದವೇ(10 ನೆಯ ಶತಮಾನ) ಮಲಯಾಳ ಭಾಷೆಯ ಅತಿ ಪ್ರಾಚೀನ ಗದ್ಯಗ್ರಂಥ. ಹಲವಾರು ಶಾಸನಗಳೂ ಮಲಯಾಳ ಗದ್ಯದಲ್ಲಿ ದೊರಕಿವೆ. ಆ ಕಾಲದ ಗದ್ಯ ಗ್ರಂಥಗಳಲ್ಲಿ ಮುಖ್ಯವಾದವು ಆಟ್ಟಪ್ರಕಾರಮ್, ಕ್ರಮದೀಪಿಕ, ದೂತವಾಕ್ಯ, ದೇವೀಮಹಾತ್ಮ್ಯಮ್, ನಳೋಪಾಖ್ಯಾನಮ್ ಇತ್ಯಾದಿ. ಕೂತ್ತು ಮತ್ತು ಕೂಡಿಯಾಟ್ಟಮ್‍ನ ವಿಮರ್ಶೆಯೇ ಅಟ್ಟಪ್ರಕಾರಮ್ ಮತ್ತು ಕ್ರಮದೀಪಿಕದ ವಿಷಯಗಳು.

ಮಿಷನರಿಗಳು ಮಲಯಾಳ ಸಾಹಿತ್ಯಭಾಷೆಯನ್ನು ಆಡುಮಾತಿನ ಹತ್ತಿರಕ್ಕೆ ತಂದರು. 1ರ್57ರಲ್ಲಿ ಮೊದಲ ಮುದ್ರಣಾಲಯ ಸ್ಥಾಪಿತವಾಯಿತು.  ಕ್ಲೈಮೆಂಟ್‍ಪಾದರಿಯ ಸಂಕ್ಷಿಪ್ತ ವೇದಾರ್ಥ ಮಲಯಾಳ ಭಾಷೆಯ ಪ್ರಥಮ ಮುದ್ರಿತ ಕೃತಿ. ಇವರು ತಮ್ಮ ಧರ್ಮ ಪ್ರಚಾರಕ್ಕಾಗಿ ದೇಸೀ ಭಾಷೆಯನ್ನು ಕಲಿತು ನಿಘಂಟುಗಳನ್ನೂ ವ್ಯಾಕರಣ ಗ್ರಂಥಗಳನ್ನೂ ರಚಿಸಿದರು. ಕೇರಳಾರಾಮಂ ಎಂಬ ಕೃತಿಯನ್ನು ಇಟಲಿಯ ಪಾದ್ರಿಯೊಬ್ಬ ರಚಿಸಿದ (1686) 18ನೆಯ ಶತಮಾನದಲ್ಲಿ ವರ್ತಮಾನ ಪುಸ್ತಕಮ್ ಎಂಬ ಪ್ರವಾಸಕಥನ ಪ್ರಕಟವಾಯಿತು.

1816ರಲ್ಲಿ ರೆವರೆಂಡ್ ಬೆಂಜಮಿನ್ ಬೈಲಿ ಅಚ್ಚುಮೊಳೆಯ ಒಂದು ಮುದ್ರಣಾಲಯ ಸ್ಥಾಪಿಸಿ ಬೈಬಲನ್ನು ಮುದ್ರಿಸಿದ. ಈತನೇ ಇಂಗ್ಲಿಷ್-ಮಲಯಾಳ ಮತ್ತು ಮಲಯಾಳ-ಇಂಗ್ಲಿಷ್ ನಿಘಂಟು ರಚಿಸಿದ. ಇದೇ ಕಾಲದಲ್ಲಿ ರೆವರೆಂಡ್ ಜೋಸೆಫ್ ಪಿಟ್ ಮಲಯಾಳ ವ್ಯಾಕರಣ ಬರೆದ. ಗುಂಡರ್ಟ್‍ರ ಮಲಯಾಳ ವ್ಯಾಕರಣ ಈ ಇಸವಿ ತಪ್ಪು ಸಂವದಿ ಸಭಾಕಂ (1808) ಮತ್ತು ನಿಘಂಟು (1872) ಪ್ರಕಟಗೊಂಡವು.  ಇಂಗ್ಲಿಷ್ ವಿದ್ಯಾಭ್ಯಾಸ ಭಾರತಾದ್ಯಂತ ಪ್ರಚಲಿತವಾಯಿತು. ಇಂಥ ಕಾಲದಲ್ಲಿ 19ನೆಯ ಶತಮಾನದಲ್ಲಿ ಕೇರಳವರ್ಮ ವಲಿಯಕೊಯಿತಂಬೂರಾನನ ಹಿರಿತನದಲ್ಲಿ ಪಠ್ಯಪುಸ್ತಕ ಸಮಿತಿಯೊಂದನ್ನು ರೂಪಿಸಲಾಯಿತು. ಇಂಗ್ಲಿಷ್ ಪಠ್ಯಪುಸ್ತಕಗಳ ಮಾದರಿಯಲ್ಲಿ ಪುಸ್ತಕ ಮುದ್ರಿತವಾಯಿತು. ಈ ಸಮಿತಿಯೇ ಆಧುನಿಕ ಮಲಯಾಳದ ಗದ್ಯ ರಚನೆಗೆ ದಾರಿ ತೋರಿಸಿಕೊಟ್ಟಿತು.
ಅನೇಕರು ಪಾಶ್ಚಾತ್ಯ ರೀತಿಯನ್ನು ಅನುಸರಿಸಿ ಪತ್ರಿಕೆಗಳನ್ನು ತಂದರು. ಇವುಗಳಲ್ಲಿ ಕೇರಳಮಿತ್ರಮ್ ಎಂಬ ಸಾಪ್ತಾಹಿಕ, ಮಲಯಾಳದ ಮೊತ್ತಮೊದಲ ಪತ್ರಿಕೆ (1860). ಅನಂತರ ಕೇರಳ ಪತ್ರಿಕೆ, ಮಲಯಾಳಿ, ನಸರಾಣಿ ದೀಪಿಕ, ಮಲಯಾಳ ಮನೋರಮ ಮುಂತಾದ ಪತ್ರಿಕೆಗಳು ಹುಟ್ಟಿಕೊಂಡವು.  1881ರಲ್ಲಿ ಬಂದ ವಿದ್ಯಾವಿಲಾಸಿನಿ ಮೊದಲ ಮಾಸಪತ್ರಿಕೆ. ಇದರಿಂದ ಮಲಯಾಳ ಗದ್ಯ ವಿಕಾಸಗೊಂಡಿತು. ಹೀಗೆ ಆಂಗ್ಲ ವಿದ್ಯಾಭ್ಯಾಸ ಪ್ರಚಾರ, ಕ್ರೈಸ್ತ ಮಿಷನರಿಗಳ ಪ್ರಯತ್ನ. ರಾಜಮಹಾರಾಜರ ಪ್ರೋತ್ಸಾಹ, ಹೊಸಬಗೆಯ ಶಿಕ್ಷಣಪದ್ಧತಿಗಳಿಂದ ಮಲಯಾಳ ಸಾಹಿತ್ಯ ಜಾಗೃತಗೊಂಡು ಹೊಸಯುಗಕ್ಕೆ ಅಡಿಯಿಟ್ಟಿತು.

ಆಧುನಿಕ ಕವಿತೆ: ಆಂಗ್ಲರ ಆಗಮನದಿಂದ ಗದ್ಯದಲ್ಲಾದಂತೆ ಕಾವ್ಯದಲ್ಲೂ ಬದಲಾವಣೆ ಉಂಟಾಯಿತು. 19ನೆಯ ಶತಮಾನದ ವೆಣ್ಮಣಿ ಅಚ್ಚನ್ ನಂಬೂದಿರಿ ಮತ್ತು ಮಗನ್ ನಂಬೂದಿರಿಗಳೆಂಬ ತಂದೆ ಮಕ್ಕಳು ಮಲಯಾಳವನ್ನು ತಮಿಳು ಮತ್ತು ಸಂಸ್ಕøತ ಭಾಷೆಯ ಪ್ರಭಾವದಿಂದ ಬಿಡಿಸಿ ಶುದ್ಧ ಮಲಯಾಳದಲ್ಲಿ ಗ್ರಂಥಗಳನ್ನು ರಚಿಸಿದರು. ಶೃಂಗಾರ, ಹಾಸ್ಯ, ವಿಡಂಬನೆ ಇವನ್ನು ಆಡುನುಡಿಯಲ್ಲಿ ಅಭಿವ್ಯಕ್ತಿಸಿರುವ ರೀತಿ ಅಪೂರ್ವವಾದುದು. ಆಟ್ಟಕ್ಕಥಾಶೈಲಿ ಸೃಷ್ಟಿಸಿದ ಹೊಸ ತಿರುವನ್ನು ವೆಣ್ಮಣಿಕಾವ್ಯಶೈಲಿ ಒಂದು ನಿರ್ದಿಷ್ಟ ದಾರಿಗೆ ಎಳೆದು ತಂದಿತು. ಇವರಿಬ್ಬರ ಕವಿತಾ ಪದ್ಧತಿ ವೆಣ್ಮಣಿ ಪ್ರಸ್ಥಾನ ಎನಿಸಿಕೊಂಡಿದೆ. ಇವರ ಈ ಕಾವ್ಯಶೈಲಿ ಮುಂದಿನ ಅನೇಕ ಕವಿಗಳಿಗೆ ಮಾರ್ಗ ದರ್ಶಕವಾಯಿತು.

ಇದೇ ವೇಳೆಗೆ ಬಂದ ಕೇರಳವರ್ಮ ವಲಿಯಕೋಯಿ ತಂಬುರಾನ್ (1845ರ್-115) ಮತ್ತು ಈತನ ಅಳಿಯ   ಎ. ಆರ್.ರಾಜರಾಜವರ್ಮ (1863ರ್-118) ಪ್ರಮುಖರು.  ಕೇರಳವರ್ಮ ಸಂಪ್ರದಾಯಬದ್ಧವಾಗಿ ಕಾವ್ಯಗಳನ್ನು ರಚಿಸಿದ. ರಾಜರಾಜವರ್ಮ ಸಂಪ್ರದಾಯವನ್ನು ಕಿತ್ತೊಗೆದು ಹೊಸಬಗೆಯಲ್ಲಿ (ಪ್ರಾಸತ್ಯಾಗ) ಕಾವ್ಯ ಸೃಷ್ಟಿಸಿದ. ಇದರಿಂದ ಮಾವ ಅಳಿಯಂದಿರಿಗೆ ಮನಸ್ತಾಪ ಉಂಟಾಯಿತು.

ಕೇರಳವರ್ಮನ ಮಯೂರ ಸಂದೇಶ ಸಂಪ್ರದಾಯಬದ್ಧ ದ್ವಿತೀಯಾಕ್ಷರ ಪ್ರಾಸದಿಂದ ಕೂಡಿದ ಮಣಿಪ್ರವಾಳ ಶೈಲಿಯ ಕೃತಿ. ಈತ ಕಾಳಿದಾಸನ ಶಾಕುಂತಲವನ್ನು ಮಲಯಾಳಕ್ಕೆ ತಂದದ್ದರಿಂದ ಕೇರಳಕಾಳಿದಾಸ ಎಂಬ ಬಿರುದು ಪಡೆದ. ಅಮರುಕ ಶತಕ. ಅನ್ಯಾಪದೇಶ ಶತಕವನ್ನೂ ಆತ ಅನುವಾದಿಸಿದ.

ರಾಜರಾಜವರ್ಮ ಕುಮಾರಸಂಭವ, ಮೇಘದೂತಗಳನ್ನು ಅನುವಾದಿಸಿದ. ಈತನ ಮಲಯವಿಲಾಸ ಕಾಲ್ಪನಿಕ ಸರಣಿಯ ಮೊದಲ ಕೃತಿ. ಮಲಯಪರ್ವತದಲ್ಲಿ ಪಯಣಿಸಿದ ಅನುಭವವನ್ನು ಇದರಲ್ಲಿ ಹೇಳಿದ್ದಾನೆ. ಈತ ಬರೆದ  ಕೇರಳೆಪಾಣಿನೀಯಮ್ (ವ್ಯಾಕರಣ). ಭಾಷಾಭೂಷಣಮ್, ವೃತ್ತಮಂಜರಿ, ಸಾಹಿತ್ಯ ಸಾಹ್ಯಮ್ ಪ್ರಸಿದ್ಧ ಗ್ರಂಥಗಳು. ಕಾಲ್ಪನಿಕ ಕವಿತಾ ಸರಣಿಯಲ್ಲಿ ಕೃತಿ ರಚಿಸಿದವರ ಪೈಕಿ ಕುಂಡೂರು ನಾರಾಯಣ ಮೆನೋನ್ ಮತ್ತು ಕೊಡುಂಗಲ್ಲೂರ್ ಕುಞ್ಞಕ್ಕುಟ್ಟನ್ ತಂಬುರಾನ್ ಪ್ರಮುಖರು.

ಕವಿತ್ರಯರು: ರಾಜರಾಜವರ್ಮನಿಂದ ಪ್ರಾರಂಭವಾದ ಕಾಲ್ಪನಿಕ ಪ್ರಜ್ಞೆ ಪರಮೋಚ್ಚ ಸ್ಥಿತಿ ತಲುಪಿದ್ದು                      ಆಶಾನ್, ವಲ್ಲತ್ತೋಳ್ ಮತ್ತು ಉಳ್ಳೂರ್ ಎಂಬ ಕವಿತ್ರೆಯರ ಕಾಲದಲ್ಲಿ ಇವರು ಒಂದೇ ಕಾಲದಲ್ಲಿ ಕವಿತಾ ಕ್ಷೇತ್ರ ಪ್ರವೇಶಿಸಿದರು. 
ಕುಮಾರನ್ ಆಶಾನ್  (1873-1924) ಮಲಯಾಳದ ರೊಮ್ಯಾಂಟಿಕ್ ಕಾವ್ಯ ಸಂಪ್ರದಾಯದ ಪ್ರವರ್ತಕ. ಆಶಾನ್ ಎಂದರೆ ಆಚಾರ್ಯ, ಅಧ್ಯಾಪಕ ಎಂದರ್ಥ. ಈತನಿಗೆ ಸಂಸ್ಕøತವಲ್ಲದೆ ಇಂಗ್ಲಿಷ್ ಭಾಷೆಯನ್ನೂ ಕಲಿಯುವ ಅವಕಾಶ  ದೊರೆಯಿತು. ಇದರ ಜೊತೆಗೆ ರಾಮಕೃಷ್ಣಪರಮಹಂಸ, ವಿವೇಕಾನಂದರ ಪ್ರಭಾವ ಒಂದು ಕಡೆ; ರವೀಂದ್ರನಾಥ ಠಾಗೂರ್, ಬಂಕಿಮಚಂದ್ರರ ಪ್ರಭಾವ ಇನ್ನೊಂದು ಕಡೆ. ಷೆಲ್ಲಿ, ಕೀಟ್ಸ್ ಮುಂತಾದವರ ಶೋಕಗೀತೆಗಳ ಪ್ರಭಾವದಿಂದ 'ವೀಣಪೂ (1909)ಎಂಬ ಖಂಡಕಾವ್ಯ ರಚಿಸಿದ. ವೀಣಪೂ ಎಂದರೆ ಬಿದ್ದುಹೋದ ಹೂ. ಇದು ಸುಂದರಿಯೊಬ್ಬಳು ಸತ್ತ ಕಥೆ. ಹೂವು ಆಕೆಯ ಪ್ರತೀಕ. ಇದಲ್ಲದೆ ನಳಿನಿ (1911), ಲೀಲ (1914) ಎಂಬ ಕಾವ್ಯಗಳನ್ನು ರಚಿಸಿದ್ದಾನೆ. ಪ್ರೇಮಕಾವ್ಯಗಳೇ ಆದ ಇವು ಕೂಡ ವೀಣಪೂ ಜಾಡಿನಲ್ಲೇ ಹೋಗುತ್ತವೆ. ನಳಿನಿ ಕಾವ್ಯದ ನಾಯಕ ದಿವಾಕರ. ನಳಿನಿ ಮತ್ತು ದಿವಾಕರ ಇಬ್ಬರಲ್ಲೂ ಜಾತಿಭೇದವಿದ್ದುದರಿಂದ ಇವರ ಮದುವೆ ಆಗುವುದಿಲ್ಲ. ಈ ವಿರಹಿಗಳ ಹಿಂದಿನ ನೆನಪುಗಳು ಇದರಲ್ಲಿದೆ. ಲೀಲ ಕಾವ್ಯದಲ್ಲಿ ಚಿಕ್ಕಂದಿನಿಂದಲೇ ಒಟ್ಟಿಗೆ ಆಡಿ  ಬೆಳೆದವರು ಲೀಲ ಮತ್ತು ಮದನ. ಲೀಲಳನ್ನು ಆಕೆಯ ತಂದೆ ಬೇರೊಬ್ಬನಿಗೆ ಮದುವೆ ಮಾಡಿದ್ದರಿಂದ ಮದನ ಹುಚ್ಚನಾಗಿ ಅಲೆಯುವುದು, ಲೀಲ ವಿಧವೆಯಾಗಿ ತಂದೆ ಮನೆ ಸೇರುವುದು  ಇಲ್ಲಿಯ ಕಥೆ. ಇದಲ್ಲದೆ ಪ್ರರೋದನಮ್, ಚಿಂತಾವಿಷ್ಟಯಾಯ ಸೀತ. ಚಂಡಾಲ ಭಿಕ್ಷುಕಿ, ಕರುಣ ಮುಂತಾದ ಕೃತಿಗಳನ್ನು ರಚಿಸಿದ್ದಾನೆ. 

ಇಂಗ್ಲೀಷಿನ ಭಾವಗೀತೆ ರೀತಿಯ ಕೃತಿಗಳನ್ನು ಮೊದಲು ರಚಿಸಿದಾತ ಆಶಾನ್, ಇವರಲ್ಲಿ ಭಾವಾಭಿವ್ಯಕ್ತಿಯೇ ಪ್ರಧಾನ. ಪುಷ್ಪವಾಟಿ, ಮಣಿಮಾಲ, ವನಮಾಲ ಮುಂತಾದ ಕವನ ಸಂಕಲನಗಳಲ್ಲಿ ಭಾವಗೀತೆಗಳಿವೆ. ಸಮಕಾಲೀನ ಸಾಮಾಜಿಕ ಸಮಸ್ಯೆಗಳನ್ನು ಆಶಾನ್ ತನ್ನ ಕಾವ್ಯಗಳಲ್ಲಿ ತಂದಿದ್ದಾನೆ.

	ವಲ್ಲತ್ತೋಳ್ (1879-1958) ರೊಮ್ಯಾಂಟಿಕ್ ಪದ್ಧತಿಯ ಮತ್ತೊಬ್ಬ ಕವಿ. ಈತನ ಪೂರ್ಣ ಹೆಸರು ವಲ್ಲತ್ತೋಳ್ ನಾರಾಯಣ ಮೆನೋನ್. ಈತ ಪ್ರಾರಂಭದಲ್ಲಿ ಋತುಸಂಹಾರ ಮತ್ತು ವಾಲ್ಮೀಕಿ ರಾಮಾಯಣಗಳನ್ನು ಭಾಷಾಂತರಿಸಿದ. 1910 ರಲ್ಲಿ ಬಧಿರ ವಿಲಾಪಮ್ ಎಂಬ ಕೃತಿ ರಚಿಸಿದ. ಇದರಲ್ಲಿ ತಾನು ಕಿವುಡ ಎಂಬುದನ್ನು ಕವಿ ಹೃದಯಸ್ಪರ್ಶಿಯಾಗಿ ವ್ಯಕ್ತಪಡಿಸಿದ್ದಾನೆ. 1914ರಲ್ಲಿ ಪ್ರಕಟವಾದ ಖಂಡಕಾವ್ಯ ಬಂಧನಸ್ಥಾನಾಯ ಅನಿರುದ್ಧನ್. ಇದು ಉಷೆ ಅನಿರುದ್ಧರ ಕಥೆ. ಇದನ್ನು ಇಂಗ್ಲಿಷ್ ಖಂಡಕಾವ್ಯದ ಮಾದರಿಯಲ್ಲಿ ರಚಿಸಿದ್ದಾನೆ. ಒರುಚಿತ್ರಮ್ ಕೃಷ್ಣನ ಮೋಹಕ ಚಿತ್ರವನ್ನು ವರ್ಣಿಸುವ ಖಂಡಕಾವ್ಯ. ಸಾಹಿತ್ಯ ಮಂಜರಿ ಎಂಬ ಕವಿತಾ ಸಂಕಲನ 11 ಭಾಗಗಳಲ್ಲಿ ಪ್ರಕಟವಾಗಿದೆ. ಶಿಷ್ಯನುಮ್ ಮಗನುಮ್ ಎಂಬ ಖಂಡಕಾವ್ಯದಲ್ಲಿ ಗಣಪತಿ ಮತ್ತು ಪರಶುರಾಮರ ಜಗಳ ಚಿತ್ರಿತವಾಗಿದೆ. 'ಮಗ್ದಲಿನ ಮರಿಯಮ್ ಮರಿಯ ಎಂಬ ವೇಶ್ಯೆ ಏಸುವಿನ ಕಾಲಿಗೆ ಬಿದ್ದು ಪಶ್ಚಾತ್ತಾಪ ಪಡುವ ಕಥೆ. ಈತ ದೇಶಭಕ್ತಿಗೀತೆಗಳನ್ನೂ ರಚಿಸಿದ್ದಾನೆ. ಮೋಹಿನಿಯಾಟ್ಟಮ್ ಬರೆದು ಕಥಕ್ಕಳಿಗೂ ತನ್ನ ಕೊಡುಗೆ ಇತ್ತಿದ್ದಾನೆ. ಕೇರಳ ಕಲಾಮಂಡಲ ಎಂಬ ಸಂಘ ಸ್ಥಾಪಿಸಿ ಕಥಕ್ಕಳಿಯ ಪ್ರಸಾರಕ್ಕಾಗಿಯೂ ಶ್ರಮಿಸಿದ. ವಿಷಯ ವೈವಿಧ್ಯದಲ್ಲಿ ಈತನ್ನು ಮೀರಿಸುವ ಕವಿಗಳು ಮಲೆಯಾಳ ಸಾಹಿತ್ಯದಲ್ಲಿಲ್ಲ.

ಉಳ್ಳೂರ್ ಪರಮೇಶ್ವರ ಅಯ್ಯರ್ (1877-1949): ಕೇರಳವರ್ಮರ ಶಿಷ್ಯ, ಕವಿತ್ರಯರಲ್ಲಿ ಕೊನೆಯವ. ದ್ವಿತೀಯಾಕ್ಷರ ಪ್ರಾಸದ ಉಮಾಕೇರಳಮ್ ಎಂಬ ಮಹಾಕಾವ್ಯ ರಚಿಸಿದ್ದಾನೆ. ಆ ವೇಳೆಗಾಗಲೇ ಆಶಾನ್, ವಲ್ಲತ್ತೋಳ್ ಹೊಸ ಸಂಪ್ರದಾಯದ ಹಾದಿಯಲ್ಲಿ ಹೆಸರುಗಳಿಸಿದ್ದರು. ಇದನ್ನು ಅರಿತ ಉಳ್ಳೂರ್ ತಾನೂ ಹೊಸ ಸಂಪ್ರದಾಯದತ್ತ ತಿರುಗಿ ಹಲವಾರು ಕಾವ್ಯಗಳನ್ನು ಬರೆದ. ಈತನ ಕೃತಿಗಳಲ್ಲಿ ದೇಶಭಕ್ತಿ ಮತ್ತು ರಾಜಭಕ್ತಿಗಳನ್ನು ಕಾಣಬಹುದು.

ಜಿ. ಶಂಕರಕು¾ುಪ್ (1901- 78) : ಕವಿತ್ರಯರ ಸಮರ್ಥ ಉತ್ತರಾಧಿಕಾರಿ. ಪ್ರಕೃತಿಪ್ರೇಮ ಮತ್ತು ದೇಶಪ್ರೇಮ ಇವನ ಕವಿತೆಗಳ ವಸ್ತು. ಸಾಹಿತ್ಯ ಕೌತುಕಮ್ ಕವಿತಾ ಸಂಕಲನ. ಗಾಂಧೀಜಿಯ ದೇಶಭಕ್ತಿ, ರವೀಂದ್ರರ ಪ್ರಕೃತಿಪ್ರೇಮ ಮತ್ತು ಕಮ್ಯುನಿಸ್ಟ್ ತತ್ತ್ವಗಳಿಂದ ಈತ ಪ್ರಭಾವಿತನ್ರಾದ್ದಾನೆ ಓಡಕ್ಕುಳಲ್ (ಕೊಳಲು) ಎಂಬ 60 ಕವನಗಳ ಸಂಕಲನಕ್ಕೆ ಪ್ರಪ್ರಥಮ ಭಾರತೀಯ ಜ್ಞಾನಪೀಠ ಪ್ರಶಸ್ತಿ (1965) ದೊರಕಿದೆ. ಸಾಹಿತ್ಯ ಅಕಾಡೆಮಿ ಮತ್ತು ಸೋವಿಯತ್ ರಷ್ಯದ ಪುರಸ್ಕಾರಗಳೂ ಲಭಿಸಿವೆ. 

ಇಟಪ್ಪಳ್ಳಿ ರಾಘವನ್ ಪಿಳ್ಳೆ (1909-1936) : ಮುಖ್ಯ ಕೃತಿ ಮಣಿನಾದಂ, ಇಪ್ಪತ್ತೇಳನೆಯ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಈ ಕವಿಯ ಆತ್ಮಹತ್ಯೆಯೇ ಈತನ ಆತ್ಮೀಯ ಮಿತ್ರ ಚಙÐಂಪು¿ ಕೃಷ್ಣಪಿಳ್ಳೆಯನ್ನು  "ರಮಣನ್" ರಚಿಸಲು ಪ್ರೇರೇಪಿಸಿದೆ.

ಚಙÐಂಪು¿ ಕೃಷ್ಣ ಪಿಳ್ಳೆ (1912-1949): ಅತ್ಯಂತ ಜನಮೆಚ್ಚುಗೆ ಪಡೆದ ಪ್ರಣಯಕವಿ. ನಾಲ್ವತ್ತಕ್ಕಿಂತಲೂ ಹೆಚ್ಚು ಕವನಲಸಂಕಲನಗಳ ಕರ್ತೃ. ಮುಖ್ಯ ಕೃತಿಗಳು: ರಮಣನ್, ಬಾಷ್ಪಾಂಜಲಿ, ಸ್ಪಂದಿಕ್ಕುನ್ನ ಅಸ್ಥಿಮಾಡಂ, ಸ್ವರರಾಗಸುಧ.

ನಾಲಾಪ್ಪಾಟ್ಟ್ ಬಾಲಾಮಣಿ ಅಮ್ಮ (1909-2004): ದಾರ್ಶನಿಕ ವೀಕ್ಷಣದ ಕವಯಿತ್ರಿ. ಮುಖ್ಯ ಕೃತಿಗಳು: ಅಮ್ಮ, ಕುಟುಂಬಿನಿ, ಮುತ್ತಶ್ಶಿ, ಲೋಕಾಂತರಗಳಲ್ಲಿ, ಸೋಪಾನ ಇತ್ಯಾದಿ. ಹತ್ತೊಂಭತ್ತು ಕವನ ಸಂಕಲನಗಳು. ಪ್ರಶಸ್ತಿಗಳು: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವಳ್ಳತ್ತೋಳ್ ಪುರಸ್ಕಾರಂ, ಎ¿ುತ್ತಚ್ಛನ್ ಪುರಸ್ಕಾರಂ, ಸರಸ್ವತಿ ಸಮ್ಮಾನ್ ಮತ್ತು ಪದ್ಮಭೂಷಣ್ ಪ್ರಶಸ್ತಿ.

ವೆಣ್ಣಿಕ್ಕುಳಂ ಗೋಪಾಲಕುರುಪ್ (1902ರ್-180): ಮುಖ್ಯ ಕೃತಿಗಳು: ಮಾಣಿಕ್ಯವೀಣಾ, ಕದಳೀವನಂ, ಸೌಂದರ್ಯಪೂಜ, ವಸಂತೋತ್ಸವ-ಇತ್ಯಾದಿ, ಅನುವಾದಗಳು: ತಿರುಕ್ಕುರಳ್, ತುಳಸೀದಾಸ ರಾಮಯಣಂ, ಭಾರತಿಯಾರುಟೆ ಪದ್ಯಙÐಳ್. ಪ್ರಶಸ್ತಿಗಳು: ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಓಡಕ್ಕು¿ಲ್ ಪ್ರಶಸ್ತಿ, ತಮಿಳು ಬರಹಗಾರರ ವತಿಯಿಂದ ಚಿನ್ನದ ಪದಕ.

ಪಿ. ಕುಞ್ಞರಾಮನ್ ನಾಯರ್ (1906-1978): ಮುಖ್ಯ ಕೃತಿಗಳು: ಕಳಿಯಚ್ಛನ್, ತಾಮರತ್ತೋಣಿ, ತಾಮರತ್ತೇನ್, ಪೊಕ್ಕಳಂ-ಇತ್ಯಾದಿ ಎಪ್ಪತ್ತರಷ್ಟು ಕವನಸಂಕಲನಗಳು. ಪ್ರಶಸ್ತಿಗಳು: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.

ವೈಲೋಪ್ಪಿಳ್ಳಿ ಶ್ರೀಧರಮೆನೊನ್ (1911-1988): ಮುಖ್ಯ ಕೃತಿಗಳು: ಕನ್ನಿಕ್ಕೊಯ್ತ್, ಶ್ರೀರೇಖ, ಕಟಲ್‍ಕಾಕ್ಕಕಳ್, ಕುಟಿಯೊ¿ôಕ್ಕಲ್, ವಿಟ-ಇತ್ಯಾದಿ, ಪ್ರಶಸ್ತಿಗಳು: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಓಟಕ್ಕು¿ಲ್ ಪ್ರಶಸ್ತಿ ಮತ್ತು ಸೋವಿಯಟ್ ಲ್ಯಾಂಡ್ ನೆಹರು ಅವಾರ್ಡ್.

ಎಟಶ್ಶೇರಿ ಗೋವಿಂದನ್ ನಾಯರ್ (1906-1974): ಮುಖ್ಯ ಕೃತಿಗಳು: ಅಳಕಾವಲಿ ಕಾವಿಲೆಪ್ಪಾಟ್, ಕ¾ುತ್ತ ಚೆಟ್ಟಿಚ್ಚಿಕಳ್, ತೆರಞÉ್ಞಟುತ್ತ ಕಥಕಳ್, ಕೂಟ್ಟು ಕೃಷಿ (ನಾಟಕ)-ಇತ್ಯಾದಿ. ಪ್ರಶಸ್ತಿಗಳು: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.

ಕೆ.ಕೆ., ರಾಜ (1893-1968): ಮುಖ್ಯ ಕೃತಿಗಳು: ಬಾಷ್ಟಾಂಜಲಿ, ನಟಕ್ಕಾತ್ತ ಞÁನ್, ತುಳಸೀದಾನಂ-ಇತ್ಯಾದಿ ಹನ್ನೆರಡಕ್ಕಿಂತಲು ಹೆಚ್ಚು ಕವನಸಂಕಲನಗಳು. ಪ್ರಶಸ್ತಿ: ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.

ಎನ್. ವಿ. ಕೃಷ್ಣವಾರಿಯರ್ (1917-1989): ಮುಖ್ಯ ಕೃತಿಗಳು: ನೀಂಟ ಕವಿತಕಳ್, ಕು¾õÉೀಕ್ಕೂಟಿ ನೀಂಟ ಕವಿತಕಳ್, ಕೊಚ್ಚುತೊಮ್ಮನ್, ಗಾಂಧಿಯುಂ ಗೋಡ್ಸೇಯುಂ, ಎನ್.ವಿ. ಕವಿತೆಗಳು-ಇತ್ಯಾದಿ, ಪ್ರಶಸ್ತಿಗಳು: ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಸೋವಿಯಟ್ ಲ್ಯಾಂಡ್ ನೆಹರು ಅವಾರ್ಡ್.

ಪಾಲಾ ನಾರಯಣನ್ ನಾಯರ್ (ಜನನ:1911 ಡಿಸೆಂಬರ್): ಮುಖ್ಯ ಕೃತಿಗಳು: ಪೌರ್ಣಮಿ, ಅಮೃತಕಲ, ಜೀವಿತಕಾಹಳಂ, ಕೇರಳಂ ವಳರುನ್ನು, ಪಾಲಾ¿ô-ಇತ್ಯಾದಿ. ಮೂವತ್ತಕ್ಕಿಂತಲೂ ಹೆಚ್ಚು ಕವನಸಂಕಲನಗಳು. ಪ್ರಶಸ್ತಿಗಳು: ವಳ್ಳತ್ತೋಳ್ ಪುರಸ್ಕಾರ, ಎ¿ುತ್ತಚ್ಛನ್ ಪುರಸ್ಕಾರ, ಎಂ.ಪಿ. ಪಾಳ್ ಪ್ರೈeóï ಮತ್ತು ಕಲ್ಲ್ಯಾಣ ಕೃಷ್ಣ ಮೆನನ್ ಪ್ರೈeóï.

ಎಂ.ಪಿ. ಅಪ್ಪನ್ (ಜನನ:1913): ಮುಖ್ಯ ಕೃತಿಗಳು: ವೆಳ್ಳಿನಕ್ಷತ್ರಂ, ಸೌಂದರ್ಯಧಾರ, ಅಮೃತಬಿಂದುಕ್ಕಳ್-ಇತ್ಯಾದಿ, ಇಪ್ಪತ್ತಕ್ಕಿಂತ ಹೆಚ್ಚು ಗದ್ಯ-ಪದ್ಯ ಸಂಕಲನಗಳು. ಪ್ರಶಸ್ತಿ: ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.

ನಾಲಾಂಕಲ್ ಕೃಷ್ಣಪಿಳ್ಳೆ (1910-1991): ಮುಖ್ಯ ಕೃತಿಗಳು: ರಾಗತರಂಗ, ಶೋಕಮುದ್ರ, ಸಿಂಧೂರರೇಖ, ರತ್ನಕಂಕಣಂ ಇತ್ಯಾದಿ. ಹನ್ನೆರಡು ಕವನ ಸಂಕಲನಗಳು, ಮಹಾಕ್ಷೇತ್ರಙÐಳುಟೆ ಮುನ್ನಿಲ್ ಒಳಗೊಂಡ ಹತ್ತು ಗದ್ಯಗ್ರಂಥಗಳು. ಪ್ರಶಸ್ತಿ: ತಿರುವಿತಾಂಕೂರ್ ದೇವಸ್ವಂ ಬೋರ್ಡ್ ಅವಾರ್ಡ್.

ಸಿಸ್ಟರ್ ಬೆನೀಞ್ಞ (1901-1985): ಮುಖ್ಯ ಕೃತಿಗಳು: ಕಾವ್ಯಮೇಳ, ಮಧುಮಂಜರಿ, ಇಲಞ್ಞಪ್ಪೂಕ್ಕಳ್ ಇತ್ಯಾದಿ. ಹದಿನಾರು ಕವನಸಂಕಲನಗಳು. ಪ್ರಶಸ್ತಿ: ಸಾಹಿತ್ಯಸೇವೆಗಾಗಿ ಪೋಪ್ ಅವರಿಂದ ಪ್ರಶಸ್ತಿ.

ಒಳಪ್ಪಮಣ್ಣ ಸುಬ್ರಹ್ಮಣ್ಯನ್ ನಂಬೂದಿರಿಪ್ಪಾಡ್ (ಜನನ:1923): ಮುಖ್ಯ ಕೃತಿಗಳು: ಕಿಲುಙುÐನ್ನ ಕಯ್ಯಾಮಂ, ಪಾಂಚಾಲಿ, ನಙÉÐೀಮಕ್ಕುಟ್ಟಿ, ಏಹಿ ಸೂನರಿ-ಇತ್ಯಾದಿ. ಪ್ರಶಸ್ತಿಗಳು: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.

ಅಕ್ಕಿತ್ತಂ ಅಚ್ಚುತನ್ ನಂಬೂದಿರಿ (ಜನನ:1926): ಮುಖ್ಯ ಕೃತಿಗಳು: ಇರುಪತಾಂ ನೂಟಾಂಟಿಂಡೆ ಇತಿಹಾಸಂ, ಬಲಿದರ್ಶನಂ, ಕರತಲಾಮಲಕಂ, ಪಂಚವರ್ಣಕ್ಕಿಳಿಕಳ್, ನಿಮಿಷಕ್ಷೇತ್ರಂ-ಇತ್ಯಾದಿ ಮೂವತ್ತು ಪುಸ್ತಕಗಳು; ಸಿ.ಆರ್.ದಾಸ್. ಕೃತಿ 'ಸಾಗರಗೀತದ ಅನುವಾದ, ಪ್ರಶಸ್ತಿಗಳು: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.

ಕಟತ್ತನಾಟ್ಟ್ ಮಾಧವಿಯಮ್ಮ (ಜನನ:1909): ಕಲ್ಯೋಪಹಾರ, ಗ್ರಾಮಶ್ರೀಕಳ್, ಕಣಿಕ್ಕೊನ್ನ-ಇತ್ಯಾದಿ

ಓ.ಎನ್.ವಿ.ಕುರುಪ್ (ಜನನ:1931): ಮುಖ್ಯ ಕೃತಿಗಳು: ದಹಿಕ್ಕುನ್ನ ಪಾನಪಾತ್ರಂ, ಮರುಭೂಮಿ. ಆಗ್ನಿಶಲಭಗಳು, ಮಯಿಲ್ಪೀಲಿ, ಹತ್ತಕ್ಕಿಂತಲೂ ಹೆಚ್ಚು ಕವನಸಂಕಲನಗಳು. ಅಸಂಖ್ಯ ಚಿತ್ರಗೀತೆಗಳು. ಪ್ರಶಸ್ತಿಗಳು: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.

ವಯಲಾರ್ ರಾಮವರ್ಮ (1928-1975): ಮುಖ್ಯ ಕೃತಿಗಳು: ಆಯಿಷ, ಮುಳಂಕಾಡುಕಳ್, ಸರ್ಗಸಂಗೀತಂ-ಇತ್ಯಾದಿ. ಹದಿನೈದು ಕವನಸಂಕಲನಗಳು. ಬಹಳಷ್ಟು ಚಿತ್ರಗೀತೆಗಳು. 

ಪಿ. ಭಾಸ್ಕರನ್ (ಜನನ:1924): ಮುಖ್ಯ ಕೃತಿಗಳು: ವಯಲರ್ ಗರ್ಜಿಕ್ಕುನ್ನು, ಓರ್ಕುಕ ವಲ್ಲಪ್ಪೋ¿ುಂ, ಸತ್ರತ್ತಿಲ್ ಒರು ರಾತ್ರಿ, ಮುಳ್ಕಿರೀಟಂ-ಇತ್ಯಾದಿ. 

ಚೆ¿ôಯಾನ್ ಚೆ¿ôಯಾನ್ (ಜನನ:1932): ಮುಖ್ಯ ಕೃತಿಗಳು: ಪವಿ¿ಪ್ಪುಟ್ಟ್, ಐರಾವತಂ, ಕುಶನುಂ ಲವನುಂ ಕುಚೇಲನುಂ ಪಾಲಾ¿ôಮಥನಂ-ಇತ್ಯಾದಿ ಕವನ ಸಂಕಲನಗಳು. "ಪ್ರೇಮಿಕ್ಕುಕ ಎನ್ನ ಅವಕಾಶಂ" ಸಣ್ಣ ಕಥಾಸಂಕಲನ. 

ಸುಗತಕುಮಾರಿ (ಜನನ:1934): ಮುಖ್ಯ ಕೃತಿಗಳು: ಪಾವಂ ಮಾನವಹೃದಯಂ, ಪಾತಿರಾಪೂಕ್ಕಳ್, ಮುತ್ತುಚ್ಚಿಪ್ಪಿ, ಸ್ವಪ್ನಭೂಮಿ, ಅಂಬಲಮಣಿಕಳ್ ಇತ್ಯಾದಿ. ಪ್ರಶಸ್ತಿಗಳು: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ. 

ಎನ್.ಎನ್ ಕಕ್ಕಾಟ್ (1927-1987): ಮುಖ್ಯ ಕೃತಿಗಳು: ತೀರ್ಥಾಟನಂ, ನಿಶಾಮುಖಂ, ್163, ಪತಾಳತ್ತಿಂಡೆ ಮು¿ಕ್ಕಂ. 

ಎಂ. ಗೋವಿಂದನ್ (ಜನನ:1919): ಮುಖ್ಯ ಕೃತಿಗಳು: ಜ್ಞಾನಸ್ನಾನಂ, ಮೇನಕ, ರಾಣಿಯುಟೆ ಪಟ್ಟಿ, ಸಮಸ್ಯಕಳ್-ಇತ್ಯಾದಿ ಹದಿಮೂರಕ್ಕಿಂತಲು ಹೆಚ್ಚು ಕೃತಿಗಳು. 

ಡಾ.ಕೆ.ಅಯ್ಯಪ್ಪಪಣಿಕ್ಕರ್ (ಜನನ:1930): ಮುಖ್ಯ ಕೃತಿಗಳು: ಅಯ್ಯಪ್ಪಪಣಿಕ್ಕರುಟೆ ಕೃತಿಕಳ್ (3.ಸಂಪುಟಗಳು) ಅಯ್ಯಪ್ಪಪಣಿಕ್ಕರುಟೆ ಲೇಖನಙÐಳ್ (2.ಸಂಪುಟಗಳು) ಮತ್ತು ಮಯಕ್ಕೋವಸ್ಕಿಯುಟೆ ಕವಿತಕಳ್ (ಅನುವಾದ). 

ವಿಷ್ಣು ನಾರಾಯಣನ್ ನಂಬೂದಿರಿ (ಜನನ:1939): ಮುಖ್ಯ ಕೃತಿಗಳು: ಸ್ವಾತಂತ್ರ್ಯತ್ತೆಕ್ಕು¾ುಚ್ಚ್ ಒರುಗೀತಂ, ಪ್ರೇಮಗೀತಙÐಳ್-ಇತ್ಯಾದಿ. 

ಪಿ. ನಾರಾಯಣಕುರುಪ್ (ಜನನ:1934): ಮುಖ್ಯ ಕೃತಿಗಳು: ಗೀತಾನವನೀತಂ, ಅಸ್ತ್ರಮಾಲ್ಯಂ, ಗೆಥೆಯುಟೆ "ಫೋಸ್ಟಸ್" ಮಲಯಾಳಕ್ಕೆ ಅನುವಾದ-ಇತ್ಯಾದಿ. 

ಜಿ.ಕುಮಾರಪ್ಪಿಳ್ಳೆ (ಜನನ: 1923): ಮುಖ್ಯ ಕೃತಿಗಳು: ಅರಳಿಪ್ಪೂಕ್ಕಳ್, ಮರುಭೂಮಿಯುಟೆ ಕಿನಾಕ್ಕಳ್, ಕವಿತ, ಓರ್ಮಯುಟೆ ಸುಗಂಧಂ-ಇತ್ಯಾದಿ. 

ಓ.ಎಂ. ಅನುಜನ್ (ಜನನ: 1928): ಮುಖ್ಯ ಕೃತಿಗಳು: ಅಗಾಧ ನೀಲಿಮಗಳು, ಸೃಷ್ಟಿ, ವೈಶಾಖಂ-ಇತ್ಯಾದಿ. 

ಎಂ.ಎನ್. ಪಾಲೂರ್ (ಜನನ: 1923): ಮುಖ್ಯ ಕೃತಿಗಳು:ಪೇಡಿತ್ತೊಂಟನ್, ತೀರ್ಥಯಾತ್ರ, ಕಳಿಕ್ಕಳಂ, ಭಂಗಿಯುಂ ಅಭಂಗಿಯುಂ-ಇತ್ಯಾದಿ.

ಕೆ.ವಿ. ರಾಮಕೃಷ್ಣನ್ (ಜನನ:1935): ಮುಖ್ಯ ಕೃತಿಗಳು: ವರಂಟ ಗಂಗ, ಅಗ್ನಿಶುದ್ಧಿ, ನಾ¿ುಕವಟ್ಟ, ಕೆಟಾವಿಳಕ್ಕ್, ಚತುರಂಗಂ, ನಿರ್ಮಾಲ್ಯದರ್ಶನಂ, ಕವಿತಯುಂ ತಾಳವುಂ, ಕೊಟ್ಟುಂ ಚಿರಿಯುಂ, ಸಹಯಾತ್ರಿಕರೋಡ್-ಇತ್ಯಾದಿ. 

ಕಟಮ್ಮನಿಟ್ಟ ರಾಮಕೃಷ್ಣನ್ (ಜನನ:1935): ಮುಖ್ಯ ಕೃತಿಗಳು: ಕಟಮ್ಮನಿಟ್ಟಯುಟೆ ಕವಿತಕಳ್, ಕಟಿಞ್ಞೂಲ್ ಪೊಟ್ಟನ್, ಮ¿ ಪೆಯ್ಯುನ್ನು ಮದ್ದಳಂ ಕೊಟ್ಟುನ್ನು-ಇತ್ಯಾದಿ. 

ಸಚ್ಚಿದಾನಂದನ್ (ಜನನ:1946): ಮುಖ್ಯ ಕೃತಿಗಳು: ಎ¿ುತ್ತಚ್ಛನ್ ಎ¿ುತುಂಬೋಳ್, ಪೀಡನಕಾಲಂ, ಸಚ್ಚಿದಾನಂದಂಡೆ ಕವಿತಕಳ್, ವೀಡುಮಾಟಂ, ಇವನೆಕ್ಕೂಡಿ-ಇತ್ಯಾದಿ. 

ಎಸ್.ರಮೇಶನ್ ನಾಯರ್ (ಜನನ:1943): ಮುಖ್ಯ ಕೃತಿಗಳು: ಅಗ್ರೇಪಶ್ಯಾಮಿ, ಕುಮಾರಪುರಂ, ಹೃದಯವೀಣ, ಪಾಂಬಾಟ್ಟಿ, ಊರ್ವಶಿ, ಕಸ್ತೂರಿಗಂಧಿ, ಜನ್ಮಪುರಾಣಂ, ಸ್ವಾತಿಮೇಘಂ, ಅಳಕನಂದ, ಸರಯೂತೀರ್ಥಂ ಮತ್ತು ಚಿಲಪ್ಪತಿಕಾರಂ, ತಿರುಕ್ಕುರುಳ್ (ಭಾಷಾಂತರಗಳು). 

ಯೂಸಫಲಿ ಕೇಚೇರಿ (ಜನನ:1934): ಮುಖ್ಯ ಕೃತಿಗಳು; ಸೈನಬ, ಅಂಚ್ಚು ಕನ್ಯಕಕಳ್, ಏಚಿಪ್ಪು¿, ಆಯಿರಂ ನಾವುಳ್ಳ ಮೌನಂ, ಚಿತ್ರಗೀತೆಗಳು-ಇತ್ಯಾದಿ. 

ಕಾರೂರ್ ಶಶಿ (ಜನನ:1939): ಮುಖ್ಯ ಕೃತಿಗಳು: ಅ¾ುಯಾಮೊ¿ುಕಳ್, ಮಹಾನದಿ, ಶ್ಯಾಮಪಕ್ಷಂ-ಇತ್ಯಾದಿ. 

ಡಿ.ವಿನಯಚಂದ್ರನ್ (ಜನನ:1946): ಮುಖ್ಯ ಕೃತಿಗಳು: ವಂಶಗಾಥಾ, ಪೊಡಿಚ್ಚಿ, ವಿನಯಚಂದ್ರಂಡೆ ಕವಿತಕಳ್, ನರಕಂ ಒರು ಪ್ರೇಮ ಕವಿತ ಎ¿ುತುನ್ನು, ವೀಟ್ಟಿಲೇಕ್ಕುಳ್ಳ ವ¿ು-ಇತ್ಯಾದಿ. ಬಾಲಚಂದ್ರನ್ ಚುಳ್ಳಿಕ್ಕಾಡ್ (ಜನನ:1952): ಮುಖ್ಯ ಕೃತಿಗಳು: ಅಮಾವಾಸಿ, ಗಜóಲ್, ಪತಿನೆಟ್ಟು ಕವಿತಕಳ್-ಇತ್ಯಾದಿ.

ಈ ಕವಿಗಳಷ್ಟೇ ಅಲ್ಲದೆ ಇನ್ನೂ ಅನೇಕ ಕವಿಗಳು ಮಲಯಾಳ ಕಾವ್ಯ ಕ್ಷೇತ್ರಕ್ಕೆ ತಮ್ಮ ಕೊಡುಗೆಗಳನ್ನು ಸಲ್ಲಿಸಿದ್ದಾರೆ; ಸಲ್ಲಿಸುತ್ತಿದ್ದಾರೆ. ಹೀಗೆ ಮಲಯಾಳ ಕಾವ್ಯ ಚೈತನ್ಯದಿಂದ ಕೂಡಿದೆ.

   	 ಆಧುನಿಕ ಕಥನ ಸಾಹಿತ್ಯ: 1937ರ ತರುವಾಯ ಐರೋಪ್ಯ ಸಾಹಿತ್ಯ ಮತ್ತು ಕಮ್ಯೂನಿಸ್ಟ್ ತತ್ವ ಪ್ರಭಾವದಿಂದ ಹೊಸ ಹೊಸ ಕಾದಂಬರಿಗಳೂ ಸಣ್ಣಕತೆಗಳೂ ಬಂದುವು. ಶ್ರೇಷ್ಠ ಕಾದಂಬರಿಗಾರರಲ್ಲಿ ಹೆಚ್ಚಿನವರು ಶ್ರೇಷ್ಠ ಸಣ್ಣಕತೆಗಳನ್ನೂ ರಚಿಸಿರುವರು. ಈ ಪ್ರಕ್ರಿ0iÉು `ನವೋತ್ಥಾನ ಅವಧಿಯ ಕೇಶವ ದೇವ್(1905-1983) ಅವರಿಂದ ಮೊದಲ್ಗೊಂಡು ಈಗಿನ(2005)ವರಾದ ಸಾರಾ ಜೋಸೆಫ್ (ಜ:1946)ವರೆಗೂ ಅವಿರತವಾಗಿ ಮುಂದುವರಿದಿದೆ. ಮೊದಲಕಾದಂಬರಿ ಪ್ರಕಟಗೊಂಡದ್ದು 1987ರಲ್ಲಿ. ಮುಂದಿನ 115ವರ್ಷಗಳ ಅವಧಿಯನ್ನು ವಿವರಣೆಯ ಅನುಕೂಲಕ್ಕಾಗಿ ಐದು ಘಟ್ಟಗಳನ್ನಾಗಿ ಗುರುತಿಸಬಹುದು. 
  
 	ಮೊದಲ ಘಟ್ಟ: 1887ರಲ್ಲಿ ಪ್ರಕಟವಾದ 'ಕುಂದಲತ ಮಲಯಾಳದ ಮೊದಲನೆಯ ಕಾದಂಬರಿ. ಈ ಕಾದಂಬರಿಯಲ್ಲಿ ಒಂದು ರೀತಿಯ ಅದ್ಭುತ ಪುರಾಣ ಛಾಯೆ ಕಂಡುಬರುತ್ತದೆ. ಅದಲ್ಲದೆ ಬೇರೆ ಯಾವುದೇ ಗುಣವಿದ್ದರೂ ಕೇರಳೀಯತ್ವವೆಂಬ ಗುಣ ಇಲ್ಲ. `ಕುಂದಲತ ಇವತ್ತು ಯಾವುದೇ ಆಕರ್ಷಣೆಗೂ ಒಳಗಾಗುತ್ತಿಲ್ಲ. 1889ರಲ್ಲಿ ಪ್ರಕಟಗೊಂಡ `ಇಂದುಲೇಖ' ಕಾದಂಬರಿಯನ್ನು ಇಂದಿಗೂ ಜನರು ಧಾರಾಳವಾಗಿ ಓದುತ್ತಾರೆ. ಈ ಕಾದಂಬರಿಯ ಮೂಲಕ ಚಂದು ಮೆನನ್ (1845-1899) ಹೇಳುತ್ತಿರುವುದು ಒಂದು ಹಳೆಯ ಅಳಿಯಸಂತಾನ ಕುಟುಂಬದ ಕಥೆ. ಅಂದಿನ ಕುಲೀನ ನಾಯರ್ ಕುಟುಂಬಗಳಲ್ಲಿ ಮತ್ತೆಲ್ಲಿಯೂ ಆಚರಣೆಯಲ್ಲಿದ್ದಿರದ ಒಂದು ರೀತಿಯ ವಿವಾಹ ಸಂಪ್ರದಾಯ ಆಚರಣೆಯಲ್ಲಿತ್ತು-ನಾಯರ್ ಸ್ತ್ರೀಯರನ್ನು ನಂಬೂದಿರಿ ಬಾಹ್ಮಣರಿಗೆ ಜಾತಿ ಮಹತ್ವವನ್ನು ಮಾತ್ರ ನೋಡಿ ಮದುವೆಮಾಡಿಕೊಡುವುದು. ಅಂತಹ ಬ್ರಾಹ್ಮಣರಲ್ಲಿ ಹೆಚ್ಚಿನವರು ವೃದ್ಧರೂ ಆಗಿರುತ್ತಿದ್ದರು. ಬ್ರಾಹ್ಮಣನಿಗೆ ಸಂಬಂಧಿಸಿ ಈ ವಿವಾಹ ಅವೈದಿಕ. ಆತನನ್ನು ಹೆಂಡತಿಯ ಕುಟುಂಬದವರು ವಿಶಿಷ್ಟ ಅತಿಥಿಯಾಗಿ ಪರಿಗಣಿಸುತ್ತಿದ್ದರು. ಈ ಸಂಪ್ರದಾಯ ಆ ಎರಡು ಸಮಾಜಗಳನ್ನೂ-ಮುಖ್ಯವಾಗಿ ಆಯಾಯಾ ಸಮಾಜದ ಸ್ತ್ರೀಯರನ್ನು- ಅಧೋಗತಿಗಿಳಿಸುತ್ತದೆ ಎನ್ನುವುದು ಸಮಾಜ ಸುಧಾರಕರರಿಗೆ ಅರ್ಥವಾಗಲಿಲ್ಲ. ಅರ್ಥಮಾಡಿಕೊಂಡವರು ಮನಬಿಚ್ಚಿ ಹೇಳಲೂ ಇಲ್ಲ. ಈ ಪರಿಸ್ಥಿತಿಗೆ ಚಂದು ಮೆನನ್ ಶಕ್ತಿಯುತವಾಗಿ ವ್ಯಂಗೋಕ್ತಿಯಿಂದ ಸುಂದರವಾದ ರೂಪವನ್ನಿತ್ತರು. ಅದೇ `ಇಂದುಲೇಖ'. ಇದು ಮೇಲುನೋಟಕ್ಕೆ ಸರ್ವಸಾಮಾನ್ಯವಾದ ಒಂದು ಪ್ರಣಯ ಕಥೆ. ಕಥೆಗಿಂತಲೂ ಸಾಮಾನ್ಯ ಇದರ ಭಾಷೆ. ತಾನೊಂದು ಸಾಹಿತ್ಯಕೃತಿಯನ್ನು ರಚಿಸುತ್ತಿದ್ದೇನೆ ಎಂಬ ಭಾವನೆ0iÉುೀ ಇಲ್ಲ ಚಂದುಮೆನನ್‍ರಿಗೆ. ಆದರೆ ಈ ಸಾಧಾರಣತ್ವದ ಹಿಂದೆ ನಂಬುವುದಕ್ಕೂ ಸಾಧ್ಯವಿಲ್ಲದಂಥ ಶಕ್ತಿಯೂ ಕಳೆಗುಂದದ ಹೊಸತನವೂ ಶೋಭಿಸುತ್ತಿವೆ. ಆದುದರಿಂದಲೇ ಇಂದಿಗೂ ಜನರು `ಇಂದುಲೇಖ' ಕಾದಂಬರಿಯನ್ನು ಕುತೂಹಲದಿಂದ ಓದುತ್ತಿರುವರು. ಈ ಕಾದಂಬರಿಯ ಕಥಾಪಾತ್ರಗಳು ಒಂದು ಶತಮಾನದ ಹಿಂದೆ ಜೀವಿಸಿದ್ದವರಂತೆ ತೋರದೆ, ಈಗಲೂ ನಮ್ಮ ಹಳ್ಳಿಗಳಲ್ಲಿ ಜೀವಿಸುತ್ತಿರುವ ಸುಪರಿಚಿತ ವ್ಯಕ್ತಿಗಳಂತೆ ಕಂಡು ಬರುತ್ತಾರೆ. ಏಲಕ್ಕಿ ತೋಟ, ಹತ್ತಿಗಿರಣಿ ಮುಂತಾದವುಗಳನ್ನೆಲ್ಲ `ಇಂದುಲೇಖ'ದಲ್ಲಿ ಪರಾಮರ್ಶಿಸಿದ್ದಾರೆ. ನಾಸ್ತಿಕವಾದವನ್ನು ಗ್ರಂಥಕರ್ತೃ ನೇರವಾಗಿ ಒಪ್ಪಿಕೊಳ್ಳದಿದ್ದರೂ ಡಾರ್ವಿನ್ನನ ಹಾಗೂ ಥಾಮಸ್ ಹೆನ್ರಿ ಹಕ್ಸಿಲಿಯ ವಿಚಾರಸರಣಿಗಳನ್ನು ಚರ್ಚಾ ವಿಷಯವಾಗಿ ಕೈಗೆತ್ತಿಕೊಂಡಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಚಂದು ಮೆನನ್ ಯಥಾರ್ಥವಾಗಿ ದೂರದೃಷ್ಟಿಯುಳ್ಳ ಕಾದಂಬರಿಗಾರರಾಗಿದ್ದರು. 

  	ಪ್ರಾರಂಭದ ಮಲಯಾಳ ಕಾದಂಬರಿಗಾರರಲ್ಲಿ ಅತ್ಯಂತ ಪ್ರತಿಭಾಶಾಲಿಯಾಗಿದ್ದ ಸಿ. ವಿ. ರಾಮನ್ ಪಿಳ್ಳೆ (1858-1922) ಚರಿತ್ರೆಯ ಪುನರ್ನಿರ್ಮಾಣದಲ್ಲಿ ತೊಡಗಿದುದು ಕಂಡುಬರುತ್ತದೆ. ಸಿ. ವಿ. ರಾಮನ್ ಪಿಳ್ಳೆ ಚಂದು ಮೆನನನ್‍ರಿಗಿಂತ ಹೆಚ್ಚು ಸಂಪ್ರದಾಯವಾದಿ ಕೂಡಾ . ಈತ ದೊಡ್ಡ ರಾಜಭಕ್ತ; ಸಮಾಜಪ್ರೇಮಿ; ಅಪ್ಪಟ ಸನ್ಮಾರ್ಗವಾದಿ ಮತ್ತು ವೀರಾರಾಧಕನೂ ಹೌದು. ಸಿ. ವಿ.ಗೆ ಆತನಿಗಿಂತ ಹಿಂದಿನ ಅಥವಾ ಮುಂದಿನ ಯಾವ ಕಾದಂಬರಿಗಾರನಿಗಿಂತಲೂ ಮಿಗಿಲಾದ ಒಂದು ವಿಶಿಷ್ಟ ಶಕ್ತಿ-ಒಂದೇ ನೋಟದಿಂದ ತ್ರಿಕಾಲವನ್ನೂ ಕಾಣಬಲ್ಲ ದೃಷ್ಟಿಸಾಮಥ್ರ್ಯ, ನಮ್ಮ ಪೂರ್ವಿಕರು ಹೇಳುತ್ತಿದ್ದ `ಪಶ್ಯಂತಿಬುದ್ಧಿ ಇತ್ತು.
  
	ಸಿ. ವಿ. ರಾಮನ್ ಪಿಳ್ಳೆ ಇನ್ನೂರ ಇಪ್ಪತೈದು ವರ್ಷಗಳಿಗೂ ಹಿಂದಿನ ತಿರುವಾಂಕೂರಿನ ಮಹತ್ವದ ಚಾರಿತ್ರಿಕ ಘಟನೆಗಳನ್ನು ಉಜ್ವಲ ಪ್ರಭಾವಿಗಳಾದ ಕೆಲವು ಮಹಾಪುರುಷರ ಪುನ: ಸೃಷ್ಟಿಯ ಮೂಲಕ ನಮ್ಮ ಮುಂದೆ ಸಾದರಪಡಿಸಿದ್ದಾರೆ. ಆತನ ಅಮೋಘ ಕಲ್ಪನಾಸಮಥ್ರ್ಯದ ಮುಂದೆ ಭೂತಕಾಲದ ವೀರಜಗತ್ತು, ವಿಶಿಷ್ಟ ವೇಷಭೂಷೆಗಳನ್ನು ತೊಟ್ಟು ಗಾನ ವಾದ್ಯ ತಾಳ ಮೇಳ ಸಹಿತ ನರ್ತಿಸುತ್ತಿತ್ತು. ಭೂತಕಾಲವೆಂಬ ಪರದೆಯ ಹಿಂದೆ ಎಂಥೆಂಥ ಅದ್ಭುತಗಳೂ ಎಷ್ಟೆಲ್ಲ ಉಗ್ರಪ್ರತಾಪಿಗಳೂ ಪ್ರತ್ಯಕ್ಷಗೊಂಡಿಲ್ಲ! ಮಲಯಾಳದಲ್ಲಿ ಮಹಾಶೈಲಿ ಎನ್ನುವುದೊಂದು ಇರುವುದಾದರೆ ಅದು ಸಿ. ವಿ. ಶೈಲಿ0iÉುೀ. ಸಿ. ವಿ.ಗೆ ಸಂಬಂಧಿಸಿದ್ದೆಲ್ಲವೂ ಮಹತ್ತೂ ಬೃಹತ್ತೂ ಹೌದು. ಆತನ ಮೂರೂ ಕೃತಿಗಳ (ಮಾರ್ತಾಂಡ ವರ್ಮ, ಧರ್ಮರಾಜ, ರಾಮರಾಜ ಬಹದ್ದೂರ್) ಐತಿಹಾಸಿಕ ವೈಶಾಲ್ಯ ಮತ್ತು ಗಾಂಭೀರ್ಯ ನೆನಪಿಸುತ್ತಿರುವುದು ಟಾಲ್‍ಸ್ಟಾಯಿಯನ್ನು. ಅಂಬೆಗಾಲಿಡುತ್ತ ಸಾಗುತ್ತಿದ್ದ ಮಲಯಾಳ ಕಾದಂಬರಿಗೆ ದಿಢೀರನೆ ವಿಶ್ವಸಾಹಿತ್ಯದ ರಾಜಸಭೆಗೆ ಪ್ರವೇಶಾರ್ಹತೆ ತಂದುಕೊಟ್ಟವರು ಸಿ. ವಿ. ರಾಮನ್ ಪಿಳ್ಳೆ.
 
  	ಈ ಇಬ್ಬರು ಮಹಾವ್ಯಕ್ತಿಗಳ ನಂತರ ಮಲಯಾಳ ಕಾದಂಬರಿ ಕ್ಷೇತ್ರ ಸ್ವಲ್ಪ ಕಾಲದ ವರೆಗೆ ಎರಡನೆ ದರ್ಜೆಯವರ ಆಡುಂಬೊಲವಾಗಿ ಬದಲಾಗಿತ್ತು. ಅಪ್ಪನ್ ತಂಬುರಾನ್, ಕೆ. ಎಂ. ಪಣಿಕ್ಕರ್ ಮುಂತಾದವರು ಕೆಲವು ಐತಿಹಾಸಿಕ ಕಾದಂಬರಿಗಳನ್ನು ರಚಿಸಿರುವುದಾದರೂ ಅವರಾರಿಗೂ ಸಿ. ವಿ.ಯ ಸನಿಹಕ್ಕೂ ತಲುಪಲು ಸಾಧ್ಯವಾಗಿಲ್ಲ.
  
 	ಎರಡನೆಯ ಘಟ್ಟ: ್130ರ ನಂತರ ಕೆಲವು ಹೊಸ ಬದಲಾವಣೆಗಳು ಕಾಣಿಸಿಕೊಳ್ಳತೊಡಗಿದುವು. ರಿಯಲಿಜûಂ, ಮನೋವಿಜ್ಞಾನ, ಮೊದಲಾದ ಆಧುನಿಕ ವಿಚಾರಗಳನ್ನು ಕುರಿತು ಪ್ರಸಿದ್ಧ ವಿಚಾರವಾದಿಯೂ ಪತ್ರಿಕಾ ಸಂಪಾದಕನೂ ಆಗಿದ್ದ ಎ. ಬಾಲಕೃಷ್ಣಪಿಳ್ಳೆ ಬರೆದ ಲೇಖನಗಳನ್ನು ಓದಿ ಬರಹಗಾರರು ಅವುಗಳನ್ನು ಗ್ರಹಿಸತೊಡಗಿದರು. ಬಾಲಕೃಷ್ಣ ಪಿಳ್ಳೆಯ ಶಿಷ್ಯರಾದ ಕೆಲವು ಮಂದಿ ಯುವಕ ಬರಹಗಾರರು ಹೊಸ ರಚನಾಸಂಪ್ರದಾಯವನ್ನು ಪರೀಕ್ಷಿಸಿ ನೋಡಲು ಧೈರ್ಯ ವಹಿಸಿದರು. ಆ ಗುಂಪಿನ ಒಬ್ಬರು ತಕ¿ô ಶಿವಶಂಕರ ಪಿಳ್ಳೆ. ಹೆಚ್ಚು ಕಡಮೆ ಪ್ರಸ್ತುತ ಅವಧಿಯಲ್ಲೇ ಪ್ರವೇಶಿಸಿ ಕಥನ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆಗಳನ್ನಿತ್ತವರು ಪಿ. ಕೇಶವದೇವ್, ಪೆÇನ್ಕುನ್ನಂ ವರ್ಕಿ, ವೈಕ್ಕಂ ಮುಹಮ್ಮದ್ ಬಷೀರ್, ಎಸ್. ಕೆ. ಪೆÇಟ್ಟೆಕಾಟ್, ಪಿ. ಸಿ. ಕುಟ್ಟಿಕೃಷ್ಣನ್ (ಉರೂಬ್) ಮೊದಲಾದವರು. 
 
  
	1942ರ ಬಳಿಕ ಸಾಹಿತ್ಯದ ಗತಿ ಸಂಪೂರ್ಣ ಬದಲಾಯಿತು; ಪುರೋಗಮನ (ಪ್ರಗತಿಶೀಲ) ಸಾಹಿತ್ಯ ಚಳವಳಿ ಶಕ್ತಿಯುತವಾಯಿತು. "ಓಡಯಿಲ್‍ನಿನ್ನ್" (ಚರಂಡಿಯಿಂದ, ಕೇಶವದೇವ್), ರಂಡಿಡಂಙÐ¿ô" (ಎರಡುಬಳ್ಳ, ತಕ¿ô), "ತೋಟ್ಟಿಯುಟೆ ಮಕನ್" (ಭಂಗಿಯ ಮಗ, ತಕ¿ô), "ಬಾಲ್ಯಕಾಲಸಖಿ" (ಬಷೀರ್) "ವಿಷಕನ್ಯಕ", (ಪೆÇಟ್ಟೆಕ್ಕಾಟ್) ಮೊದಲಾದ ಪ್ರಸಿದ್ಧ ಕಾದಂಬರಿಗಳು ಪ್ರಕಟವಾದದ್ದೂ ಈ ಅವಧಿಯಲ್ಲೆ. ಈ ಕಾದಂಬರಿಗಳಲ್ಲೆಲ್ಲ ಬರಹಗಾರರ ಸ್ವಾನುಭವಗಳು ಯೋಗ್ಯ ಪ್ರಮಾಣದಲ್ಲಿ ಬೆರೆತಿವೆ. ಬಡತನವೆಂಬ ವಸ್ತುವಿಗೆ ಮೊದಲ ಬಾರಿ ಪ್ರವೇಶ ದೊರೆತಿರುವ ಕಾದಂಬರಿಗಳು ಇವೆಲ್ಲ. ರಿಕ್ಷಾವಾಲ, ಭಂಗಿ, ಕುಟ್ಟನಾಡಿನ ಹೊಲೆಯ-ಇವರಾರೂ ಈ ಮೊದಲು ಮಲಯಾಳ ಕಾದಂಬರಿಯಲ್ಲಿ ಕಾಣಿಸಿಕೊಳ್ಳಲಿಲ್ಲ. ಅಸಂತುಷ್ಟನಾದ ಕಾರ್ಮಿಕನೂ ರೈತನೂ ಹೊಸ ಬದುಕಿಗಾಗಿ ಹಾತೊರೆಯುತ್ತಾ ಮೆಲ್ಲ ಮೆಲ್ಲನೆ ಸಮಾಜದ ಮೇಲಿನ ಹಂತಕ್ಕೆ ಏರಲಿರುವುದರ ಪೂರ್ವಸೂಚನೆಯನ್ನು ಈ ಕಾದಂಬರಿಕಾರರು ನೀಡಿರುವರು. `ಇಂದುಲೇಖ' ಕಾದಂಬರಿಗೂ `ಎರಡುಬಳ್ಳ ಕಾದಂಬರಿಗೂ ನಡುವೆ, ಭೂಮಾಲಿಕನ ಭವ್ಯ ಭವನಕ್ಕೂ ಕೃಷಿಕಾರ್ಮಿಕನ ಮಣ್ಣಗುಡಿಸಲಿಗೂ ಇರುವಷ್ಟು ಅಂತರವಿದೆ. ಹೀಗೆ ಹೇಳಿದ್ದರಿಂದ ಇವರ ಕಾದಂಬರಿ ಸಾಹಿತ್ಯ, ಬೂಜ್ರ್ವಾ ಜೀವನದಿಂದ ಪ್ರಾಲಿಟೇರಿಯನ್ ಜೀವನಕ್ಕೆ ಉರುಳಿ ಬಿದ್ದದ್ದೆಂದು ಅರ್ಥಮಾಡಿಕೊಳ್ಳಬಾರದು. ಈ ಕಾದಂಬರಿಗಾರರಲ್ಲಿ ಹೆಚ್ಚಿನವರು ಮಧ್ಯಮವರ್ಗದಿಂದ ಬಂದವರು. ಆದುದರಿಂದ ಸಹಜವಾಗಿಯೆ ಈ ಕಾದಂಬರಿಗಳ ಹಿನ್ನೆಲೆಯಾಗಿ ಮಧ್ಯಮವರ್ಗ ಕಾಣಿಸಿಕೊಂಡಿದೆ. ಈ ಮಾತು ತಕ¿ô, ಪೆÇಟ್ಟೆಕ್ಕಾಟ್, ಉ¾ೂಬ್ ಮತ್ತು ಬಷೀರರಿಗೆ ವಿಶೇಷವಾಗಿ ಅನ್ವಯಿಸುವುದು. ಆದರೂ, ಇವರು ನಾಲ್ವರೂ ಹೊಸ ಸಮಾಜ ಸ್ಥಿತಿಗಳನ್ನು ಕಂಡುಹಿಡಿಯಲು ನಿರಂತರ ಪ್ರಯತ್ನಿಸಿದ್ದರು. ಉದಾ: ತಕ¿ô ಬೆಸ್ತರ ಬದುಕಿನ ಕಡೆಗೂ (ಚೆಮ್ಮೀನ್-ಸಿಗಡಿ) ಉ¾ೂಬ್ ಮಲಬಾರಿನ ಮುಸ್ಲಿಮರ ಜೀವನದ ಕಡೆಗೂ (ಉಮ್ಮಾಚ್ಚು) ಪೆÇಟ್ಟೆಕ್ಕಾಟ್, ಕೋ¿ôಕ್ಕೋಡ್ ನಗರದ ತಮೋಮಯವಾದ ಅಧೋಲೋಕದ ಕಡೆಗೂ (ತೆರುವಿಂಡೆ ಕಥ) ದೃಷ್ಟಿ ಹಾಯಿಸಿದ್ದರು.  ಬಷೀರರು-ನನ್ನಜ್ಜನಿಗೆ ಒಂದು ಆನೆಯಿತ್ತು ಕಾದಂಬರಿಯಲ್ಲಿ ಮುಸ್ಲಿಂ ಕುಟುಂಬವೊಂದು ಬಡತನಕ್ಕಿಳಿದು ಸಾಗುವುದನ್ನು ಅದೇ ಕುಟುಂಬದ ಕೊನೆಯ ಸುಳಿ ಎನ್ನಿಸಿದ ಒಂದೇ ಒಂದು ಪಾತ್ರದ ಮೂಲಕ ಗತವೈಭವಗಳನ್ನೆಲ್ಲ ಸ್ಮರಿಸುತ್ತಾ ಬರುವ ಕಥಾತಂತ್ರವನ್ನು ಅಳವಡಿಸಿಕೊಂಡು ಕಥೆಯನ್ನು ಹೆಣದಿದ್ದಾರೆ. ಅನನ್ಯವಾದ ಬಷೀರರ ಈ ಕಲೆಯಿಂದ ಒಂದು ಕುಟುಂಬದ ಕಥೆ, ಅಂತಹ ಇತರ ಕುಟುಂಬಗಳ ಕತೆಯೂ ಆಗಿದೆ. 
 
  	ಸಾಹಿತ್ಯ ಪ್ರಪಂಚದಲ್ಲಿ ಕಾದಂಬರಿಗಾರನಿಗೆ ಅವಶ್ಯವಾಗಿ ಎರಡು ದೃಷ್ಟಿ ಇರಬೇಕು: ಒಂದು ಲೌಕಿಕ, ಇನ್ನೊಂದು ದಾರ್ಶನಿಕ. ಮೇಲೆ ಹೇಳಿದ ಕಾದಂಬರಿಗಳಲ್ಲಿ ಈ ಎರಡು ದೃಷ್ಟಿಗಳೂ ಬಹು ಸೂಕ್ಷ್ಮವೂ ತೀವ್ರವೂ ಆಗಿರುವುದನ್ನು ಕಾಣಬಹುದು. ತಕ¿ôಯ `ಚೆಮ್ಮೀನ್(ಸಿಗಡಿ)ಕಾದಂಬರಿ ಮುಕ್ಕುವ(ಬೆಸ್ತ)ರ ಜೀವನದ ಬಗೆಗಿನ ಒಂದು ಡಾಕ್ಯುಮೆಂಟರಿ ಚಿತ್ರೀಕರಣವೇನಲ್ಲ. ಅವರ ಜೀವನದ ಎಷ್ಟೋ ಮುಖಗಳನ್ನು ಆತ ಕೈಬಿಟ್ಟಿರುವುದುಂಟು. ಆದರೂ, `ಚೆಮ್ಮೀನ್ ಮುಕ್ಕುವನ ದರ್ಶನ ಸಂಗ್ರಹವೆಂದು ನಮ್ಮನ್ನು ನಂಬಿಸಲು ತಕ¿ôಗೆ ಸಾಧ್ಯವಾಯಿತು. ಇದೇ ಈ ಕಾದಂಬರಿ ಸಾಧಿಸಿದ ಹೆಗ್ಗಳಿಕೆ. ಮೇಲೆ ಹೆಸರಿಸಲಾದ ಇತರ ಕಾದಂಬರಿಗಳ ಕುರಿತೂ ಇದನ್ನೇ ಹೇಳಬಹುದು. ಉ¾ೂಬರ `ಸುಂದರಿಗಳುಂ ಸುಂದರನ್ಮಾರುಂ' (ಚೆಲುವೆಯರೂ ಚೆನ್ನಿಗರೂ)ಎಂಬ ಕಾದಂಬರಿಯಲ್ಲಿ ಡಾಕ್ಯುಮೆಂಟರಿ ರೀತಿಯ ಚಿತ್ರೀಕರಣ ಸ್ಪಷ್ಟವಾಗಿ0iÉುೀ ಇದೆ. ಮಲಬಾರಿನ ಮಾಪಿಳ್ಳೆ ದಂಗೆಯ ಹಿನ್ನೆಲೆಯಲ್ಲಿ ಅಲ್ಲಿಯ ಜನಜೀವನ ಹೇಗೆ ತಲೆಕೆಳಗಾಯಿತು ಎನ್ನುವುದನ್ನೂ ಅದರಿಂದ ಎಷ್ಟು ಕುಟುಂಬಗಳು ಶಿಥಿಲಕ್ಕೊಳಗಾದುವು, ಎಷ್ಟುಮಂದಿ ಮತಾಂತರ ಹೊಂದಿ ಹೊಸ ಜೀವನವನ್ನಾರಂಭಿಸಿದರು ಎನ್ನುವುದನ್ನೂ ಉ¾ೂಬ್ ಚಿತ್ರ್ರಿಸಿದ್ದಾರೆ. ಈ ಕಾದಂಬರಿಯಲ್ಲಿ ಉ¾ೂಬ್ ಮೂರು ನಾಲ್ಕು ತಲೆಮಾರುಗಳ ಕಥೆಯನ್ನು, ಸೂತ್ರ ಕಿತ್ತುಹೋಗದಂತೆ, ಸಿಕ್ಕುಗಟ್ಟದಂತೆ ಮನುಷ್ಯತ್ವದ ಮಾಧುರ್ಯದೊಡನೆ ವಿವರಿಸಿರುವರು. ಉ¾ೂಬ್ ಅವರ ಈ ಕಾದಂಬರಿ ಸ್ವಾತಂತ್ರ್ಯ ಪ್ರಾಪ್ತಿಯ ಅನಂತರದ ಐದು ವರ್ಷಗಳ ಅವಧಿಯಲ್ಲಿ ಪ್ರಕಟವಾದ ಶ್ರೇಷ್ಠ ಸಾಹಿತ್ಯ ಕೃತಿಗೆ ಮೀಸಲಾದ, ಸಾಹಿತ್ಯ ಅಕಾಡೆಮಿಯ ಬಹುಮಾನವನ್ನು ಪಡೆದುದರಲ್ಲಿ ಆಶ್ಚರ್ಯವಿಲ್ಲ. ಇದೇ ತಲೆಮಾರಿಗೆ ಸೇರಿದ ಲಲಿತಾಂಬಿಕ ಅಂತರ್ಜನಂ (1009-) ರಚಿಸಿದ ಒಂದೇ ಒಂದು ಕಾದಂಬರಿ "ಅಗ್ನಿಸಾಕ್ಷಿ". ನಂಬೂದಿರಿಸ್ತ್ರೀಯೊಬ್ಬಳು ಸ್ವಂತ ಸಮಾಜದ ದುಷ್ಟ ಕಟ್ಟಳೆಗಳ ಸಂಕೋಲೆಯನ್ನು ಕಿತ್ತೊಗೆದು ನಾಡಿನ ಸ್ವಾತಂತ್ರ್ಯಕ್ಕಾಗಿ ಹೋರಾಡಿ, ಸ್ವರಾಜ್ಯಪ್ರಾಪ್ತಿಯ ಅನಂತರವೂ ಎಲ್ಲರ, ಎಲ್ಲಾ ತರದ ಸಂಕೋಲೆಗಳನ್ನೂ ತುಂಡರಿಸಲು ಯತ್ನಿಸಿದ ಕಥೆ ಇದು. ಇದೇ ಅವಧಿಯಲ್ಲಿ ಕೆ .ಸುರೇಂದ್ರನ್, ಮಲಯಾಟೂರ್ ರಾಮಕೃಷ್ಣನ್, ವಿಲಾಸಿನಿ (ಎಂ. ಕೆ. ಕೆ. ಮೆನನ್), ಜಿ. ವಿವೇಕಾನಂದನ್, ವಿ. ಕೆ ಎನ್., ಮೊದಲಾದವರೂ ಶ್ರೇಷ್ಠ ಕಾದಂಬರಿಗಳನ್ನು ರಚಿಸಿದ್ದಾರೆ.
 
  	ಎರಡನೆಯ ಜಾಗತಿಕ ಮಹಾಯುದ್ಧದ ಅವಧಿಯಲ್ಲಿ ಸೈನಿಕಸೇವೆಯಲ್ಲಿದ್ದ ಕೋವಿಲನ್, ನಂತನಾರ್, ಪಾ¾ಪ್ಪು¾ಂ ಮೊದಲಾದವರು ಒಳ್ಳೆಯ ಸೈನಿಕ ಕತೆಗಳಷ್ಟೇ ಅಲ್ಲ, ಸೊಗಸಾದ ಸಾಮಾಜಿಕ ಕಾದಂಬರಿಗಳನ್ನೂ ರಚಿಸಿರುವರು: ಕೋವಿಲನ್‍ರ `ತಟ್ಟಕಂ', ನಂತನಾರ್‍ರ `ಉಣ್ಣಿಕ್ಕುಟ್ಟಂಡೆ ಒರುದಿವಸಂ', ಪಾ¾ಪ್ಪು¾ಂರ `ಅರನಾ¿ôಕ ನೇರಂ'-ಇತ್ಯಾದಿ. 
 
   	ಮೂರನೆಯ ಘಟ್ಟ: ಇದುವರೆಗೆ ಹೇಳಿದ್ದು ಸ್ವರಾಜ್ಯಪ್ರಾಪ್ತಿಗೂ ಮೊದಲೇ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಪಡೆದಿದ್ದ ಎರಡನೆಯ ತಲೆಮಾರಿನ ಕಥನಕಾರರ ಕಥೆಯನ್ನು. ಸ್ವರಾಜ್ಯ ಪ್ರಾಪ್ತಿಯ ಅನಂತರ ಸಾಹಿತ್ಯ ಕ್ಷೇತ್ರ ಪ್ರವೇಶಿಸಿ ಅದನ್ನು ಸಂಪನ್ನಗೊಳಿಸಿದವರು ಮೂರನೆಯ ತಲೆಮಾರಿನ ಕಥನಕಾರರು. ಇವರಲ್ಲಿ ಅಗ್ರಮಾನ್ಯರು ಎಂ. ಟಿ. ವಾಸುದೇವನ್ ನಾಯರ್ (ಜನನ:1933). ಇವರ ಮೊದಲ ಕಾದಂಬರಿ 1958ರಲ್ಲಿ ಪ್ರಕಟವಾದ "ನಾಲುಕೆಟ್ಟ್" (ಚೌಕಟ್ಟಿನ ಮನೆ-ಮಧ್ಯದಲ್ಲಿ ತೆರೆದ ಅಂಗಳವಿದ್ದು ಅದಕ್ಕೆ ಹೊಂದಿಕೊಂಡು ಸುತ್ತಲೂ ಬಹಳಷ್ಟು ಕೋಣೆಗಳಿರುವ ಬೃಹತ್ ಕಟ್ಟಡ). ಇದನ್ನು ಅವಿಭಕ್ತಕುಟುಂಬಜೀವನದ ಸಂಕೇತವಾಗಿ ಬಳಸಲಾಗಿದೆ. ಈ ಕತೆ ಅಳಿಯ ಸಂತಾನ ಕುಟುಂಬದ ಒಬ್ಬ ಹುಡುಗನ ಬದುಕಿನ ಹೋರಾಟಗಳಿಗೆ ಸಂಬಂಧಿಸಿದ್ದು. ಆ ಹುಡುಗನ ತಾಯಿ ಹಿರಿಯರನ್ನು ಧಿಕ್ಕರಿಸುತ್ತ್ತಾ ತಾನು ಪ್ರೀತಿಸಿದ ವ್ಯಕ್ತಿಯೊಡನೆ ಓಡಿ ಹೋದವಳು. ಇದೇ ಕಾರಣಕ್ಕಾಗಿ ಕುಟುಂಬದ ಕಾರಣವರ್ (ಯಜಮಾನ) ಕುಟುಂಬದಲ್ಲಿ ಹುಡುಗನಿಗಿರುವ ಪರಂಪರಾಗತ ಹಕ್ಕುಗಳನ್ನೂ ನಿರಾಕರಿಸಿದ್ದರಿಂದ, ಊರುಬಿಡುವ ಹುಡುಗ ವರ್ಷಗಳ ಬಳಿಕ ಶ್ರೀಮಂತನಾಗಿ ಮರಳಿ ಬರುತ್ತಾನೆ. ಹಳೆಯ ಚೌಕಟ್ಟಿನ ಮನೆಯನ್ನು ತನ್ನದಾಗಿಸಿಕೊಂಡು ಅಲ್ಲಿ ಹೊಸ ಮನೆಯೊಂದನ್ನು ಕಟ್ಟಿಸುತ್ತಾನೆ. ಹಿಂದೆ ತಾನು ಕೂಡಾ ದ್ವೇಷಿಸುತ್ತಿದ್ದ ತನ್ನ ತಾಯಿಯನ್ನೂ ಆಕೆಯ ಪ್ರಿಯಕರನನ್ನೂ, ಚೌಕಟ್ಟಿನ ಮನೆಯಿದ್ದಲ್ಲಿ ತಾನು ಹೊಸತಾಗಿ ಕಟ್ಟಿಸಿದ ಮನೆಗೆ ಕರೆತರುತ್ತಾನೆ...

   	"ಅಸುರವಿತ್ತ್" (ಅಸುರಬೀಜ) ಎಂ. ಟಿ. ಅವರ ಎರಡನೆಯ(1962) ಕಾದಂಬರಿ. ಇದು ಮುಖ್ಯವಾಗಿ ಹೇಳುವುದು ಬಡ ನಾಯರ್ ಯುವಕನೊಬ್ಬನ ದುರಂತದ ಕಥೆಯನ್ನು: ಒಪ್ಪತ್ತಿನ ಗಂಜಿಗೂ ಗತಿಯಿಲ್ಲದವನು ಗೋವಿಂದನ್‍ಕುಟ್ಟಿ. ಅವನ ಅಕ್ಕನ ಗಂಡ ಶೇಖರನ್‍ನಾಯರ್ ಕೂಡಾ ಹಿಂದೆ ಬಡವನಾಗಿದ್ದರೂ ಈಗ ಸಿರಿವಂತನೂ ಪ್ರತಿಷ್ಠಿತನೂ ಆಗಿರುವನು. ಆತನ ವಿರೋಧಿ ಮುಸ್ಲಿಂ ಸಮಾಜದ ಮುಖಂಡ `ಮೊತಲಾಳಿ(ಸಾಹುಕಾರ). ಇವರಿಬ್ಬರ ನಡುವೆ ಪರೋಕ್ಷ ಸಂಘರ್ಷಗಳು ನಡೆಯುತ್ತಲೇ ಇರುತ್ತವೆ. ಶೇಖರನ್‍ನಾಯರ್ ತನ್ನ ಮಗನಿಂದ ಗುಟ್ಟಾಗಿ ಬಸಿರಾದ ಕೆಲಸದ ಹುಡುಗಿ ಮೀನಾಕ್ಷಿಯನ್ನು ಮೋಸದಿಂದ ಗೋವಿಂದನ್‍ಕುಟ್ಟಿಗೆ ಮದುವೆ ಮಾಡಿಕೊಡುತ್ತಾನೆ. ಸತ್ಯ ಅರಿವಾದಾಗ ಕೆರಳಿದ ಸ್ವಾಭಿಮಾನಿ ಗೋವಿಂದನ್‍ಕುಟ್ಟಿ ಇಡೀ ಊರನ್ನೇ ಆಳುವ ಶೇಖರನ್‍ನಾಯರ್‍ನ ಎದುರು ಏನೂಮಾಡಲಾಗದೆ ಸೇಡುತೀರಿಸುವ ಉದ್ದೇಶದಿಂದ ಮುಸ್ಲಿಮನಾಗಿ ಮತಾಂತರಮಾಡಿಕೊಳ್ಳುತ್ತಾನೆ. ಶೆಖರನ್‍ನಾಯರ್‍ನನ್ನು ಅವಮಾನಿಸಲು ಸಿಕ್ಕಿದ ಅವಕಾಶವನ್ನುಪಯೋಗಿಸಿಕೊಂಡು ಮೊತಲಾಳಿಯೂ ಗೋವಿಂದನ್‍ಕುಟ್ಟಿಯನ್ನು ತೋರಿಕೆಯ ಆದರದಿಂದ ಬರಮಾಡಿಕೊಳ್ಳುತ್ತಾನೆ. ಆತನ ನಗುಮೊಗದ ಮಸುಕಿನೊಳಗಿನ ಸ್ವಾರ್ಥದ ಅರಿವಾದಾಗ ಜಿಗುಪ್ಸೆಗೊಂಡ ಗೋವಿಂದನ್‍ಕುಟ್ಟಿ ಕೇವಲ ಮನುಷ್ಯನಾಗಿ ಉಳಿಯಲು ನಿರ್ಧರಿಸುತ್ತಾನೆ. ಸ್ವಾರ್ಥಪೂರಿತ ಸಿರಿವಂತವರ್ಗವು, ಪರಿಸ್ಥಿತಿಯ ಒತ್ತಡದಿಂದ ಅಸಹಾಯಕರಾಗಿ ನರಳುವ ಮುಗ್ಧರನ್ನು "ಅಸುರಬೀಜ" ಎಂದು ಅಣಕಿಸುವ ವಿಪರ್ಯಾಸದತ್ತ ಬೆರಳುಮಾಡಿ ತೋರಿಸುತ್ತದೆ ಈ ಕಾದಂಬರಿ. ಸಮಾಜವನ್ನೂ ಅಂಗೀಕೃತ ಮರ್ಯಾದೆಗಳನ್ನೂ ಧಿಕ್ಕರಿಸುವ ಗಂಭೀರಪ್ರವೃತ್ತಿಯ ಯುವಕರು ಎಂ. ಟಿ ಅವರ ಉಳಿದ ಕಾದಂಬರಿಗಳಲ್ಲೂ ಕಾಣಬಹುದು. ನಾಲುಕೆಟ್ಟ್, ಅಸುರವಿತ್ತ್, ಮಞõï್ಞ, ಕಾಲಂ, ರಂಟಾಮೂ¿ಂ, ವಾರಾಣಸಿ- ಎಂ. ಟಿ. ಅವರ ಮುಖ್ಯ ಕಾದಂಬರಿಗಳು.

  	ನಾಲ್ಕನೆಯ ಘಟ್ಟ: ಓ.ವಿ. ವಿಜಯನ್ ರ್(130-2005), ್168ರಲ್ಲಿ ಪ್ರಕಟಿಸಿದ ಕಾದಂಬರಿ "ಖಸಾಕಿಂಡೆ ಇತಿಹಾಸಂ" (ಖಸಾಕಿನ ಐತಿಹ್ಯ) ಮಲಯಾಳ ಸಾಹಿತ್ಯಕ್ಕೆ ಮಾತ್ರವಲ್ಲ ಭಾಷೆಗೆ ಕೂಡ ನವಚೈತನ್ಯ ನೀಡಿದೆಯೆಂಬುದು ಬಲ್ಲವರ ಅಭಿಮತ. ಹೀಗೆ ವೈಶಿಷ್ಟ್ಯ ಪೂರ್ಣವಾದ ಆರು ಕಾದಂಬರಿಗಳನ್ನು ವಿಜಯನ್ ಪ್ರಕಟಿಸಿರುವರು. ಈ ಅವಧಿಯಲ್ಲೇ ಕಾಕ್ಕನಾಟನ್, ಎಂ. ಮುಕುಂದನ್, ಸೇತು, ಮೊದಲಾದವರೂ ಶ್ರೇಷ್ಠ ಕಾದಂಬರಿಗಳನ್ನು ಪ್ರಕಟಿಸಿದ್ದಾರೆ.

   	ಐದನೆಯ ಘಟ್ಟ: ಟಿ. ವಿ. ಕೊಚ್ಚುಬಾವ, ಗ್ರೇಸಿ ಸಾರಾಜೋಸೆಫ್, ಎನ್. ಎಸ್, ಮಾಧವನ್ ಮೊದಲಾದವರದು.

	ಸಣ್ಣಕತೆ: ಎಲ್ಲ ಆಧುನಿಕ ಸಾಹಿತ್ಯ ಪ್ರಕಾರಗಳಂತೆ ಮಲಯಾಳ ಸಾಹಿತ್ಯದಲ್ಲಿ ಸಣ್ಣಕತೆ ಕೂಡ ಇಂಗ್ಲಿಷಿನ ಪ್ರಭಾವದಿಂದ ರೂಪುಗೊಂಡದ್ದೆ. ವೇಙÐಯಿಲ್ ಕುಞ್ತರಾಮನ್ ನಾಯನಾರ್ (1861-1915)ನ "ವಾಸನಾವಿಕೃತಿ" (1891) ಮಲಯಾಳದ ಮೊದಲ ಸಣ್ಣಕತೆ. ಅಂಬಾಡಿ ನಾರಾಯಣ ಪೊದುವಾಳ್ (1871-1936), ಮೂರ್ಕೋತ್ ಕುಮಾರನ್ (1874-1941), ಕೆ.ಸುಕುಮಾರನ್ (1876-1956), ಚೆಂಕುಳತ್ ಕುಞÂ್ಞರಾಮನ್ ಮೆನನ್ (1882-1940) ಮೊದಲಾದವರೂ ಈ ಪ್ರಕಾರದ ಪ್ರವರ್ತಕರಾಗಿದ್ದರು. ಇವರೆಲ್ಲರ ಮುಖ್ಯಗುರಿ ಮನರಂಜನೆಯಷ್ಟೇ. ಹಾಗಾಗಿ ಅಂದಿನ ಸಣ್ಣಕತೆ ಬರಹಗಾರರು ಆ ಪ್ರಕಾರದ ಮಟ್ಟಿಗೆ ಗಂಭೀರವಾಗಿ ದುಡಿದದ್ದಾಗಲಿ, ಗಣನೀಯ ಸೇವೆ ಸಲ್ಲಿಸಿದ್ದಾಗಲಿ ಇಲ್ಲ.

	ಕೆ. ಸುಕುಮಾರನ್ "ಸುಕುಮಾರ  ಕಥಾಮಂಜರಿ" ಎಂಬ ಹೆಸರಿನಲ್ಲಿ ಐದಾರು ಸಣ್ಣಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅಂದಿನ ಅತಿ ಹೆಚ್ಚಿನ ಜನಪ್ರಿಯತೆ ಗಳಿಸಿದ್ದ ಬರಹಗಾರರು ಅವರು. ಸುಕುಮಾರನ್ ಕತೆಗಳನ್ನು ಬಹಳ ಸಲೀಸಾಗಿ ಓದಿಕೊಳ್ಳಬಹುದು. ಯಾವಳಾದರೂ ಹೆಣ್ಣೊಬ್ಬಳ ರೂಪಕ್ಕೆ ಮಾರುಹೋದ ಇಬ್ಬರೊ ಮೂವರೋ ಯುವಕರ ವಿಕಟ ವರ್ತನೆಗಳೇ ಸುಕುಮಾರನ್ನರ ಬಹುಪಾಲು ಕತೆಗಳ ವಸ್ತು. ನಾಯಕಿಯರು ಬದಲಾಗಲೂ ಬಹುದು. ಗಂಡುಗಳು ಖಾಯಂ ಆಸಾಮಿಗಳೇ ಆಗಿರುತ್ತಾರೆ. ಎಲ್ಲರೂ ಒಂದೊಂದು ರೀತಿಯಲ್ಲಿ ಖದೀಮರು; ಒಬ್ಬರನ್ನೊಬ್ಬರು ಸೋಲಿಸಲು ಪ್ರಯತ್ನಿಸುವವರು. ಇಬ್ಬರು ಸೋಲುತ್ತಾರೆ. ಒಬ್ಬ ಗೆಲ್ಲುತ್ತಾನೆ. 'ಇದೆಂಥಾ ಕಥೆ ಎಂದೇನೂ ಯಾರೂ ಪ್ರಶ್ನಿಸುವಂತಿಲ್ಲ.

	ನಾರಾಯಣ ಪೊದೊವಾಳರಿಗೆ ಐತಿಹಾಸಿಕ ಕತೆಗಳ ಬಗೆಗೇ ಹೆಚ್ಚಿನ ಒಲವು. ಅವರ ಕತೆಗಳಲ್ಲಿ ಭಾವಕ್ಕಿಂತಲೂ ಭಾಷೆಗೇ ಹೆಚ್ಚು ಮಹತ್ವ. ಒಂದು ರೀತಿಯ ಪ್ರಾಸ ಭ್ರಮೆಯೊಂದಿಗೇ ಮುಂದುವರಿಯುತ್ತದೆ ಅವರ ಶೈಲಿ. "ಕೋಟೆಯನ್ನು ಹಿಡಿಯಲು ಬಂದದ್ದಲ್ಲ, ಕೊರತೆಯನ್ನುಂಟುಮಾಡಲು ಬಂದಿದ್ದೇವೆ" ಎಂದು ಕೇವಲ ಒಬ್ಬ ಕಾವಲುಗಾರನು ಕೂಡ ಶಬ್ದಗಳನ್ನು ತೂಗಿ ಹೇಳುವಾಗ ನಮಗೆ ಬೋರ್ ಹೊಡೆಯುತ್ತದೆ.

	ಇ.ವಿ. ಕೃಷ್ಣಪಿಳ್ಳೆಯ "ಕೇಳೀಸೌಧಕ್ಕೆ ಬಂದಾಗ ಕಥಾಶಿಲ್ಪದಲ್ಲಿ ಒಂದು ನಿರ್ಣಾಯಕವಾದ ಬದಲಾವಣೆಯಾಗುತ್ತದೆ. ವಸ್ತುಪ್ರಧಾನ ಕತೆಗಳನ್ನೇ ಇ.ವಿ. ಹೆಚ್ಚಾಗಿ ರಚಿಸಿದ್ದರು. ನಮ್ಮನ್ನು ಅಳುವ ಅಥವಾ ನಗುವ ಹಾಗೆ ಮಾಡುವುದು ಇ.ವಿ.ಗೆ ಸುಲಭಸಾಧ್ಯ.

	ಮುಂದಿನದ್ದು ಎರಡನೆಯ ಘಟ್ಟ; ರಿಯಲಿಸûಂನ ರಂಗಪ್ರವೇಶ ಅಥವಾ ರಿಯಲಿಸಂ ಮತ್ತು ರೊಮ್ಯಾಂಟಿಸಂನ ಜೋಡಾಟವೆಂದರೂ ಸರಿಯೇ. ಈ ನಿಟ್ಟಿನಲ್ಲಿ ಮೊದಲು ಗಮನಹರಿಸಿದ ಕತೆಗಾರರು ಎಸ್. ರಾಮವಾರಿಯರ್, ವಿ.ಟಿ. ಭಟ್ಟತಿರಿಪ್ಟಾಡ್, ಮೂತಿರಿಂಗೋಟ್ ಭವತ್ರಾತನ್ ನಂಬೂದಿರಿಪ್ಟಾಡ್ ಮೊದಲಾದವರು. ಈ ಕತೆಗಾರರ ಕತೆಗಳು (1930-35) ಮಲಯಾಳ ಸಾಹಿತ್ಯದ ಉಷ:ಸೂಕ್ತಗಳಾಗಿವೆ; ಪ್ರಾಯಶ: ಕ್ರಾಂತಿ ಸಾಹಿತ್ಯದ ಪ್ರಭಾತ ಫೇರಿ ಕೂಡ. ಇವರೆಲ್ಲರೂ ವಾಕ್ಯ ಸೌಂದರ್ಯದ ಬಗ್ಗೆ ವಹಿಸಿರುವಷ್ಟು ಕಾಳಜಿ ಶಿಲ್ಪಸೌಂದರ್ಯದ ಬಗ್ಗೆ ವಹಿಸಿರುವರುವರೇ ಎಂಬುದು ಅನುಮಾನಾಸ್ಪದ.

	ಇಲ್ಲಿಯ ಸಾಮಾಜಿಕ ಕ್ಷೇತ್ರದಲ್ಲಿ ಸಂಭವಿಸಿದ್ದ ಕೆಲವೊಂದು ಸಹಜ ಪರಿವರ್ತನೆಗಳ ಫಲವಾಗಿತ್ತು ರಿಯಲಿಸಂನ ಉಬ್ಬರ. ಹಿಂದಿನ ಅವಿಭಕ್ತ ಕುಟುಂಬಗಳಲ್ಲಿ ದಾಂಪತ್ಯ ಪ್ರಣಯವೆಂಬುದು, ತಿಕ್ಕಿತೊಳೆಯಲ್ಪಡದೆ ನೆಲಮಾಳಿಗೆಯಲ್ಲಿ ಬಿದ್ದಿರುತಿದ್ದ ಕಂಚಿನ ಪಾತ್ರೆಗಳಂತೆಯೇ ಇದ್ದುವು-ಕಿಲುಬು ಹಿಡಿದು ಬಿದ್ದುಕೊಂಡಿರುತ್ತವೆ, ಅಷ್ಟೇ. ಅವು ಅಲ್ಲಿ ಇವೆ ಎಂಬ ಪರಿವೆ ಕೂಡ ಅನೇಕ ಮಂದಿಗೆ ಇದ್ದಿರಲಾರದು. ಆದರೆ ಜನರು ಚಿಕ್ಕ ಪುಟ್ಟ ಕುಟುಂಬಗಳಾಗಿ ವಾಸಿಸ ತೊಡಗಿದಾಗ ಗಂಡ ಹೆಂಡತಿ ಸಂಬಂಧ, ತಂದೆ ಮಕ್ಕಳ ಸಂಬಂಧ ಮೊದಲಾದವುಗಳಿಗೆ ಅಸ್ತಿತ್ವ ಪ್ರಾಪ್ತವಾಗಿತ್ತು. ಅಂಥವರ ಸುಖ ದುಃಖಗಳು ಜೀವನವನ್ನು ಗಾಢವಾಗಿ ಸ್ಪರ್ಶಿಸುವಂಥ ಸಂಗತಿಗಳೂ ಆದುವು.

	“ಒಲೇಲಿ ಬೆಂಕಿ ಹಚ್ಚಿಲ್ಲವಾ, ಮಗಳೇ?”
	ಮಾಥಚ್ಚ ಪ್ರಶ್ನಿಸಿದ.
	“ಇವತ್ತು ಬೆಂಕಿ ಉರಿಸ್ಲೇ ಇಲ್ಲ, ಅಪ್ಪಾ”.
	ಮಾಥಚ್ಚನ ಮೈಯಿಡೀ ಒಂದು ಉರಿ ಹರಿದಾಡಿತು. ಇವತ್ತು ಒಲೆಯಲ್ಲಿ ಬೆಂಕಿ ಉರಿಸಲಿಲ್ಲ!
	“ಏನೂ ತಿನ್ನಲಿಲ್ವಾ ನನ್ಮಗಳು? ಏನೇ, ನನ್ನ ಮಗಳನ್ನ ಉಪವಾಸ ಕೆಡವಿದ್ದಾ?” (ತಕ¿ô -“ಪತಿವ್ರತೆ”).

	ಯಾವುದೇ ಬಡಕುಟುಂಬದಲ್ಲೂ ನಡೆಯಬಹುದಾದ ಒಂದು ಸಂಭಾಷಣೆ ಇದು. ಮನೆಯ ಒಳಭಾಗವನ್ನೇ ಕತೆಗಾರ ತೋರಿಸುತ್ತಿರುವನು. ತೀವ್ರವಾದ ಅನುಭವದಿಂದಲ್ಲದೆ ಇಂತಹ ಸನ್ನಿವೇಶಗಳನ್ನು ಸೃಷ್ಟಿಸುವುದು ಅಸಾಧ್ಯ. ಕೇಶವದೇವ್ (1905-1983), ತಕ¿ು ಶಿವಶಂಕರ ಪಿಳ್ಳೆ (1914-1999), ಎಸ್.ಕೆ. ಪೊಟ್ಟೆಕ್ಕಾಟ್ (1913-1983), ಕಾರೂರ್ ನೀಲಕಂಠಪಿಳ್ಳೆ (1898-1974), ವೈಕ್ಕಂ ಮುಹಮ್ಮದ್ ಬಷೀರ್ (1910-1994), ಲಲಿತಾಂಬಿಕ ಅಂತರ್ಜನಂ (1909-1987) ಪೊನ್‍ಕುನ್ನಂ ವರ್ಕಿ (1910-2004), ಪಿ.ಸಿ. ಕುಟ್ಟಿಕೃಷ್ಣನ್ (1915-1979), ಕೆ.ಸರಸ್ವತಿಯಮ್ಮ (1919-1925) ಮೊದಲಾದ ಸಣ್ಣ ಕತೆಗಾರರು ಉಂಟು ಮಾಡಿದ ಪರಿವರ್ತನೆಯ ಪರಿಯನ್ನು ಮೇಲಿನ ಪರಿಛೇದದಲ್ಲಿ ನೋಡಬಹುದು. ಇವರೆಲ್ಲರಿಗೂ ವಿಭಿನ್ನ ವ್ಯಕ್ತಿತ್ವವಿದ್ದರೂ ಒಂದು ವಿಷಯದಲ್ಲಿ ಅಚ್ಚರಿ ಹುಟ್ಟಿಸುವಷ್ಟು ಸಮಾನತೆಯೂ ಇದೆ. ಬಡತನವೆಂಬುದನ್ನು ಇವರೆಲ್ಲರೂ ಅರಿತಿದ್ದರು. ಇವರೆಲ್ಲರೂ ನವೋತ್ಥಾನ ಅವಧಿಯ ಅಥವಾ ಎರಡನೆಯ ಘಟ್ಟದ, ಮಲಯಾಳ ಸಣ್ಣಕಥಾಪ್ರಕಾರವನ್ನು ವಿವಿಧರೀತಿಯಲ್ಲಿ ಸಂಪನ್ನಗೊಳಿಸಿರುವ ಅಪ್ರತಿಮ ಪ್ರತಿಭಾವಂತರಾಗಿದ್ದಾರೆ. ಈ ಅವಧಿಯಲ್ಲೆ ಶ್ರೇಷ್ಠ ಮಟ್ಟದ ಕತೆಗಳನ್ನು ರಚಿಸಿರುವ ಪ್ರತಿಭಾವಂತರು ಪೋಞÉ್ಞಕ್ಕರ ರಾಫಿ, ನಾಗವಳ್ಳಿ ಆರ್. ಎಸ್. ಕುರುಪ್, ಎನ್.ಪಿ. ಚೆಲ್ಲಪ್ಪನ್ ನಾಯರ್, ಇ.ಎಂ. ಕೋವೂರ್, ಪುಳಿಮಾನ ಪರಮೇಶ್ವರನ್ ಪಿಳ್ಳೆ, ವೆಟ್ಟೂರ್ ರಾಮನ್‍ನಾಯರ್, ಕೋವಿಲನ್, ನಂತನಾರ್, ಪಾರಪ್ಪುರತ್ತ್, ಎಂ. ಗೋವಿಂದನ್, ಮಲಯಾಟೂರ್ ರಾಮಕೃಷ್ಣನ್, ಮೊದಲಾದವರು ಕೂಡ.

	ಮೂರನೆಯ ಘಟ್ಟ: 1950ರ ಸುಮಾರಿಗೆ ಕಥಾಕ್ಷೇತ್ರವನ್ನು ಪ್ರವೇಶಿಸಿ ಮಲಯಾಳ ಸಣ್ಣಕತೆಯನ್ನು ಆಧುನೀಕರಿಸಿದ ಮೂರನೆ ತಲೆಮಾರಿನ ಪ್ರಮುಖ ಲೇಖಕ ಎಂ.ಟಿ. ವಾಸುದೇವನ್‍ನಾಯರ್ (ಜನನ:1933). ಇತರ ಕಥೆಗಾರರ ಬದ್ಧ ರಚನೆಗಿಂತ ಭಿನ್ನರೀತಿಯ ನಿರೂಪಣಾ ಶೈಲಿಯ ಎಂ.ಟಿ. ಅವರಿಗೆ ಇದ್ದುದು ಆತ್ಮನಿಷ್ಠವಾದ ಒಂದು ರಮ್ಯಭಾವ ಎಂದು ವಿಮರ್ಶಕರು ಗುರುತಿಸಿದ್ದಾರೆ. ಎಂ.ಟಿ. ಅವರ ಕಥೆಗಳನ್ನು ಅರ್ಥಮಾಡಿಕೊಳ್ಳಬೇಕಾದರೆ ಹಳೆಯ ಕಾಲದ ನಾಯರ್ ಜನಾಂಗದ ಸಾಂಸ್ಕøತಿಕ ಇತಿಹಾಸ, ಅಳಿಯಕಟ್ಟು ಕುಟುಂಬ ಪದ್ಧತಿಯ ಬಗ್ಗೆ ತಿಳಿವಳಿಕೆ, ಅವುಗಳಿಗೆ ಸಂಬಂಧಪಟ್ಟ ತರವಾಡು ಮನೆತನಗಳ ಪರಿಚಯ, ಕೇರಳದಲ್ಲಿ ಜಾರಿಗೊಂಡಿದ್ದ ಭೂಮಸೂದೆಯ ಪರಿಣಾಮಗಳು-ಮೊದಲಾದವುಗಳ ಬಗ್ಗೆ ಸ್ವಲ್ಪವಾದರೂ ಅರಿವು ಹೊಂದಿರಬೇಕಾಗುತ್ತದೆ. ಯಾಕೆಂದರೆ ಎಂ.ಟಿ.ಯವರು ತಮ್ಮ ಹೆಚ್ಚಿನ ಕತೆಗಳಲ್ಲಿ ತಾನು ಕಂಡು, ಕೇಳಿ, ಅನುಭವಿಸಿದ ತನ್ನದೇ ಜನಾಂಗದ ಹಳೆಯ ತಲೆಮಾರಿನ ತರವಾಡು ಮನೆತನಗಳ ಅವನತಿಯ ಜೀವಂತ ಅನುಭವವನ್ನು ಅತ್ಯಂತ ಸಶಕ್ತವಾಗಿ ಚಿತ್ರಿಸಿದ್ದಾರೆ.
	ಟಿ. ಪದ್ಮನಾಭನ್ (ಜನನ: 1931) 1948ರಿಂದ ಸಣ್ಣಕತೆ ಬರೆಯಲು ಆರಂಭಿಸಿ 2005ರಲ್ಲೂ ಸಣ್ಣಕತೆಗಳನ್ನಷ್ಟೇ ಪ್ರಕಟಿಸುತ್ತಿರುವ, ಸಣ್ಣಕತೆಗೇ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಪಡೆದಿರುವ ಪ್ರಮುಖ ಕಥೆಗಾರ. ಸ್ವಾತಂತ್ರ್ಯ ಹೋರಾಟ, ಭಾರತ ವಿಭಜನೆ, ಕೋಮುಗಲಭೆ-ಮೊದಲಾದವುಗಳೇ ಇವರ ಅನೇಕ ಕತೆಗಳ ಹಿನ್ನೆಲೆ. ಅಮಾಯಕವಾದ ಮುಗ್ಧ ಸ್ನೇಹದ ಚಿರಂತನ ಆಹ್ಲಾದಕ್ಕಾಗಿ ತುಟಿಯುತ್ತಿರುವ, ಒಂದು ಹೃದಯ, ಬಾಲ್ಯಭಾವದ ಲವಲವಿಕೆ ಮತ್ತು ಪರಿಶುದ್ಧಿಗಾಗಿ ಹಾತೊರೆಯುತ್ತಿರುವ ಒಂದು ಹೃದಯ, ಪದ್ಮನಾಭನ್‍ರ ಅನೇಕ ಕಥೆಗಳಲ್ಲಿ ಸ್ಪಂದಿಸುತ್ತಾ ಇದೆ. ಈ ಮಾತಿಗೆ ಒಂದು ಉತ್ತಮ ಉದಾಹರಣೆ: “ಪ್ರಕಾಶಂ ಪರತ್ತುನ್ನ ಒರು ಪೆಣ್ ಕುಟ್ಟಿ” (ಬೆಳಕು ಚೆಲ್ಲುತ್ತಿರುವ ಒಬ್ಬಳು ಹುಡುಗಿ) ಎಂಬ ಕತೆ. ಈ ಕತೆಯ ನಿರೂಪಕ ಯುವಕನು. ಇತರರ ಮೋಸ ವಂಚನೆಗಳಿಂದ ರೋಸಿಹೋಗಿ ಪ್ರಾಣ ಕಳಕೊಳ್ಳಲೆಂದು ಕೊಂಡುಕೊಂಡ ವಿಷದ ಬಾಟಲಿಯನ್ನು ಜೇಬಿನಲ್ಲಿರಿಸಿ ಥಿಯೇಟರಿಗೆ ಹೋಗುತ್ತಾನೆ. ಸಿನಿಮಾ ಶುರುವಾಗುವಷ್ಟರಲ್ಲಿ ಆ ಹುಡುಗಿ ಒಳಗೆ ಬರುತ್ತಾಳೆ. ಅವಳು, ತನ್ನನ್ನು ಕಾಣದಿರಲಿ, ಮಾತಾಡಿಸದಿರಲಿ, ಎಂದು ಕೊಳ್ಳುತ್ತಾನೆ ಅವನು. ಆದರೆ, ಅವಳು ಕಂಡಳು; ಬಂದು ಪಕ್ಕದಲ್ಲೇ ಕುಳಿತಳು; ಹಾಡುಗಳನ್ನು ಗುನುಗಿದಳು. ಬಂಡೆಗಳಿಗೆ ಅಪ್ಪಳಿಸಿ ಚೆಲ್ಲಾಪಿಲ್ಲಿಯಾಗುತ್ತಿರುವ ಒಂದು ಕಾಡತೊರೆಯಂತೆ ಆ ಹುಡುಗಿಯ ಮನಸ್ಸು, ಬೆಳ್ಳಿಪರದೆಯ ಮೇಲೆ ಬಿಚ್ಚಿಕೊಳ್ಳುತ್ತಿರುವ ಕಥೆಯೊಂದಿಗೆ ವಿವಿಧ ಭಾವತರಂಗಿತವಾಗುತ್ತದೆ. ಅವಳು ಅವನೊಡನೆ ಕತೆಯನ್ನು ವಿವರಿಸಲು ಕೇಳಿಕೊಳ್ಳುತ್ತಾನೆ. ಅವನಿಗೆ ಚಾಕಲೆಟ್ ಕೊಡುತ್ತಾಳೆ. ಅವಳ ಬೆಳಕು ತುಂಬಿದ ಮನಸ್ಸನ್ನು, ಅವಳ ಹಾವಭಾವಗಳ ಮೂಲಕ, ಮಾತುಗಳ ಮೂಲಕ, ಸಿನಿಮಾದ ಕಥಾ ಸಂದರ್ಭಗಳಿಗೆ ಸಂಬಂಧಿಸಿದ ಅವಳ ಪ್ರತಿಕ್ರಿಯೆಗಳ ಮೂಲಕ, ಕತೆಗಾರ ಸಾದರಪಡಿಸಿರುವುದರಲ್ಲಿರುವ ಹೃದ್ಯತೆ ಅನುಭವಿಸಿಯೇ ತಿಳಿಯಬೇಕು. ಇವರ ಕಥೆಗಳ ಫ್ರೆಂಚ್ ಜರ್ಮನ್, ರಶ್ಯನ್ ಮತ್ತು ಇಂಗ್ಲಿಷ್ ಭಾಷಾಂತರಗಳೂ ಪ್ರಕಟವಾಗಿವೆ.

	ಮಾಧವಿಕುಟ್ಟಿ-ಕಮಲಾಸುರಯ್ಯ (ಜನನ:1932) ಸ್ತ್ರೀ-ಪುರುಷ ಸಂಬಂಧಗಳು ಮನಸ್ಸಿನ ಆಳದ ಪಾತಳಿಗಳಲ್ಲಿ ಸೃಷ್ಟಿಸುವ ಅನುರಣನ ಮಾಧವಿಕುಟ್ಟಿಗೆ ಇಷ್ಟವಾದ ವಸ್ತು. ಪದಪ್ರಯೋಗದಲ್ಲಿನ ಅಸಾಮಾನ್ಯ ಸರಳತೆಯಿಂದಾಗಿಯೂ ಅವರ ಕೃತಿಗಳು ಆಕರ್ಷಣೀಯವಾಗಿರುತ್ತವೆ. ಜೀವನದ ಕಹಿಸತ್ಯಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಬಹಿರಂಗಪಡಿಸಬಲ್ಲ ವಿಶೇಷತೆ ಅವರಲ್ಲಿದೆ. ಅವರ “ನನ್ನಕತೆ” ಎಂಬ ಆತ್ಮಚರಿತ್ರೆ ಬಲು ಪ್ರಸಿದ್ಧ ಕೃತಿ. ಪು¿ ವೀಂಟುಂ ಒ¿ುಕಿ, ಪಕ್ಷಿಯುಟೆ ಮಣಂ, ಅಮ್ಮು, ಮುಂತಾದವು ಅವರ ಕಥಾಸಂಕಲನಗಳು.

 	ವತ್ಸಲಾ, ಎನ್. ಪಿ. ಮುಹಮ್ಮದ್, ಕೆ.ಟಿ.ಮುಹಮ್ಮದ್, ಎನ್. ಮೋಹನನ್, ಜಿ. ವಿವೇಕಾನಂದನ್, ಜಿ.ಎನ್. ಪಣಿಕ್ಕರ್, ಇ.ವಾಸು, ಉಣ್ಣಿಕೃಷ್ಣನ್ ಪುತೂರ್, ರಾಜಲಕ್ಷ್ಮಿ, ಸಿ.ರಾಧಾಕೃಷ್ಣನ್, ಐ.ಕೆ.ಕೆ. ಎಂ., ಕೆ.ಎಲ್. ಮೋಹನವರ್ಮ, ಯು.ಎ. ಖಾದರ್, ಚೊವ್ವಲ್ಲೂರ್ ಕೃಷ್ಣನ್ ಕುಟ್ಟಿ ಮೊದಲದವರೂ ಮೂರನೆ ತಲೆಮಾರಿನ ಸಮರ್ಥ ಕಥೆಗಾರರೇ.

	ನಾಲ್ಕನೆ ತಲೆಮಾರಿನ ಸಣ್ಣಕತೆಗಾರರು: ಓ.ವಿ. ವಿಜಯನ್, ಕಾಕ್ಕನಾಡನ್, ಸಕ್ಕರಿಯ, ಎಂ.ಪಿ. ನಾರಾಯಣಪಿಳ್ಳೆ, ಎಂ. ಮುಕುಂದನ್, ಸೇತು, ಎಂ. ಸುಕುಮಾರನ್, ನಿರ್ಮಲ್‍ಕುಮಾರ್, ಪುನತ್ತಿಲ್, ಕುಞ್ಞಬ್ದುಲ್ಲ, ಟಿ.ಆರ್., ಪಟ್ಟತ್ತುವಿಳ ಕರುಣಾಕರನ್, ಪದ್ಮರಾಜನ್, ಮಾಡಂಪ್ ಕುಞÂ್ಞಕ್ಕುಟ್ಟನ್, ಆನಂದ್, ವೈಕ್ಕಂ ಚಂದ್ರಶೇಖರನ್ ನಾಯರ್, ಪೆರುಂಪಡವಂ ಶ್ರೀಧರನ್, ಅಕ್ಬರ್ ಕಕ್ಕಟ್ಟಿಲ್, ಟಿ.ವಿ. ಕೊಚ್ಚುಭಾವ, ಕೆ.ಎಲ್.ಮೋಹನವರ್ಮ, ಯು. ಏ. ಖಾದರ್, ಎನ್. ಎಸ್. ಮಾಧವನ್, ಉಣ್ಣಿಕೃಷ್ಣನ್ ತಿರುವ¿ುಯೋಡ್, ಎಂ.ಪಿ.ನಾರಾಯಣ ಪಿಳ್ಳೆ, ಕೆ.ಬಿ. ಶ್ರೀದೇವಿ, ಕೆ.ಕವಿತ ಪಿ.ಸುರೇಂದ್ರನ್, ಮುಂಡೂರ್ ಕ್ರುಷ್ಣನ್‍ಕುಟ್ಟಿ, ಮೊದಲಾದವರು. ಸಿ.ವಿ. ಶ್ರೀರಾಮನ್	ಅತ್ಯಲ್ಪ ಕಾಲದಲ್ಲೇ ಪುಂಖಾನುಪುಂಖವಾಗಿ ಶ್ರೇಷ್ಠ ಸಣ್ಣಕತೆಗಳನ್ನು ಪ್ರಕಟಿಸಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದವರು. 

	ಐದನೆಯ ಘಟ್ಟ: ಮಲಯಾಳ ಸಾಹಿತ್ಯದ ಪ್ರಸ್ತುತ ತಲೆಮಾರಿನಲ್ಲಿ ಸಾರಾಜೋಸೆಫ್‍ರಂತಹ ದೈವದತ್ತವಾದ ಪ್ರತಿಭೆಯುಳ್ಳ ಅನೇಕ ಮಂದಿ ಬರಹಗಾರರಿದ್ದಾರೆ. ಸಾರಾ ಅವರ ಕಾದಂಬರಿ ಹಾಗೂ ಕತೆಗಳು ಲಿಬರಲ್ ಸಿದ್ಧಾಂತವನ್ನು ಪ್ರತಿಪಾದಿಸುತ್ತವೆ. ಅಲ್ಲದೆ ತುಳಿಯಲ್ಪಟ್ಟ ಜನಾಂಗದ ಹೀನಾಯ ಸ್ಥಿತಿಯನ್ನು ಶಕ್ತಿಯುತವಾಗಿ ಚಿತ್ರಿಸುತ್ತವೆ. ಅಲಹಾಯುಟೆ ಪೆಣ್ಮಕ್ಕಳ್ ಎಂಬ ಅವರ ಕಾದಂಬರಿಯಲ್ಲಿ ಆನಿಯ ಕನಸಿನ ಲೋಕವನ್ನು ಅದ್ಭುತವಾಗಿ ಚಿತ್ರಿಸಲಾಗಿದೆ. ಸರಾ ಜೋಸೆಫ್ ಅವರು ಹಲವಾರು ಸಣ್ಣಕತೆಗಳನ್ನು ಬರೆದಿದ್ದಾರೆ.

	ಆನಂದ್ ಅವರು ತಮ್ಮ ಕಾದಂಬರಿ ಮತ್ತು ಸಣ್ಣಕತೆಗಳಲ್ಲಿ ಜೀವನದ ನೋವನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಅವರ ಮುಖ್ಯ ಕೃತಿಗಳು: ಮರುಭೂಮಿಕಳ್ ಉಂಟಾಕುನ್ನತ್ ಅ¾õÁಮತ್ತೆ ವಿರಲ್, ಹಾಗೂ ನಾಲಮತ್ತೆ ಆಣಿ

	ಮಲಯಾಳ ಕಥನಸಾಹಿತ್ಯದ ಸಮಕಾಲೀನ ಬರಹಗಾರರೆಂದರೆ ಸಕ್ಕರಿಯ, ಎನ್.ಎಸ್. ಮಾಧವನ್, ಗ್ರೇಸಿ, ಸಾರಾಥಾಮಸ್, ಬಿ.ಎಂ. ಸುಹ್ರಾ, ಗೀತಾಹಿರಣ್ಯನ್, ರೋಸ್ ಮೇರಿ. ಎ.ಎಸ್. ಪ್ರಿಯಾ, ಅಷ್ಟಮೂರ್ತಿ, ಕೆ.ಪಿ.ರಾಮನುಣ್ಣಿ ಮೊದಲಾದವರು. ಈ ಪ್ರತಿಯೊಬ್ಬ ಬರಹಗಾರರೂ ತಮ್ಮ ವಿಶಿಷ್ಟ ಹಾಗೂ ಅನುಪಮ ಶೈಲಿಯಿಂದ ಮಲಯಾಳ ಕಥನ ಸಾಹಿತ್ಯ ಪ್ರಕಾರವನ್ನು ಶ್ರೀಮಂತಗೊಳಿಸಿದ್ದಾರೆ.

	ಮಲಯಾಳ ಗದ್ಯ ಸಾಹಿತ್ಯ ವಿಮರ್ಶೆ: 	ಆಧುನಿಕ ಮಲಯಾಳ ಸಾಹಿತ್ಯದಲ್ಲಿ ವಿಮರ್ಶಾ ಗದ್ಯಕ್ಕೆ ಹೆಚ್ಚಿನ ಪ್ರಾಧಾನ್ಯ ಸಂದಿದೆ. ಸುಮಾರು 1930 ಮತ್ತು 1940ರ ದಶಕಗಳಲ್ಲಿ ಮುಖ್ಯವಾಗಿ ಮೂವರು ಸಾಹಿತ್ಯ ವಿಮರ್ಶಕರು ಹೆಚ್ಚು ಪ್ರಭಾವಿಗಳಾಗಿ ಕಾಣಿಸಿಕೊಂಡರು. ಅವರೇ ಎ. ಬಾಲಕೃಷ್ಣ ಪಿಳ್ಳೆ (1889-1960), ಜೋಸೆಫ್ ಮುಂಡಶ್ಶೇರಿ (1901-1977) ಮತ್ತು ಕುಟ್ಟೆಕೃಷ್ಣ ಮಾರಾರ್ (1900-1973).

	ಈ ತ್ರಿಮೂರ್ತಿಗಳ ವಿಮರ್ಶಾ ಬರಹಗಳಲ್ಲಿ ಹೆಚ್ಚಿನವು ವ್ಯಾಖ್ಯಾನ ಪರವಾದವುಗಳು. ಬಾಲಕೃಷ್ಣ ಪಿಳ್ಳೆ ಮತ್ತು ಮುಂಡಶ್ಶೇರಿ ಇವರು ರಶ್ಯನ್ ಸಹಿತ ಯೂರೋಪಿನ ಸಾಹಿತ್ಯದ ನೆಲೆಗಳಿಂದ ಪ್ರೇರಿತರಾದವರು. ಅದೇ ವೇಳೆ ಮಾರಾರ್ ವೈದಿಕ ಮತ್ತು ಸಂಸ್ಕøತ ಸಾಹಿತ್ಯಗಳ ನೆಲಗಟ್ಟಿನಿಂದ ಹೊರಟವರು.

	ಬಾಲಕೃಷ್ಣ ಪಿಳ್ಳೆ ಅವರ ಎಡಪ್ಪಳ್ಳಿ ರಾಘವನ್ ಪಿಳ್ಳೆ, ಚಂಙಂಪು¿ ಕೃಷ್ಣ ಪಿಳ್ಳೆ, ಜಿ. ಶಂಕರ ಕುರುಪ್ಪ್, ಕೆಡಾಮಂಗಲಂ ಪವ್ಪುಕ್ಕುಟ್ಟಿ ಅಂಥವರ ಕಾವ್ಯ ಕೃತಿಗಳನ್ನು, ಕೇರಳ ವರ್ಮ ಅವರ ಮಯೂರ ಸಂದೇಶಂ, ತಕ¿Â ಅವರ ತಲಯೋಡ್ (ತಲೆಬುರುಡೆ) ಇತ್ಯಾದಿ ಕೃತಿಗಳನ್ನು ವಿಸ್ತಾರವಾಗಿ ವಿಮರ್ಶಿಸಿದರು. ಅವರು ಫ್ರೆಂಚ್, ರಶ್ಯನ್, ಇಟಾಲಿಯನ್ ಸಾಹಿತ್ಯವನ್ನು ಧಾರಾಳವಾಗಿ ಓದಿದವರು. ಮಲಯಾಳ ಕೃತಿಗಳನ್ನು ಯೂರೋಪಿನ ಆ ಭಾಷೆಯ ಕೃತಿಗಳೊಂದಿಗೆ ಆಗಾಗ ಹೋಲಿಸಿ ತಮ್ಮ ಅಭಿಪ್ರಾಯ ಮಂಡಿಸುವುದು ಪಿಳ್ಳೆಯವರ ವೈಶಿಷ್ಟ್ಯ.

	ಸಾಹಿತ್ಯ ಪ್ರಸ್ಥಾನಗಳು ಮತ್ತು ಸಾಹಿತ್ಯ ಚಳವಳಿಯ ಬಗೆಗೆ ಪಿಳ್ಳೆ ಅವರಿಗೆ ಹೆಚ್ಚಿನ ಆಸ್ಥೆಯುತ್ತು. ಪ್ರಾಕ್ತನ ಶೋಧ ಮತ್ತು ಪ್ರಾಚೀನ ಚರಿತ್ರೆ, ಪುರಾಣ ಮತ್ತು ಮನಃಶಾಸ್ತ್ರೀಯ ವಿಶ್ಲೇಷಣೆ ಇತ್ಯಾದಿಗಳ ನೆಲಗಟ್ಟಿನಿಂದ ಅವರು ಮಲಯಾಳ ಸಾಹಿತ್ಯದಲ್ಲಿ ವಿಮರ್ಶೆಯ ಬೆಳಸನ್ನು ಹೆಚ್ಚಿಸಿದರು. ಹಲವೊಮ್ಮೆ ಅವರು ಮಿತಿ ಮೀರಿ ವಿಷಯಗಳನ್ನು ಸರಳಗೊಳಿಸುವ, ವರ್ಗೀಕರಿಸಿ ನೋಡುವ ಅಭ್ಯಾಸವಿರುವಂತೆ ಕಂಡರೂ, ಓದುಗರಿಗೆ ಕೃತಿಯನ್ನು ಹೊರ ನಿಟ್ಟಿನಿಂದ ಅಭ್ಯಸಿಸಲು ಸಹಾಯ ಮಾಡಿದ್ದಾರೆ. ಮಲಯಾಳ ಸಾಹಿತ್ಯಾಭಿರುಚಿಯನ್ನು ಆಧುನೀಕರಿಸುವಲ್ಲಿ ಮುಖ್ಯ ಪಾತ್ರ ಪಿಳ್ಳೆ ಅವರದೇ.

	ಭಾರತೀಯ ಕಾವ್ಯಮೀಮಾಂಸೆಯನ್ನು, ಪಾಶ್ಚಾತ್ಯ ಸಾಹಿತ್ಯ ವಿಮರ್ಶೆಯ ಒಳನೋಟಗಳ ಮೂಲಕ, ಸಮೀಪಿಸಿದವರು ಜೋಸೆಫ್ ಮುಂಡಶ್ಶೇರಿ ಪಾಶ್ಚಾತ್ಯ ಕಾವ್ಯ ತತ್ತ್ವಗಳ ನೆಲೆಯಿಂದ ಕುಮಾರನಾಶಾನ್ ಅಂಥವರ ಕೃತಿಗಳ ಯೋಗ್ಯತೆಯನ್ನು ಎತ್ತರದಲ್ಲಿ ಕಾಣಲು ಅವರು ದಾರಿ ತೆರೆದರು. ಮಾನದಂಡಂನಲ್ಲಿರುವ ಪ್ರಬಂಧಗಳ ಮೂಲಕ ಕಾಳಿದಾಸನ ಮೇಘದೂತಂನಂಥ ಪ್ರಾಚೀನ ಕಾವ್ಯಕೃತಿಗಳಲ್ಲಿ ತನಗಿರುವ ಆಸಕ್ತಿಯನ್ನು ಅವರು ತೋರ್ಪಡಿಸಿದರು. ಅವರ ರೂಪಭದ್ರತೆ ಸಿದ್ಧಾಂತ ಬಹುವಾದ ವಿವಾದಕ್ಕೆ ಒಡ್ಡಿಕೊಂಡಿತು. ಕೃತಿಕಾರನ ಘೋಷಿತ ಧ್ಯೇಯ ಧೋರಣೆಗಳಿಗೆ ಭಿನ್ನವಾಗಿ, ಕೃತಿಯೊಂದು ಕಲಾಕೃತಿಯ ನೆಲೆಯಲ್ಲಿ ಏನು ಎಂಬುದನ್ನಳೆಯುವುದೆ ಅವರಿಗೆ ಮುಖ್ಯವಾಯಿತು. ಕೃತಿಕಾರ ತನ್ನ ಯುಗದ ವಕ್ತಾರನಾಗಿರುತ್ತಾನೆ ಎಂದವರು ಪ್ರತಿಪಾದಿಸಿದರು. 1940ರ ದಶಕದ ಪ್ರಗತಿಪರ ಚಳವಳದ ವಕ್ತಾರನಾಗಿಯೂ ಮುಂಡಶ್ಶೇರಿ ಕಾಣಿಸಿಕೊಳ್ಳುತ್ತಾರೆ. ಅವರು ಕತೆಗಾರನಾಗಿ ಸ್ಥಾಪನೆಗೊಳ್ಳಲು ಬಯಸಿದರೂ ವಿಮರ್ಶಕರೆಂದೇ ಹೆಚ್ಚಿನ ಸ್ಥಾನ ಪಡೆದರು.

	ಇವರ ಬೆಂಬಲಿಗರಾಗಿ ಮೂಡಿ ಬಂದವರು ಎಂ.ಎನ್. ದೇವದಾಸ್, ಎನ್. ಗುಪ್ತನ್ ನಾಯರ್ ಮತ್ತು ಕೆ. ದಾಮೋದರನ್.

	ಮುಂಡಶ್ಶೇರಿ ಅವರಿಗೆ ಸರಿ ವಿರುದ್ಧ ನಿಲುಮೆಯವರು ಕುಟ್ಟಿಕೃಷ್ಣ ಮಾರಾರ್. ಅವರು ಭಾರತೀಯ ಸಾಹಿತ್ಯ ವಿಮರ್ಶಾ ಪದ್ಧತಿಯ ಕಡು ಪ್ರತಿಪಾದಕರು. ಅವರು ಆರಂಭದಲ್ಲಿ ಕವಿ ವಲ್ಲತ್ತೋಳ್ ಅವರ ಕೃತಿಗಳ ವ್ಯಾಖ್ಯಾನಕಾರರಾಗಿ ವಿಮರ್ಶಾ ಪಥವನ್ನು ತೆರೆದರು. ಪ್ರಗತಿಪರ ಚಳವಳದಲ್ಲಿ ತತ್ತರಿಸಿ ಹೋದ ಭಾರತೀಯ ಪರಂಪರಾಗತ ವಿಮರ್ಶಾ ರೀತಿಯನ್ನು ಕಾವ್ಯ ತತ್ತ್ವಗಳನ್ನು ಅವರು ಬಹುವಾಗಿ ಎತ್ತಿಹಿಡಿಯ ಹೊರಟರು. ಭಾರತ ಪರ್ಯಟನಂ ಎಂಬ ಕೃತಿಯಲ್ಲಿ ಅವರು ಮಹಾಭಾರತದಲ್ಲಿ ತಮಗಿರುವ ಆಳವಾದ ಪಾಂಡಿತ್ಯವನ್ನು ತೆರೆದಿಟ್ಟರಲ್ಲದೆ, ಸಾಹಿತ್ಯದಲ್ಲಿ ಆಧ್ಯಾತ್ಮಿಕ ಮತ್ತು ನೈತಿಕ ದ್ರವ್ಯಗಳು ಬಹುಮುಖ್ಯ ಎಂದವರು ಪ್ರತಿಪಾದಿಸಿದರು. ಕಲೆ ಬದುಕಿಗಾಗಿ ಎಂಬ ವಾದವನ್ನು ಅವರೊಪ್ಪದೆ, ಬದುಕೇ ಕಲೆಯಾಗಬೇಕು ಎಂದವರು ಆಗ್ರಹಿಸಿದರು. ಪಾಶ್ಚಾತ್ಯ ಸಾಹಿತ್ಯದ ಅವಗಾಹನೆ ಇಲ್ಲದೆ ಅವರು ದೇಶಿ ನೆಲೆಯಿಂದ ವಿಮರ್ಶಾ ಪ್ರಪಂಚವನ್ನು ಕಟ್ಟಿದರು. ಅವರು ವಾದ ಮಂಡನೆಯಲ್ಲಿ ತುಂಬ ಗಟ್ಟಿ ಎನಿಸಿಕೊಂಡವರು.
	
ಮಾರಾರ್ ಅವರ ಗಟ್ಟಿತನ, ಬಾಲಾಕೃಷ್ಣ ಪಿಳ್ಳೆ ಅವರ ಅವಗಾಹನ ವೈಶಾಲ್ಯ ಮತ್ತು ಮುಂಡಶ್ಶೇರಿ ಅವರ ಸಾಮಾಜಿಕ ಬದ್ಧತೆ ಇವೆಲ್ಲವನ್ನೂ ಮೈಗೂಡಿಸಿಕೊಂಡು ಕಾಣಿಸಿಕೊಂಡ ವಿಮರ್ಶಕ ಎಂ.ಪಿ.ಪಾಲ್. ಅವರು ಸಣ್ಣಕತೆ ಮತ್ತು ಕಾದಂಬರಿಗಳ ಮೇಲೆ ಮಾಡಿದ ವಿಮರ್ಶೆ ಇತರ ವಿಮರ್ಶಕರ ಮೇಲೆ ಪ್ರಭಾವ ಬೀರಿದ್ದು ಮಾತ್ರವಲ್ಲ ಕೃತಿಕಾರರ ಮೇಲೂ ಪರಿಣಾಮ ಮಾಡಿತು. ವಿಮರ್ಶಾ ಅಭಿಯಾನಕ್ಕೆ ಹೊರಡುವವರಲ್ಲಿ ಸೌಂದರ್ಯ ಪ್ರಜ್ಞೆ ಇರಬೇಕೆಂದು ಅವರು ತೋರಿಸಿಕೊಟ್ಟರು.

	ಮಲಯಾಳ ಗದ್ಯ ಸಾಹಿತ್ಯದ ಬೆಳಸಿನಲ್ಲಿ ಇನ್ನೂ ಅನೇಕ ವಿಮರ್ಶಕರ ಕೊಡುಗೆಯಿದೆ. ಇಪ್ಪತ್ತನೆ ಶತಮಾನದ 40-50ರ ದಶಕಗಳಲ್ಲಿ ಕಾಣಿಸಿಕೊಂಡ ಕೆ.ಆರ್.ಕೃಷ್ಣಪಿಳ್ಳೆ, ಆರ್. ನಾರಾಯಣ ಪಣಿಕ್ಕರ್, ಪಿ. ಶಂಕರನ್ ನಂಬಿಯೂರ್, ಶೂರನಾಡ್ ಕಾಞ್ಞನ್ ಪಿಳ್ಳೆ, ಗೋವಿಂದನ್ ಕುಟ್ಟಿ ನಾಯರ್, ಕೈನಿಕ್ಕರ ಕುಮಾರ ಪಿಳ್ಳೆ, ಎ.ಡಿ. ಹರಿಶರ್ಮ ಹೀಗೆ ಕೆಲವರನ್ನೇ ಇಲ್ಲಿ ಕಾಣಿಸಿದೆ.

	ಜೀವನಚರಿತೆ, ಮತ್ತು ವಿಮರ್ಶಾತ್ಮಕ ಅಧ್ಯಯನದಲ್ಲಿ ಪಿ.ಕೆ. ಪರಮೇಶ್ವರನ್ ನಾಯರ್, ಕೆ.ಎಂ. ಜಾರ್ಜ್, ಕೆ. ಭಾಸ್ಕರನ್ ನಾಯರ್, ಎನ್, ಕೃಷ್ಣ ಪಿಳ್ಳೆ, ಪಿ.ಕೆ. ಬಾಲಕೃಷ್ಣನ್ ಇವರು ಮುಖ್ಯರು.

	ಪ್ರವಾಸ ಸಾಹಿತ್ಯ ಬೆಳೆಸಿದವರಲ್ಲಿ ಕಾಣಿಸುವ ಮುಖ್ಯ ಹೆಸರುಗಳು ಕೆ.ಪಿ.ಕೇಶವ ಮೇನೋನ್ ಮತ್ತು ಎಸ್.ಕೆ. ಪೊಟ್ಟೆಕ್ಕಾಟ್.

	ಹಾಸ್ಯ ಸಾಹಿತ್ಯದಲ್ಲಿ ಹೆಚ್ಚಿನ ಸಿದ್ಧಿ ಗಳಿಸಿದವರು ಇ.ವಿ. ಕೃಷ್ಣಪಿಳ್ಳೆ (1895-1938) ಮತ್ತು ಎಂ.ಆರ್. ನಾಯರ್ -ಸಂಜಯನ್-(1903-1944). ಅನಂತರದ ಪೀಳಿಗೆಯಲ್ಲಿ ಎನ್. ಪಿ. ಚೆಲ್ಲಪ್ಪನ್ ನಾಯರ್, ಕೆ.ಪಿ. ರಾಜರಾಜ ವರ್ಮ ಮುಖ್ಯರು.

	ಆತ್ಮಚರಿತ್ರೆ ಸಾಹಿತ್ಯದಲ್ಲಿ ಕೀರ್ತಿಗಳಿಸಿದವರು ಕೆ.ಪಿ. ನಾರಾಯಣ ಪಿಳ್ಳೆ (ಸ್ಮರಣ ಮಂಡಲಂ 1938), ಇ.ವಿ. ಕೃಷ್ಣ ಪಿಳ್ಳೆ (ಜೀವಿತ ಸ್ಮರಣಗಳ್ 1941), ಕೆ.ಎಂ. ಪಣಿಕ್ಕರ್ (ಆತ್ಮಕಥ 1953), ಕೆ.ಪಿ. ಕೇಶವ ಮೇನೋನ್ (ಕ¿ôಞ್ಞ ಕಾಲಂ), ಮುಂಡಶ್ಶೇರಿ (ಕೊ¿Âಞ್ಞ ಇಲಕಳ್) ಮತ್ತು ಸಿ. ಕೇಶವನ್ (ಜೀವಿತಸಮರಂ).

	ವಿಡಂಬನ ಸಾಹಿತ್ಯದಲ್ಲಿ ಇ.ವಿ. ಕೃಷ್ಣ ಪಿಳ್ಳೆ (ಚಿರಿಯುಂ ಚಿಂತಯುಂ (ನಗು ಮತ್ತು ಚಿಂತನೆ) ಎರಡು ಭಾಗಗಳು -1936) ಎತ್ತಿದ ಕೈ. ವಿಡಂಬನೆಯಲ್ಲಿ ಪ್ರಾಚೀನರಾದ ಚೆರುಶ್ಶೇರಿ ಮತ್ತು ಕುಳಂಜನ್ ನಂಬಿಯಾರ್ ಅವರ ಪರಂಪರೆಯನ್ನು ಆಧುನಿಕ ಮಲಯಾಳ ಬರಹಗಾರರು ಬಹುವಾಗಿ ಎತ್ತಿಹಿಡಿದಿದ್ದಾರೆ.

	ಸಂಶೋಧನ ಸಾಹಿತ್ಯವನ್ನು ಗಣಿಸುವುದಾದರೆ ಉಳ್ಳೂರ್ ಪರಮೇಶ್ವರ ಅಯ್ಯರ್ ಅವರ ಉದ್ಗ್ರಂಥ ಕೇರಳ ಸಾಹಿತ್ಯ ಚರಿತ್ರಂ ಅನ್ನು ಎತ್ತಿ ಹೇಳಲೇಬೇಕು ಶ್ರೀಕಂಠೇಶ್ವರಂ ಪದ್ಮನಾಭ ಪಿಳ್ಳೆ ಅವರ ಮಲಯಾಳ ನಿಘಂಟು ಶಬ್ದತಾರಾವಲಿ ಸಾಟಿಯಿಲ್ಲದ ವಿದ್ವತ್ ಪರಿಶ್ರಮವಾಗಿದೆ.

	ಈಚಿನ ಕಾಲ ಘಟ್ಟದಲ್ಲಿ ವಿಜ್ಞಾನದ ಬರಹ, ಗಾಂಧಿವಾದ, ಮಾಕ್ರ್ಸ್‍ವಾದದಂಥ ರಾಜನೀತಿಯ ಬರಹಗಳ, ಧಾರಾಳ ಪ್ರಕಟವಾಗಿವೆ.

	ಪತ್ರಿಕಾರಂಗದಲ್ಲಿ ಸಾಹಿತ್ಯ ಚಟುವಟಿಕೆ ಎಡೆಬಿಡದೆ ಸಾಗಿ ಬಂದಿದೆ. ಮೊದಮೊದಲು ಮಾತೃಭೂಮಿ, ಮಲಯಾಳ ರಾಜ್ಯಂ, ಮೊದಲಾದ ಸಾಪ್ತಾಹಿಕಗಳು, ಮಂಗಳೋದಯಂ ಅಂಥ ಮಾಸಿಕಗಳು ಹಳೆಯ ಮತ್ತು ಹೊಸ ತಲೆಮಾರುಗಳ ಬರಹಗಾರರಿಗೆ ವೇದಿಕೆಯೊದಗಿಸಿದವು. ಪ್ರಗತಿಪರ ಚಳವಳ ಮತ್ತು ಸಾಹಿತ್ಯದ ರಾಜಕೀಯ ಆಗ್ರಹಗಳು 1950ರ ಈಚೆಗೆ ಪತ್ರಿಕಾ ಬರಹಗಳಿಗೆ ಪ್ರತ್ಯೇಕ ದೇಖಿ, ಕಾವುಗಳನ್ನು ನೀಡಿವೆ.	
	
ಭಾಷಾಬಾಂಧವ್ಯ ಕನ್ನಡ-ಮಲಯಾಳ

1. ಟಿ. ಉಬೈದರು ಸಾಹಿತ್ಯ ಕೃತಿಗಳ ಅನುವಾದಗಳ ಮೂಲಕ ಮಲಯಾಳ-ಕನ್ನಡ ಭಾಷಾಸಾಮರಸ್ಯಕ್ಕೆ-ಭದ್ರ ಬುನಾದಿ ಹಾಕಿದ ಮೊದಲಿಗರು. ಅವರು 1960ನೆ ಇಸವಿಗೂ ಮೊದಲೇ ಮಹಾಕವಿ ಕುಮಾರನ್ ಆಶಾನ ಅವರ ಮಹಾನ್ ಖಂಡಕಾವ್ಯ "ವೀಣಪೂ"ವನ್ನು ಮನೋಜ್ಞವಾಗಿ ಕನ್ನಡಕ್ಕೆ ಭಾಷಾಂತರಿಸಿ ಮಾಸ್ತಿಯವರ `ನವಜೀವನದಲ್ಲಿ ಪ್ರಕಟಿಸುವ ಮೂಲಕ ಆ ಕಾರ್ಯಕ್ಕೆ ನಾಂದಿ ಹಾಡಿದರು. ಅನಂತರ ಅವರು ಡಾ. ಶಿವರಾಮ ಕಾರಂತರ "ಮರಳಿ ಮಣ್ಣಿಗೆ" ಕಾದಂಬರಿಯನ್ನು ಮಲಯಾಳಕ್ಕೂ "ವಳ್ಳತ್ತೋಳ್ ಕವಿತೆಗಳ" ನ್ನು ಕನ್ನಡಕ್ಕೂ ಭಾಷಾಂತರಿಸಿದ್ದಾರೆ.

	2. ಕನ್ನಡದ ಗಾಳಿಯೂ ಸೋಂಕಿರದ ಮುಲಯಾಳಿ ಯುವಕ ನಾ. ಕಸ್ತೂರಿ ತಿರುವನಂತಪುರದಿಂದ ಮೈಸೂರಿಗೆ ತೆರಳಿ ಅಚ್ಚ ಕನ್ನಡ ಸಾಹಿತಿಯಾದ ಬಳಿಕ, ತಕ¿ôಯವರ `ಚೆಮ್ಮೀನ್ (ಸಿಗಡಿ-ಕೆಂಪುಮೀನು) ಕಾದಂಬರಿಯನ್ನೂ ರಂಟಿಟಙÐ¿ು (ಎರಡು ಬಳ್ಳ) ಕಾದಂಬರಿಯನ್ನೂ ಕನ್ನಡಕ್ಕೆ ಅನುವಾದಿಸಿದರು.

	3. ಕೊಡಗಿನಲ್ಲಿ ಜನಿಸಿ ಮೈಸೂರಿನಲ್ಲಿ ಅಧ್ಯಯನ ಮಾಡಿದ ಬಿ.ಕೆ. ತಿಮ್ಮಪ್ಪ¿ô ಕಾಸರಗೋಡಿನಲ್ಲಿ ಪ್ರಾಧ್ಯಾಪಕರಾದ ಬಳಿಕ ಮಲಯಾಳಂ ಕಲಿತು ತಕ¿ôಯವರ ಬೃಹತ್ ಕಾದಂಬಿ "ಏಣಿಯಮೆಟ್ಟಿಲುಗಳು", ಎಂ.ಟಿ. ವಸುದೇವನ್ ನಾಯರರ ಕಾದಂಬರಿ "ಕಾಲಂ" (ಕಾಲ), "ನಾಲುಕೆಟ್ಟ್" (ಚೌಕಟ್ಟಿನಮನೆ), ವೈಕ್ಕಂ ಮುಹಮ್ಮದ್ ಬಷೀರರ ಕಾದಂಬರಿ "ಬಾಲ್ಯಕಾಲಸಖಿ", "ಪಾತ್ತುಮನ ಆಡು" ಮತ್ತು ಮಲಯಾಟೂರರ ಕಾದಂಬರಿ "ಬೇರುಗಳ"ನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ.

	4. ತುಳುಭಾಷಾ ಸಂಶೋಧಕ ಕನ್ನಡವಿದ್ವಾಂಸ ವೆಂಕಟರಾಜ ಪುಣಿಂಚತ್ತಾಯರು ವೈಕ್ಕಂ ಮುಹಮ್ಮದ್ ಬಷೀರರ "ನನ್ನಜ್ಜನಿಗೊಂದಾನಿಯಿತ್ತು" ಎಂಬ ಒಂದೇ ಕಾದಂಬರಿಯ ಭಾಷಾಂತರದಿಂದ ಈ ಕ್ಷೇತ್ರದಲ್ಲಿ ಸುಪ್ರತಿಷ್ಠಿತರಾಗಿದ್ದಾರೆ.

	5. ಕವಿ ಕಯ್ಯಾರರು ತಮಗೆ ಮಲಯಾಳಂ ಓದಲು ಬಾರದಿದ್ದರೂ ಮಲಯಾಳಭಾಷೆಯಿಂದ ಕನ್ನಡಕ್ಕೆ "ಕುಮಾರನ್ ಆಶಾನ್ ಮೂರು ಕವಿತೆಗಳ"ನ್ನೂ ಮಲಯಾಳ ಸಾಹಿತ್ಯ ಚರಿತ್ರೆ"ಯನ್ನೂ ಭಾಷಾಂತರಿಸುವ ಕಷ್ಟತರ ಕಾರ್ಯವನ್ನು ಸಾಧಿಸಿದ್ದಾರೆ!

	6. ಎಂ.ಎಸ್.ಲಕ್ಷಣಾಚಾರ್, ಕೇರಳದ ಮಹಾನ್ ವ್ಯಕ್ತಿಯೂ ಜ್ಞಾನಿಯೂ ಆಗಿದ್ದ ಕೆ.ಪಿ.ಕೇಶವ ಮೆನನ್ ಅವರ ಆತ್ಮಕಥೆ "ಗತಿಸಿದ ಕಾಲ" ಎಂಬ ಬೃಹತ್ ಗ್ರಂಥವೂ ಪುನತ್ತಿಲ್ ಕುಞ್ಞಬ್ದುಲ್ಲ ಅವರ ಕಾದಂಬರಿ "ಸ್ಮಾರಕ ಶಿಲೆ"ಯೂ ಒಳಗೊಂಡಂತೆ ಅನೇಕ ಕೃತಿಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ.

	7. ಮೂರು ದಶಕಗಳಿಗೂ ಹಿಂದೆ ಪ್ರಕಟಗೊಂಡ "ಮಲಯಾಳಂ ಸಣ್ಣಕಥೆಗಳು" ಕಥಾಸಂಕಲನವನ್ನು ಅನುವಾದಿಸಿದವರು ಕೆ.ಎಸ್.ಕರುಣಾಕರನ್. ಆ ಅವಧಿಯಲ್ಲೇ ಅವರು ಕೆಲವು ಮಲಯಾಳ ಕಾದಂಬರಿಗಳನ್ನೂ ಕನ್ನಡಿಸಿ ಪ್ರಕಟಿಸಿದ್ದರು. ಅವರ ಇತ್ತೀಚೆನಗಿನ ಮಹತ್ವದ ಅನುವಾದ ಕೃತಿ ಎಂ.ಟಿ. ವಾಸುದೇವನ್ ನಾಯರ್‍ರ "ವಾರಾಣಸಿ" ಕಾದಂಬರಿ.

	8. "ದೇವರ ವಿಕರಾಳಗಳು" ಭಾಷಾಂತರಕ್ಕೆ ಕರ್ಣಾಟಕ ಸಾಹಿತ್ಯ ಅಕಾಡೆಮಿಯ ಭಾಷಾಂತರ ಪ್ರಶಸ್ತಿ ಪಡೆದಿರುವ ನಾ.ದಾ.ಶೆಟ್ಟಿ ಅವರು "ಆಶ್ವತ್ಥಾಮ", "ಬಾಲ್ಯಕಾಲಸ್ಮರಣಕಳ್", "ಮಹಾಕವಿ ಜಿ.ಶಂಕರ ಕುರುಪ್" ಮುಂತಾದ ಕೃತಿಗಳನ್ನೂ ಮಲಯಾಳದಿಂದ ಕನ್ನಡಕ್ಕೆ ತಂದಿದ್ದಾರೆ.

	9. "ನಾನಿನ್ನು ನಿದ್ರಿಸುವೆ" ಎಂಬ ಕಾದಂಬರಿಯನ್ನು ಮಲಯಾಳದಿಂದ ಭಾಷಾಂತರಿಸಿರುವ ಸಾರಾ ಅಬುಬಕ್ಕಲ್ ಕಮಲಾಸುರೈಯ, ಬಿ.ಎಂ.ಸುಹರಾ ಮೊದಲಾದವರ ಕೃತಿಗಳನ್ನೂ ಕನ್ನಡಿಸಿದ್ದಾರೆ.

	10. ಯುವ ಶಸ್ತ್ರ ವೈದ್ಯ ಅಶೋಕ್ ಕುಮಾರ್ ನೂರಾರು ಮಲಯಾಳ ಸಣ್ಣಕತೆಗಳನ್ನು ಕನ್ನಡ ನಿಯತತಕಾಲಿಕಗಳಲ್ಲಿ ಪ್ರಕಟಿಸಿರುವುದಲ್ಲದೆ "ಚಿದಂಬರಂ" ಎಂಬ ಅನುವಾದ ಕಥಾಸಂಕಲವನ್ನೂ ಪ್ರಕಟಿಸಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಮತ್ತು ನ್ಯಾಷನಲ್ ಬುಕ್‍ಟ್ರಸ್ಟಿನ ಮೂಲಕವೂ ಅವರ ಅನುವಾದಿತ ಕಥಾಸಂಕಲನಗಳು ಹೊರಬರಲು ದಿನಗಳೆಣಿಸುತ್ತಾ ಇವೆ. "ಒಂದು ಊರಿನ ಕಥೆ" ಎಂಬ ಕಾದಂಬರಿಯ ಅನುವಾದಕ್ಕಾಗಿ ಕೆ.ಕೆ.ನಾಯರ್ ಜೊತೆ ಕರ್ಣಾಟಕ ಸಾಹಿತ್ಯ ಅಕಾಡೆಮಿಯ ಶ್ರೇಷ್ಠ ಅನುವಾದ ಪ್ರಶಸ್ತಿಗೂ ಪಾತ್ರರಾದವರು ಡಾ. ಅಶೋಕ್ ಕುಮಾರ್.

	11. ನಿಯತ ಕಾಲಿಕಗಳಲ್ಲೇ ಹೆಚ್ಚು ಹೆಚ್ಚು ಅನುವಾದ ಕೃತಿಗಳನ್ನು ಪ್ರಕಟಿಸುತ್ತಿರುವವರು ಕೆ.ಕೆ. ಗಂಗಾಧರನ್.

	12. ಮೋಹನ ಕುಂಟಾರ್ ಅವರು ತಕ¿ô ಮತ್ತು ಉ¾ೂಬ್ ಅವರ ಪ್ರಸಿದ್ಧ ಕಾದಂಬರಿಗಳನ್ನೂ ಕೆಲವು ನವ್ಯಕವಿಗಳ ಕವನಗಳನ್ನೂ ಕನ್ನಡಕ್ಕೆ ಅನುವಾದಿಸಿರುವರು.

	13. ಪಾರ್ವತಿ ಜಿ. ಐತಾಳ್ ಅವರು, "ಜೀವಿಸಲು ಮರೆತ ಸ್ತ್ರೀ" ಎಂಬ ಕಾದಂಬರಿಯ ಅನುವಾದದ ಬಳಿಕ ಅನುವಾದ ಕ್ಷೇತ್ರದಲ್ಲಿ ನಾಗಾಲೋಟಾದಲ್ಲೇ ಮುಂದುವರಿಯುತ್ತಿರುವರು. ಆ ಬಳಿಕ ಅವರು ಎಂ. ಟಿ.ವಾಸುದೇವನ್ ನಾಯರ್‍ರ ಕಾದಂಬರಿ: "ದುರ್ಬೀಜ"ವನ್ನೂ ಕಥಾ ಸಂಕಲನ: "ಯುಗಾಂತ"ವನ್ನೂ "ಮಲಯಾಳದ ಹತ್ತು ಕಥೆಗಾರ್ತಿಯರು" ಎಂಬ ಕೃತಿಯನ್ನೂ ಪ್ರಕಟಿಸಿರುವರು. ಅಲ್ಲದೆ, ಎನ್.ಪಿ. ಮುಹಮ್ಮದ್ ಅವರ "ದೈವತ್ತಿಂಡೆ ಕಣ್ಣ್" ಮತ್ತು ಸುಕುಮಾರ್ ಅ¿ುಕ್ಕೋಡ್ ಅವರ "ತತ್ವಮಸಿ"ಯನ್ನೂ ಈ ಅಲ್ಪಾವಧಿಯಲ್ಲೇ ಭಾಷಾಂತರಿಸಿದ್ದಾರೆ!
 
	14. ಶ್ರೀಕೃಷ್ಣ ಭಟ್ಟ ಆರ್ತಿಕಜೆ ಅವರು ಎಸ್.ಕೆ.ಪೊಟ್ಟಿಕ್ಕಾಟ್ ಅವರ "ವಿಷಕನ್ನಿಕೆ" ಕಾದಂಬರಿಯನ್ನೂ ಎಸ್.ಕೆ.ನಾಯರ್ ಅವರ "ಅಯ್ಯಪ್ಪ" ಕಾದಂಬರಿಯನ್ನೂ ಕನ್ನಡಿಸಿದ್ದಾರೆ.

	15. ಎಸ್. ಗಂಗಾಧರಯ್ಯ ಅವರು ವೈಕ್ಕಂ ಮುಹಮ್ಮದ್ ಬಷೀರರ ಹತ್ತೊಂಬತ್ತು ಕತೆಗಳನ್ನು ಭಾಷಾಂತರಿಸಿ "ವೈಕ್ಕಂ ಕತೆಗಳು" ಎಂಬ ಹೆಸರಿನಲ್ಲಿ ಪ್ರಕಟಿಸಿದ್ದಾರೆ (ಇದಕ್ಕೆ ಕರ್ಣಾಟಕ ಸಾಹಿತ್ಯ ಅಕಾಡೆಮಿಯ ಶ್ರೇಷ್ಠ ಅನುವಾದ ಪ್ರಶಸ್ತಿ ದೊರೆತಿದೆ).

	16. "ಇಂದು ಲೇಖ" ಕನ್ನಡಾನುವಾದಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಸಿ.ರಾಘವನ್ ಅವರು ಆ ಬಳಿಕ ಎಂ.ಟಿ. ವಾಸುದೇವನ್ ನಾಯರ್‍ರ "ಭೀಮಾಯಣ"ವನ್ನೂ ಅದರ ಮೊದಲು ಪಿ.ಕೇಶವದೇವ್ ಅವರ, "ಚರಂಡಿಯಿಂದ" ಎಂಬ ಕೃತಿಯನ್ನೂ ಕನ್ನಡಕ್ಕೆ ಭಾಷಾಂತರಿಸಿರುವರು. ಇವರು ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ, ವರಕವಿ ದ.ರಾ.ಬೇಂದ್ರೆ, ನಿರಂಜನ, ಮಾಸ್ತಿ, ಮಿರ್ಜಿ ಅಣ್ಣಾರಾಯ, ರಾಬಹದ್ದೂರ್, ತೇಜಸ್ವಿ, ಭೈರಪ್ಪ, ಕಂಬಾರ ಮೊದಲಾದ ಕನ್ನಡ ಸಾಹಿತಿಗಳ ಕೃತಿಗಳನ್ನೂ ಅನಂತ ಮೂರ್ತಿಯವರ ಹೆಚ್ಚಿನ ಎಲ್ಲಾ ಕೃತಿಗಳನ್ನೂ ಮಲಯಾಳಕ್ಕೆ ಭಾಷಾಂತರಿಸಿದ್ದಾರೆ.

	17. "ಅಗ್ನಿಸಾಕ್ಷಿ" ಕಾದಂಬರಿ ಭಾಷಾಂತರಕ್ಕೆ "ಭಾರತೀಯ ಭಾಷಾಸಂಸ್ಥಾನ"ದ ಪ್ರಶಸ್ತಿಯನ್ನೂ "ಒಂದು ಊರಿನ ಕಥೆ" ಭಾಷಾಂತರಕ್ಕೆ ಕರ್ಣಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಪಡೆದಿರುವ ಕೆ.ಕೆ.ನಾಯರ್ ಮಹಾಕವಿ ಕುಮಾರನ್ ಆಶಾನ್ ಅವರ "ಚಿಂತಾಮಗ್ನಸೀತೆ" ಎಂಬ ಕಾವ್ಯಖಂಡವೂ ಒಳಗೊಂಡಂತೆ ಇಪ್ಪತ್ತು ಪುಸ್ತಕಗಳನ್ನೂ ಇನ್ನೂರರಷ್ಟು ಸಣ್ಣಕತೆಗಳನ್ನೂ ಮಲಯಾಳದಿಂದ ಕನ್ನಡಕ್ಕೆ ಭಾಷಾಂತರಿಸಿದ್ದರೂ ಪುಸ್ತಕ ರೂಪದಲ್ಲಿ ಪ್ರಕಟಗೊಂಡದ್ದು ಎಂಟು ಕೃತಿಗಳು ಮಾತ್ರ, ಉಳಿದದ್ದೆಲ್ಲವೂ ನಿಯತಕಾಲಿಕಗಳಲ್ಲೆ ಉಳಿದುಬಿಟ್ಟಿವೆ. ಇವರು ಕನ್ನಡದಿಂದ ಮಲಯಾಳಕ್ಕೆ ಅನುವಾದಿರುವ ಪ್ರಕಟಿತ ಕೃತಿಗಳು: ಫಣಿಯಮ್ಮ, ಚಂದ್ರಗಿರಿಯ ತೀರದಲ್ಲಿ, ರುಖಿಯಾ, ಕಾಮಯಜ್ಞ ಮತ್ತು ಬರ.

	18. ಎಂ. ರಾಮ ಅವರು "ಮಂದಾರಮಲ್ಲಿಗೆ" (ಸಮಗ್ರ ಮಲಯಾಳ ಸಾಹಿತ್ಯದ ಸಂಕ್ಷಿಪ್ತ ಸಂಕಲನ)ಯನ್ನು ಕನ್ನಡಕ್ಕೂ "ಮೂಕಜ್ಜಿಯ ಕನಸುಗಳ"ನ್ನು ಮಲಯಾಳಕ್ಕೂ ಅನುವಾದಿಸಿರುವರು.

ಭಾರತೀಯ ಜ್ಞಾನಪೀಠ ಪ್ರಶಸ್ತಿ ವಿಜೇತ ಮಲಯಾಳ ಸಾಹಿತಿಗಳು
 
ವರ್ಷ
ಸಾಹಿತಿ
ಕೃತಿ
ಪ್ರಕಾರ

1965

ಮಹಾಕವಿ ಜಿ. ಶಂಕರ ಕುರುಪ್

ಓಡಕು¿ಲ್

ಕಾವ್ಯ

1980

ಡಾ. ಎಸ್.ಕೆ. ಪೊಟ್ಟೆಕ್ಕಾಟ್	

ಒರು ದೇಶತ್ತಿಂಡೆ ಕಥ

ಕಾದಂಬರಿ

1984

ಡಾ. ತಕ¿ôಶಿವಶಂಕರ ಪಿಳ್ಳೆ	

ಕಯರ್	

ಕಾದಂಬರಿ

1986

ಡಾ. ಎಂ.ಟಿ. ವಾಸುದೇವನ್ ನಾಯರ್

ರಂಡಾಮೂ¿ಂ

ಕಾದಂಬರಿ

ಕೇಂದ್ರ ಸಾಹಿತ್ಯ  ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮಲಯಾಳ ಸಾಹಿತಿಗಳು
 
ವರ್ಷ         		     ಸಾಹಿತಿ 			     	      ಕೃತಿ     		  	 ಪ್ರಕಾರ                       
 
1955. 		ನಾರಾಯಣಪಣಿಕ್ಕರ್ ಆರ್,           	ಭಾಷಾಸಾಹಿತ್ಯಚರಿತ್ರಂ    ಸಾಹಿತ್ಯಚರಿತ್ರೆ                   1956.			ಚಾಕ್ಕೋ ಐ. ಸಿ.,                   	ಪಾಣಿನೀಯಪ್ರದ್ಯೋತಂ                      1957.			ತಕ¿ôಶಿವಶಂಕರಪಿಳ್ಳೆ              	ಚೆಮ್ಮೀನ್    ಕಾದಂಬರಿ                    1958.              	ಕೇಶವಮೆನೊನ್ ಕೆ.ಪಿ.,              	ಕ¿ôಞ್ಞಕಾಲಂ                   ಆತ್ಮಕಥೆ     
1959.              	ಉ¾ೂಬ್(ಕುಟ್ಟಿಕೃಷ್ಣನ್ ಪಿ. ಸಿ.),      	ಸುಂದರಿಗಳುಂ ಸುಂದರನ್ಮಾರುಂ   ಕಾದಂಬರಿ        1963.  		ಶಂಕರಕುರುಪ್ ಜಿ.,                 	ವಿಶ್ವದರ್ಶನಂ			  ಕಾವ್ಯ                      1964.		 	ಕೇಶವದೇವ್ ಪಿ.,                   	ಅಯಲ್ಕಾರ್  ಕಾದಂಬರಿ                           1965.			ಬಾಲಾಮಣಿಯಮ್ಮ,                 	ಮುತ್ತಶ್ಶಿ			         ಕಾವ್ಯ                          1966.			ಕುಟ್ಟಿಕೃಷ್ಣಮಾರಾರ್,     		       ಕಲಜೀವಿತಂತನ್ನೆ 		        ವಿಮರ್ಶೆ           1967.			ಕುಞÂ್ಞರಾಮನ್‍ನಾಯರ್ ಪಿ., 	       ತಾಮರತ್ತೋಣಿ			  ಕಾವ್ಯ                1967.			ಇಟಶೇರಿಗೋವಿಂದನ್ ನಾಯರ್     	ಕಾವಿಲೆಪಾಟ್ಟ್       		  ಕಾವ್ಯ
1970. 		ವಾಸುದೇವನ್‍ನಾಯರ್‍ಎಂ.ಟಿ.,       	ಕಾಲಂ ಕಾದಂಬರಿ                              1971.			ಶ್ರೀಧರಮೆನೊನ್ ವೈಲೋಪ್ಪಿಳ್ಳಿ,        	ವಿಟ				  ಕಾವ್ಯ                                  1972.  		ಪೆÇಟ್ಟೆಕ್ಕಾಟ್ ಎಸ್. ಕೆ.,               	ಒರುದೇಶತಿಂಡೆಕಥ  ಕಾದಂಬರಿ              1973.	 		ಅಕ್ಕಿತ್ತಂ ಅಚ್ಚುತನ್ ನಂಬೂದಿರಿ,       	ಬಲಿದರ್ಶನಂ			  ಕಾವ್ಯ                           1974.			ಗೋಪಾಲಕುರುಪ್ ವೆಣ್ಣಿಕ್ಕುಳಮ್,      	ಕಾಮಸುರಭಿ			  ಕಾವ್ಯ                    1974.			ಕುರುಪ್ ಓ.ಎನ್. ವಿ.,               	ಅಕ್ಷರಂ     			  ಕಾವ್ಯ                   
1976.			ಚೆರುಕಾಡ್,                          ಜೀವಿತಪ್ಪಾತ 			  ಆತ್ಮಕಥೆ          
1977.			ಲಲಿತಾಂಬಿಕ ಅಂತರ್ಜನಂ,    		ಅಗ್ನಿಸಾಕ್ಷಿ        		  ಕಾದಂಬರಿ
1978.			ಸುಗತಕುಮಾರಿ,                     	ರಾತ್ರಿಮ¿			  ಕಾವ್ಯ                      1979.			ಕೃಷ್ಣವಾರಿಯರ್ ಎನ್. ವಿ.,           	ವಳ್ಳತ್ತೋಳಿಂಡೆ ಕಾವ್ಯಶಿಲ್ಪಂ 	         ವಿಮರ್ಶೆ   
1980.			ಕುಞ್ಞಬ್ದುಲ್ಲ ಪುನತ್ತಿಲ್,              	ಸ್ಮಾರಕಶಿಲಕಳ್       		  ಕಾದಂಬರಿ               
1981.			ವಿಲಾಸಿನಿ,                         	ಅವಕಾಶಿಕಳ್			  ಕಾದಂಬರಿ                  1982.			ವಿ. ಕೆ. ಎನ್.,                      	ಪಯ್ಯನ್‍ಕಥಕಳ್			  ಸಣ್ಣಕತೆ             1983.			ಗುಪ್ತನ್‍ನಾಯರ್ ಎಸ್,              	ತಿರಞõÉ್ಞಡುತ್ತ ಪ್ರಬಂಧಙÐಳ್		  ವಿಮರ್ಶೆ   
1984. 		ಅಯ್ಯಪ್ಪಪಣಿಕ್ಕರ್,                     ಅಯ್ಯಪ್ಪಪಣಿಕ್ಕರುಟೆ ಕೃತಿಕಳ್  	  ಕಾವ್ಯ        
1985.			ಸುಕುಮಾರ್ ಅ¿ôಕ್ಕೋಡ್,    		ತತ್ವಮಸಿ    			  ಉಪನ್ಷತ್
1986.			ಲೀಲಾವತಿ ಎಂ.,                    	ಕವಿತಾಧ್ವನಿ			  ವಿಮರ್ಶೆ                  1987.			ಕೃಷ್ಣಪಿಳ್ಳೆ ಎನ್.,                    	ಪ್ರತಿಪಾತ್ರಂ ಭಾಷಣಭೇದಂ   	  ವಿಮರ್ಶೆ   
1988.			ರಾಧಾಕೃಷ್ಣನ್ ಸಿ.,                  	ಸ್ಪಂದಮಾಪಿನಿಕಳೇ ನಂದಿ           ಕಾದಂಬರಿ
1989. 		ಒಳಪ್ಪಮಣ್ಣ,                      	ನಿ¿ಲಾನ				  ಕಾವ್ಯ                    1990.			ವಿಜಯನ್ ಓ. ವಿ.,                  	ಗುರುಸಾಗರಂ   ಕಾದಂಬರಿ                     1991.			ಶಂಕುಣ್ಣಿನಾಯರ್,                	ಛತ್ರವುಂಚಾಮರವುಂ		  ವಿಮರ್ಶೆ           1992.			ಮುಕುಂದನ್ ಎಂ.,                 	ದೈವತ್ತಿಂಡೆವಿಕೃತಿಕಳ್  ಕಾದಂಬರಿ                      1993.			ಮುಹಮ್ಮದ್‍ಎನ್.ಪಿ.,  	             ದೈವತ್ತಿಂಡೆ ಕಣ್ಣ್        ಕಾದಂಬರಿ                     1994.			ವಿಷ್ಣುನಾರಾಯಣನ್ ನಂಬೂದಿರಿ          ಉಜ್ಜಯಿನಿಯಿಲೆ ರಾಪ್ಪಕಲುಕಳ್ 	  ಕಾವ್ಯ
1995.			ತಿಕ್ಕೊಟಿಯನ್                	      ಅರಙõïÐ ಕಾಣಾತ್ತನಟನ್		  ಆತ್ಮಕಥೆ                 1996.			ಪದ್ಮನಾಭನ್ ಟಿ.,          		ಗೌರಿ			         ಸಣ್ಣಕತೆ                             1997.			ಆನಂದ್,                          	ಗೋವರ್ಧನಂಡೆ ಯಾತ್ರಂಗಳ್ 
1998.			ಕೋವಿಲನ್,                       	ತಟ್ಟಕಂ                ಕಾದಂಬರಿ                      1999.			ಶ್ರೀರಾಮನ್ ಸಿ. ವಿ.,                 	ಶ್ರೀರಾಮಂಡೆ ಕಥಕಳ್		  ಸಣ್ಣಕತೆ                      2000.			ರಾಮಚಂದ್ರನ್ ಆರ್.,             	ಆರ್.ರಾಮಚಂದ್ರಂಡೆತೆರೆಞõÉ್ಞಟುತ್ತ      ಕಾವ್ಯ 
2001.			ಆಟೂರ್ ರವಿವರ್ಮ              	ಆಟೂರಿಂಡೆ ಕವಿತಕಳ್          	  ಕಾವ್ಯ                                    
2002.      	       ಶಂಕರಪಿಳ್ಳೆ ಕೆ. ಜಿ.,                	ಕೆ.ಜಿ.ಶಂಕರಪಿಳ್ಳಯುಟೆ		  ಕಾವ್ಯ                2003.			ಸಾರಾ ಜೋಸೆಫ್                     ಆಲಹಾಯುಟೆ ಪೆಣ್‍ಮಕ್ಕಳ್  	  ಕಾದಂಬರಿ
2004.			ಸಕ್ಕರಿಯ,                        	ಸಕ್ಕರಿಯಯುಟೆ ಕಥಕಳ್	         ಸಣ್ಣಕತೆ                  	                
 								           (ಪರಿಷ್ಕರಣೆ: ಕೆ.ಕೆ.ನಾಯರ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ